ಕರುನಾಡ ಚಕ್ರವರ್ತಿ ಡಾ ಶಿವರಾಜ್ ಕುಮಾರ್  ಮತ್ತು ನಿರ್ದೇಶಕ ಎ ಹರ್ಷ ಕಾಂಬಿನೇಷನ್ ಅಂದ್ರೆ ಅಲ್ಲೊಂದು ಭರ್ಜರಿ ಸಿನಿಮಾ‌ ಖಚಿತ ಅನ್ನೋ ನಿರೀಕ್ಷೆ ಸಹಜವಾಗಿಯೇ ಹುಟ್ಟಿಕೊಂಡು ಬಿಡುತ್ತೆ ಅನ್ನೋದು ನಿಜ. ಅದಕ್ಕೆ ಕಾರಣ ಏನು ಅನ್ನೋದಾದ್ರೆ ಈಗಾಗಲೇ ಈ ಇಬ್ಬರ ಕಾಂಬಿನೇಷನ್ ನಲ್ಲಿ ಎರಡು ಭರ್ಜರಿ ಸಿನಿಮಾಗಳು ಸೂಪರ್ ಹಿಟ್ ಆಗಿ ಜನರನ್ನು ರಂಜಿಸಿದೆ. ಈಗ ಈ ಜೋಡಿ ಮತ್ತೊಮ್ಮೆ ಜೊತೆಯಾಗಿದೆ ಎಂದ ಮೇಲೆ ಮತ್ತೊಂದು ಅದ್ಭುತ ಸಿನಿಮಾ ನಮ್ಮ  ಮುಂದೆ ಬರಲು ಸಿದ್ಧವಾಗಿದೆ‌. ಅದೇ ಭಜರಂಗಿ-2. ಸಾಕಷ್ಟು ದಿನಗಳಿಂದ ಸ್ಯಾಂಡಲ್ ವುಡ್ ನಲ್ಲಿ ಸದ್ದು ಮಾಡುತ್ತಿರುವ ಭಜರಂಗಿ-2 ಸಿನಿಮಾ ತಂಡದಿಂದ ಎಕ್ಸೈಟಿಂಗ್ ಸುದ್ದಿಯೊಂದು ಹೊರಗೆ ಬಂದಿದೆ‌.

ಬಹುನಿರೀಕ್ಷಿತ ಸಿನಿಮಾ ಭಜರಂಗಿ-2 ಸಿನಿಮಾದ ಫಸ್ಟ್ ಲುಕ್ ಟೀಸರ್ ಅನ್ನು ಶಿವಣ್ಣನವರ ಹುಟ್ಟು ಹಬ್ಬಕ್ಕೆ ಅನೌನ್ಸ್ ಮಾಡಲಾಗುತ್ತಿದ್ದು, ಫಸ್ಟ್ ಲುಕ್ ಟೀಸರ್  ನಿರೀಕ್ಷೆ ಮೀರಿ ಅದ್ಭುತವಾಗಿ ಮೂಡಿ ಬಂದಿದೆ ಎಂದಿದ್ದಾರೆ ನಿರ್ದೇಶಕ ಎ.ಹರ್ಷ ಅವರು‌. ಫಸ್ಟ್ ಲುಕ್ ಟೀಸರ್  ನ ಮತ್ತೊಂದು ವಿಶೇಷ ಏನೆಂದರೆ ಈ ಟೀಸರ್ ಮೂಲಕ ಭಜರಂಗಿ-2 ಸಿನಿಮಾದ ಇನ್ನುಳಿದ ಕಲಾವಿದರ ಅನೌನ್ಸ್ ಕೂಡಾ ಆಗಲಿದೆ ಎನ್ನಲಾಗಿದೆ. ಫಸ್ಟ್ ಲುಕ್ ಟೀಸರ್  ನಲ್ಲಿ ಶಿವಣ್ಣ ಅವರ ಲುಕ್ ಹೇಗಿರಲಿದೆ ಎಂಬುದನ್ನು ಈಗಲೇ ಯಾರಿಗೂ ಕೂಡಾ ಊಹಿಸುವುದು ಅಸಾಧ್ಯವೆಂದೂ, ಶಿವಣ್ಣ ಅವರ ಹುಟ್ಟು ಹಬ್ಬಕ್ಕೆ ಇದು ಅಭಿಮಾನಿಗಳಿಗೊಂದು ಭರ್ಜರಿ ಉಡುಗೊರೆಯಾಗಲಿದೆ ಎಂದಿದ್ದಾರೆ ನಿರ್ದೇಶಕ ಹರ್ಷ ಅವರು.

ಈ ಸುದ್ದಿ ನೀಡುವ ಮೂಲಕ ಅವರು ಅಭಿಮಾನಿಗಳಲ್ಲಿ ಸಿನಿಮಾ ಬಗ್ಗೆ ಮತ್ತಷ್ಟು ಕುತೂಹಲವನ್ನು ಹುಟ್ಟು ಹಾಕಿದ್ದಾರೆ. ಈಗಾಗಲೇ ಸಿನಿಮಾದ ಒಂದೆರಡು ಪೋಸ್ಟರ್ ಗಳು ಬಿಡುಗಡೆ ಆಗಿದ್ದು ಅವು ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಸಂಚಲನವನ್ನು ಹುಟ್ಟು ಹಾಕಿದೆ. ಪೋಸ್ಟರ್ ಗಳಿಂದಲೇ ಹೊಸ ಅಲೆಯನ್ನು ಎಬ್ಬಿಸಿರುವ ಭಜರಂಗಿ-2 ಮೇಕಿಂಗ್ ಕನ್ನಡ ಚಿತ್ರರಂಗದ ಟ್ರೆಂಡ್ ಹುಟ್ಟು ಹಾಕುವಂತಹ  ಸಿನಿಮಾ ಇದಾಗಲಿದ್ದು  ಅದ್ಭುತವಾಗಿ ಮೂಡಿ ಬಂದಿದೆ ಎಂದು ಕೆಲವು ಮೂಲಗಳಿಂದ ತಿಳಿದು ಬಂದಿದೆ‌. ಭಜರಂಗಿ-2 ಸಿನಿಮಾ ಚಿತ್ರೀಕರಣಕ್ಕಾಗಿ
ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ ನಲ್ಲಿ ಮತ್ತು ಮೋಹನ್ ಬಿ ಕೇರ್ ಸ್ಟುಡಿಯೋದಲ್ಲಿ ಹಾಕಿದ್ದ ಬಹುಕೋಟಿ ವೆಚ್ಚದ ಸೆಟ್ ಗಳು ಸಿನಿಮಾದ ಗತ್ತನ್ನು ಸಾರುವಂತೆ ಇತ್ತು.

ಅವುಗಳ ಫೋಟೋಗಳು ಹೊರಗೆ ಬಂದಾಗ ಜನ ಅದನ್ನು ನೋಡಿ ಅದ್ಭುತ ಎನ್ನುವಂತೆ ಉದ್ಗಾರ ಮಾಡಿದ್ದು ಸುಳ್ಳಲ್ಲ.‌ ಒಂದು ಜನಪ್ರಿಯ ಆಡಿಯೋ ಸಂಸ್ಥೆ ಚಿತ್ರದ ಆಡಿಯೋ ಹಕ್ಕು ಪಡೆಯಲು ಹಾತೊರೆದಿದೆ ಎನ್ನಲಾಗಿದೆ. ಈಗಾಗಲೇ ವಜ್ರಕಾಯ ಹಾಗೂ ಭಜರಂಗಿ ಮೂಲಕ ಜನರನ್ನು ರಂಜಿಸಿದ್ದ ಹರ್ಷ ಮತ್ತು ಶಿವಣ್ಣ ಅವರ ಕಾಂಬಿನೇಷನ್ ಈ ಬಾರಿ ಭಜರಂಗಿ-2 ರ ಮೂಲಕ ಬೆಳ್ಳಿತೆರೆಯ ಮೇಲೊಂದು ಜಾದೂ ಮಾಡಲು ಸಿದ್ಧರಾಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here