ಉತ್ತರ ಪ್ರದೇಶದ ಮುಖ್ಯ ಮಂತ್ರಿ ಯೋಗಿ ಆದಿತ್ಯ ನಾಥ್ ಅವರು ಮತ್ತೊಂದು ಹೊಸ ಹೆಜ್ಜೆ ಇಡಲು ಸಜ್ಜಾಗಿದ್ದಾರೆ. ಈಗಾಗಲೇ ಅಲಹಾಬಾದ್ ಹಾಗೂ ಫೈಜಾ ಬಾದ್ ನ ನಂತರ ವಿಶ್ವವಿಖ್ಯಾತ ತಾಜ್ ಮಹಲ್ ಇರುವ ಆಗ್ರ ನಗರದ ಹೆಸರನ್ನು ಬದಲಿಸುವ ಅವರ ಸರ್ಕಾರ ಚಿಂತನೆಯನ್ನು ನಡೆಸಿದೆ ಎನ್ನಲಾಗಿದೆ. ಇದಕ್ಕೆ ಮೊದಲು ರಾಜ್ಯ ಸರ್ಕಾರವು ಅಲಹಬಾದ್ ನಗರದ ಹೆಸರನ್ನು ಪ್ರಯಾಗ್‍ರಾಜ್ ಎಂದೂ, ಫೈಜಾಬಾದನ್ನು ಅಯೋಧ್ಯೆ ಹಾಗೂ ಮೊಘಲ್ಸರಾಯ್ ಹೆಸರನ್ನು ದೀನ್ ದಯಾಳ್ ಉಪಾಧ್ಯಾಯ ನಗರ ಎಂದು ಬದಲಿಸಿತ್ತು. ನಗರಗಳ ಹೆಸರು ಬದಲಿಸುವ ಕಾರ್ಯ ಅಲ್ಲಿಗೆ ಮುಗಿಯದೆ ಅದು ಈಗ ಆಗ್ರಾ ದತ್ತ ಕೂಡಾ ನಡೆದಿದೆ.

ಅಲ್ಲಿನ ಸರ್ಕಾರ ಈಗ ಆಗ್ರಾ ಹೆಸರನ್ನು ಅಗ್ರವಾನ್ ಎಂದು ಬದಲಿಸಲು ಸಜ್ಜಾಗುತ್ತಿದೆ ಎನ್ನಲಾಗಿದೆ. ಈ ವಿಷಯವಾಗಿ ಅಂದರೆ ಹೆಸರು ಬದಲಿಸುವ ಪ್ರಕ್ರಿಯೆಯ ಭಾಗವಾಗಿ ಅಂಬೇಡ್ಕರ್ ವಿಶ್ವವಿದ್ಯಾಲಯದ ಇತಿಹಾಸ ವಿಭಾಗಕ್ಕೆ ಸಂಶೋಧನೆ ನಡೆಸಲು ಮತ್ತು ಈ ನಗರದ ಹೆಸರಿನ ಐತಿಹಾಸಿಕ ಅಂಶವನ್ನು ಸೂಕ್ತವಾಗಿ ವಿಶ್ಲೇಷಿಸಲು ಆದೇಶವೊಂದನ್ನು ಕೂಡಾ ಹೊರಡಿಸಿದ್ದು, ಆ ಕಾರ್ಯ ಕೂಡಾ ಆರಂಭವಾಗಿದೆ. ಈ ಬಗ್ಗೆ ಇತಿಹಾಸ ವಿಭಾಗದ ಮುಖ್ಯಸ್ಥರಾಗಿರುವ ಪ್ರೊ.ಸುಗಮ್ ಸರ್ಕಾರದಿಂದ ಬಂದಿರುವ ಆದೇಶದ ಬಗ್ಗೆ ತಿಳಿಸಿದ್ದಾರೆ.

ಅಗ್ರವಾನ್ ಎಂಬುದು ತಾಜ್ ಮಹಲ್ ಇರುವ ನಗರದ ಹೆಸರೆಂದು ಇತಿಹಾಸಕಾರರ ನಂಬಿಕೆಯಾಗಿದ್ದು, ಕಾಲಾಂತರದಲ್ಲಿ ಈ ಅಗ್ರವಾನ್ ಆಗ್ರಾ ಹೇಗಾಯಿತು ಎಂಬುದನ್ನು ಅಧ್ಯಯನದಿಂದ ಪುರಾವೆ ಹುಡುಕುವ ಆದೇಶ ನೀಡಲಾಗಿದೆ. ಆದರೆ ತಾಜ್ ಮಹಲ್ ಇರುವ ನಗರ ಆಗ್ರಾ ಎಂದೇ ವಿಶ್ವವಿಖ್ಯಾತವಾಗಿರುವ ಕಾರಣ ಹಲವರು ಹೆಸರು ಬದಲಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here