ಎರಡನೇ ಟೆಸ್ಟ್ ಕ್ರಿಕೆಟ್ ನಲ್ಲಿ ಭಾರತ ಹೀನಾಯ ಸೋಲನ್ನು ಎದುರಿಸಿದೆ‌.‌ ನ್ಯೂಜಿಲೆಂಡ್‌ 7 ವಿಕೆಟ್ ಗಳಿಂದ ಪಂದ್ಯವನ್ನು ಗೆಲ್ಲುವುದರ ಜೊತೆಗೆ ನ್ಯೂಜಿಲೆಂಡ್‌ ಸರಣಿಯನ್ನು ಕೂಡಾ ಕ್ಲೀನ್ ಸ್ವೈಪ್ ಮಾಡಿ ಹೋಗಿದೆ‌. ಭಾರತದ ಈ ರೀತಿಯ ಪ್ರದರ್ಶನವನ್ನು ನಿರೀಕ್ಷೆ ಮಾಡಿರದ ಕ್ರಿಕೆಟ್ ಅಭಿಮಾನಿಗಳು, ತಂಡದ ಪ್ರದರ್ಶನದಿಂದ ಅಸಮಾಧಾನಗೊಂಡಿದ್ದು, ಸ್ವದೇಶದಲ್ಲಿ ಹುಲಿ, ವಿದೇಶದಲ್ಲಿ ಇಲ್ಲಿ ಎನ್ನುವ ಸಾಲನ್ನು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಟೀಂ ಇಂಡಿಯಾ ನೀಡಿರುವ ಕೆಟ್ಟ ಪ್ರದರ್ಶನಕ್ಕೆ ತಮ್ಮ ಸಿಟ್ಟನ್ನು ಹೊರ ಹಾಕಿದ್ದಾರೆ.

90 ರನ್ ಗಳಿಗೆ 6 ವಿಕೆಟ್ ಗಳನ್ನು ಭಾರತ ಕಳೆದುಕೊಂಡಿತ್ತು. ಆದರೆ ಇಂದು ಭಾರತ 34 ರನ್ನ ಗಳನ್ನು ಪೇರಿಸಿ 46 ಓವರ್ ಗಳಲ್ಲಿ 124 ರನ್ ಗಳನ್ನು ಪಡೆದು ಆಲೌಟ್ ಆಗಿದೆ. 132 ರನ್ ಗಳ ಸುಲಭದ ಗುರಿಯನ್ನು ತಲುಪುವಲ್ಲಿ ನ್ಯೂಜಿಲೆಂಡ್‌ ಯಶಸ್ವಿಯಾಗಿದೆ. ನ್ಯೂಜಿಲೆಂಡ್ 32.5 ಓವರ್ ಗಳಲ್ಲಿ 3 ವಿಕೆಟ್ ಗಳ ನಷ್ಟಕ್ಕೆ ತನ್ನ ಗುರಿಯನ್ನು ಸಾಧಿಸಿ ಬಿಟ್ಟಿತು. ನ್ಯೂಜಿಲೆಂಡ್ ನ ತಂಡದಲ್ಲಿ ಆರಂಭಿಕ ಆಟಗಾರರಾದ ಟಾಮ್ ಲಾಥಮ್ ಮತ್ತು ಟಾಮ್ ಬ್ಲುಂಡೆಲ್ ಅವರು ಮೊದಲ ವಿಕೆಟಿಗೆ 28 ಓವರ್ ಗಳಲ್ಲಿ 103 ರನ್ ಗಳ ವರೆಗೆ ಜೊತೆ ಆಟ ಆಡಿದರು. ಟಾಮ್ ಲಾಥಮ್ 52(74 ಎಸೆತ, 10 ಬೌಂಡರಿ) ಹೊಡೆದರೆ ಬ್ಲುಂಡೆಲ್ 55 ರನ್(113 ಎಸೆತ, 8 ಬೌಂಡರಿ, 1 ಸಿಕ್ಸರ್) ಹೊಡೆದ ನಂತರ ಔಟಾಗಿ ಹೊರ ಬಂದರು.

ಇನ್ನು ಎರಡನೇ ಇನ್ನಿಂಗ್ಸ್ ನಲ್ಲಿ ವೇಗದ ಬೌಲರ್ ಗಳಾದ ಟ್ರೆಂಟ್ ಬೌಲ್ಟ್ 4 ವಿಕೆಟ್ ಪಡೆದರೆ, ಟಿಮ್ ಸೌಥಿ 3 ವಿಕೆಟ್ ಕಿತ್ತು ಭಾರತದ ಬ್ಯಾಟಿಂಗ್ ಬೆನ್ನೆಲುಬು ಮುರಿದರು. ಇದರಿಂದ ನ್ಯೂಜಿಲೆಂಡ್ ಗೆ ಜಯದ ಹಾದಿ ಸುಲಭವಾಯಿತು. ಮೂರನೇ ದಿನ ಭಾರತದ ಪರ ರವೀಂದ್ರ ಜಡೇಜಾ ಔಟಾಗದೇ 16 ರನ್(22 ಎಸೆತ, 1 ಬೌಂಡರಿ, 1 ಸಿಕ್ಸರ್) ಸಿಡಿಸಿ ಸ್ವಲ್ಪ ಪ್ರತಿರೋಧವನ್ನು ಒಡ್ಡುವಲ್ಲಿ ಯಶಸ್ವಿಯಾಗಿದ್ದರು. ಈ ಸೋಲನ್ನು ನೋಡಿದ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಗಳನ್ನು ಹಾಕುವ ಮೂಲಕ ತಮ್ಮ ಸಿಟ್ಟನ್ನು ಪ್ರದರ್ಶನ ಮಾಡುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here