ಸಂಸದ ತೇಜಸ್ವಿ ಸೂರ್ಯ ಅವರು ಮಾಡಿರುವ ಟ್ವೀಟ್ ಈಗ ಸುದ್ದಿಯಾಗಿದೆ. ಬೆಂಗಳೂರಿನಲ್ಲಿ ಒಂದು ಕಡೆ ಜೈನರು ಹಾಕಿದ್ದ ನಾಮಫಲಕದಲ್ಲಿ ಒಂದು ಅಕ್ಷರ ಕೂಡಾ ಕನ್ನಡ ಇಲ್ಲ ಎಂಬ ಕಾರಣಕ್ಕೆ ಕನ್ನಡಿಗರು ಅದನ್ನು ವಿರೋಧಿಸಿದ್ದಾರೆ. ಈ ಘಟನೆ ನಡೆದ ಮೇಲೆ ತೇಜಸ್ವಿ ಸೂರ್ಯ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ
ಕೆಲವು ರೌಡಿ ಚಟುವಟಿಕೆಗಳಿಂದ ಜೈನ ದೇವಾಲಯದ ಬ್ಯಾನರ್ ಮೇಲೆ ಇದ್ದ ಹಿಂದಿ ಭಾಷೆಯನ್ನು ವಿರೋಧಿಸಿ, ನಮ್ಮ ಜೈನ ಸಹೋದರರ ಮೇಲೆ ನಡೆದ ದಾಳಿಯ ಬಗ್ಗೆ ತೀವ್ರವಾಗಿ ನೋವು ಉಂಟಾಗಿದೆ. ಕರ್ನಾಟಕಕ್ಕೆ ಕೊಡುಗೆ ನೀಡುವ ಶಾಂತಿಯುತ ಜೈನರನ್ನು ಮೇಲೆ ಆಕ್ರಮಣ ಮಾಡುವುದು ನಿಜವಾದ ಕನ್ನಡ ಪ್ರಿಯರಿಗೆ ಮತ್ತು ಕಾರ್ಯಕರ್ತರಿಗೆ ಅಪಚಾರವನ್ನು ತರುತ್ತದೆ ಎಂದವರು ಟ್ವೀಟ್ ಮಾಡಿದ್ದಾರೆ.

ಅವರ ಈ ಟ್ವೀಟ್ ಗೆ ಉತ್ತರವಾಗಿ ಅನೇಕರು ಅದನ್ನು ವಿರೋಧಿಸುತ್ತಾ ಟ್ವೀಟ್ ಗಳನ್ನು ಮಾಡಿ, ಕರ್ನಾಟಕದಲ್ಲಿ ಇರುವ ಜೈನರಿಗೆ ಕನ್ನಡ ಭಾಷೆ ಬೇಡೆವೇ? ಎಂದು ಪ್ರಶ್ನೆ ‌ಮಾಡಿದ್ದಾರೆ. ಇದಾದ ನಂತರ ತೇಜಸ್ವಿ ಸೂರ್ಯ ಅವರು ಮತ್ತೊಂದು ಟ್ವೀಟ್ ಮಾಡಿ ರತ್ನತ್ರಯ ಎಂದು ಕರೆಯಲ್ಪಡುವ ಪಂಪಾ, ಪೊನ್ನಾ ಮತ್ತು ರನ್ನಾ ಅಥವಾ ಕನ್ನಡ ಸಾಹಿತ್ಯದ ಮೂರು ರತ್ನಗಳಂತಹ ಮಹಾನ್ ಕವಿಗಳು ಜೈನರು. ಕನ್ನಡ ಸಾಹಿತ್ಯದ ಪ್ರಾರಂಭವು ಜೈನ ಯುಗ ಎಂದು ಹೇಳಿದ್ದಾರೆ.

ಜೊತೆಗೆ ಆದ್ದರಿಂದ, ಈ ಇತಿಹಾಸವನ್ನು ಕಲಿಯಲು ಕರ್ನಾಟಕದ ಇಂದಿನ ಯುವ ಜೈನರು ಅವರ ಸಂವಹನಗಳಲ್ಲಿ ಕನ್ನಡವನ್ನು ಸಹ ಬಳಸಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಟ್ವೀಟ್ ಮಾಡುವ ಮೂಲಕ‌ ಜೈನರಿಗೂ ಸಹಾ ತಮ್ಮ ಸಲಹೆಯನ್ನು ನೀಡಿದ್ದಾರೆ. ಆದರೆ ಅವರ ಮೊದಲ ಟ್ವೀಟ್ ನೋಡಿದ ಕನ್ನಡಿಗರು ಕೋಪದಿಂದ ಉತ್ತರಗಳನ್ನು ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here