ತಮಿಳು ನಾಡಿನಲ್ಲಿ ಇಂದು ಒಂದೇ ದಿನದಲ್ಲಿ ಹೊಸದಾಗಿ 102 ಕೊರೊನಾ ಪ್ರಕರಣಗಳು ದಾಖಲಾಗಿವೆ. ಈ ವಿಷಯವನ್ನು ಅಲ್ಲಿನ ಹೆಲ್ತ್ ಸೆಕ್ರಟರಿಯಾದ ಬೀಲಾ ರಾಜೇಶ್ ಅವರು ತಿಳಿಸಿದ್ದಾರೆ. ಒಂದು ಕೊರೊನಾ ವಿಷಯವಾಗಿ ನಡೆಸಿದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಇಂದು ಒಂದೇ ದಿನದಲ್ಲಿ ತಮಿಳುನಾಡಿನಲ್ಲಿ ಹೊಸದಾಗಿ 102 ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಇದರೊಂದಿಗೆ ತಮಿಳುನಾಡಿನಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 411 ಕ್ಕೆ ಏರಿಕೆಯಾಗಿದೆ ಎಂಬ ಮಾಹಿತಿಯನ್ನು ಅವರು ನೀಡಿದ್ದಾರೆ.

ಒಂದು ಪತ್ತೆಯಾಗಿರುವ 102 ಹೊಸ ಕೊರೊನಾ ಪ್ರಕರಣದಲ್ಲಿ 100 ದೆಹಲಿಯಲ್ಲಿ ನಡೆದಂತಹ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಬಂದಿದೆ ಎನ್ನಲಾಗಿದೆ. ತಮಿಳುನಾಡಿನಲ್ಲಿ ಪತ್ತೆಯಾಗಿರುವ 411 ಕೊರೊನಾ ಪ್ರಕರಣಗಳಲ್ಲಿ 364 ಸೋಂಕಿತರು ದೆಹಲಿಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎನ್ನಲಾಗಿದೆ. ಅಲ್ಲದೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಒಟ್ಟು 1200 ಜನರನ್ನು ಕ್ವಾರಂಟೈನ್ ನಲ್ಲಿ ಇಡಲಾಗಿದೆ ಎಂದು ಬೀಲಾ ರಾಜೇಶ್ ಅವರು ವಿವರಗಳನ್ನು ನೀಡಿದ್ದಾರೆ.

ಇದಕ್ಕೆ ಮೊದಲು ಮಾತನಾಡಿರುವ ತಮಿಳು ನಾಡಿನ ಆರೋಗ್ಯ ಸಚಿವರಾದ ಸಿ.ವಿಜಯ ಭಾಸ್ಕರ್ ಅವರು ರಾಜ್ಯದಲ್ಲಿ ಒಟ್ಟು ಕೊರೊನಾ ಪ್ರಕರಣಗಳ ಸಂಖ್ಯೆ 411 ಕ್ಕೆ ಏರಿದ್ದು, 1580 ಕೊರೊನಾ ಸೋಂಕಿತ ಮತ್ತು ಶಂಕಿತರನ್ನು ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ದಾಖಲಿಸಲಾಗಿದೆ ಮತ್ತು ಅವರಿಗೆ ಸೂಕ್ತ ಚಿಕಿತ್ಸೆಯನ್ನು ಕೂಡಾ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here