ತಮಿಳುನಾಡಿನ ಮಧುರೈ ಕಾಮರಾಜು ವಿಶ್ವವಿದ್ಯಾಲಯದ ಕಾಮಕಾಂಡ ಇತ್ತೀಚಿಗಷ್ಟೇ ದೇಶದ ಗಮನವನ್ನು ತನ್ನತ್ತ ಸೆಳೆದಿತ್ತು. ಅಲ್ಲಿನ ಅಸಿಸ್ಟೆಂಟ್ ಪ್ರೊಫೆಸರ್‌ ನಿರ್ಮಲಾ ದೇವಿ, ತಮ್ಮನ್ನು ಉನ್ನತ ಅಧಿಕಾರಿಗಳ ಲೈಂಗಿಕ ತೃಷೆ ತೀರಿಸಲು ಒತ್ತಡ ಹೇರುತ್ತಿರುವುದಾಗಿ, ವಿದ್ಯಾರ್ಥಿನಿಯರು ತಮ್ಮ

ದನಿಯೆತ್ತಿ , ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದ್ದ ಲೈಂಗಿಕ ಹಗರಣವನ್ನು ಬಯಲು ಮಾಡಿದರು. ಈ ಹಗರಣದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಸಿ.ಬಿ.ಐ. ಗೆ ಇದರ ತನಿಖೆ ನಡೆಸಲು ಅನುಮತಿ ನೀಡಲಾಯಿತು. ಇದಲ್ಲದೆ ರಾಜ್ಯದ ರಾಜ್ಯಪಾಲರಾದ ಭನ್ವಾರಿಲಾಲ್ ಪುರೋಹಿತ್ ಒಂದು ಪ್ರತ್ಯೇಕ ಕಮಿಟಿಯನ್ನು ನೇಮಿಸಿದ್ದಾರೆ.

ಈ ವಿಷಯದ ಕುರಿತಾಗಿ ಕಳೆದ ಮಂಗಳವಾರ ಪತ್ರಿಕಾಗೋಷ್ಠಿಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ವಿವಿಧ ಪತ್ರಿಕೆಗಳ ವರದಿಗಾರರು, ಪತ್ರಕರ್ತರು ಒಂದೆಡೆ ಸೇರಿದ್ದರು. ಪತ್ರಿಕಾಗೋಷ್ಠಿಯಲ್ಲಿ ವರದಿಗಾರರ ಪ್ರಶ್ನೆಗಳಿಗೆ ಉತ್ತರಿಸುವ ಸಂದರ್ಭದಲ್ಲಿ ರಾಜ್ಯಪಾಲರು ಮಾಡಿದ ಒಂದು ಅನುಚಿತ ವರ್ತನೆ ಒಮ್ಮೆಲೆ ಎಲ್ಲರನ್ನೂ ಮೂಕರನ್ನಾಗಿಸಿತು.

ದಿ ವೀಕ್ ಮ್ಯಾಗಜೀನ್ ನ ಹಿರಿಯ ಪತ್ರಕರ್ತೆ ಲಕ್ಷ್ಮೀ ಸುಬ್ರಹ್ಮಣ್ಯನ್ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರ ನೀಡುವ ಬದಲು, ಎಲ್ಲರ ಮುಂದೆ ಆಕೆಯ ಕೆನ್ನೆ ಸವರಿ ರಾಜ್ಯಪಾಲರು ಮತ್ತೊಂದು ಸಮಸ್ಯೆಗೆ ಕಾರಣವಾದರು. ರಾಜ್ಯಪಾಲರ ಈ ಅನಿರೀಕ್ಷಿತ ವರ್ತನೆಗೆ ಹಿರಿಯ ಪತ್ರಕರ್ತೆಯು ಬೇಸರಪಟ್ಟು , ತಮ್ಮ ಅಳಲನ್ನು ವ್ಯಕ್ತಪಡಿಸಿ,

ಉನ್ನತ ಸ್ಥಾನದಲ್ಲಿರುವವರು ಈ ರೀತಿ ವರ್ತಿಸಬಾರದೆಂದು ಹೇಳಿದ್ದರು. ರಾಜ್ಯಪಾಲರ ವಿರುದ್ಧ ರಾಜ್ಯದ ಪತ್ರಕರ್ತರೆಲ್ಲ ಕುಪಿತರಾಗಿ, ಅವರ ವಿರುದ್ಧ ದೂರು ದಾಖಲಿಸಿದ್ದಾರೆ.ವಿಷಯದ ತೀವ್ರತೆಯ ಅರಿವಾದ ರಾಜ್ಯಪಾಲರು ಮೀಡಿಯಾ ಮುಂದೆ ತನ್ನ ವರ್ತನೆಗೆ ಕ್ಷಮೆಯಾಚಿಸಿ, ಆಕೆ ತನ್ನ

ಮೊಮ್ಮಗಳಿದಂತೆ, ಕೇವಲ ವಾತ್ಸಲ್ಯದಿಂದ ಆಕೆಯ ಕೆನ್ನೆ ಸವರಿದ್ದಾಗಿ ಹೇಳಿದ್ದಾರೆ. ಅಲ್ಲದೆ ಪತ್ರಕರ್ತೆಗೆ ಇಮೇಲ್ ಮೂಲಕ ಖುದ್ದಾಗಿ ಕ್ಷಮಾಪಣೆ ಕೋರಿ ವಿಷಯಕ್ಕೆ ಅಂತ್ಯ ಹಾಡಿದ್ದಾರೆ. ಕ್ಷಮಾಪಣೆ ಸ್ವೀಕರಿಸಿದ ಲಕ್ಷ್ಮೀ ಸುಬ್ರಹ್ಮಣ್ಯನ್ , ಏನೇ ಆಗಲಿ ರಾಜ್ಯಪಾಲರ ವರ್ತನೆ ಮನಸ್ಸಿಗೆ ಘಾಸಿಯುಂಟು ಮಾಡಿದೆ ಎಂದು ಟ್ವಿಟರ್ ನಲ್ಲಿ ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here