ಎರಡು ದಿನಗಳ ಹಿಂದೆ ಸಂಸದ ತೇಜಸ್ವಿ ಸೂರ್ಯ ಅವರು ನೆರೆ ಪೀಡಿತರಿಗೆ ಕೇಂದ್ರ ಸರ್ಕಾರವು ಸಹಾಯ ಅಥವಾ ಪರಿಹಾರ ಬಿಡುಗಡೆ ಮಾಡುವ ಅಗತ್ಯವಿಲ್ಲ, ರಾಜ್ಯದಲ್ಲೇ ಹಣವಿದೆ ಎಂದು ಹೇಳುವ ಮೂಲಕ ಹೊಸ ವಿವಾದವೊಂದನ್ನು ಹುಟ್ಟು ಹಾಕಿದ್ದರು. ಅದಕ್ಕೆ ಸಂಭಂದಿಸಿದಂತೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಸದರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ. ಮುಖ್ಯ ಮಂತ್ರಿಗಳು ಸಂಸದ ತೇಜಸ್ವಿ ಸೂರ್ಯ ಅವರಿಗೆ ಕರೆ ಮಾಡಿ ರಾಜ್ಯದ ನೆಲ, ಜಲ, ಭಾಷೆ ಸೇರಿದಂತೆ ಪ್ರಮುಖ ವಿಷಯಗಳಲ್ಲಿ ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕೆಂದು, ಪಕ್ಷಕ್ಕೆ ಮತ್ತು ಸರ್ಕಾರಕ್ಕೆ ಮುಜುಗರವಾಗುವಂತಹ ಹೇಳಿಕೆಯನ್ನು ನೀಡಬಾರದು ಎಂದು ಎಚ್ಚರಿಕೆ ನೀಡಿದ್ದಾರೆ.

ಸಂಸದರು ತಾವು ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಪ್ರಯತ್ನ ಮಾಡಿದಾಗ, ಕೋಪದಿಂದಲೇ ಮಾತನಾಡಿರುವ ಅವರು ನಾವು ಹಗಲು-ರಾತ್ರಿ ಎನ್ನದೆ ಸಂತ್ರಸ್ತರಿಗೆ ನೆರವು ನೀಡಲು ಹರಸಾಹಸ ನಡೆಸುತ್ತಿದ್ದೇವೆ. ಕೇಂದ್ರ ಸರ್ಕಾರ ಈವರೆಗೂ ಕೂಡಾ ನೆರೆ ಸಂತ್ರಸ್ತರಿಗಾಗಿ ಒಂದೇ ಒಂದು ನಯಾಪೈಸೆ ನೆರವು ನೀಡಿಲ್ಲ ಎಂಬುದು ಸತ್ಯ. ಇದರಿಂದ ರಾಜ್ಯದ ಜನತೆ ಸಹಜವಾಗಿಯೇ ಆಕ್ರೋಶ ಹೊರಹಾಕುತ್ತಿರುವ ಸಮಯದಲ್ಲಿ ಜಾಣ್ಮೆಯಿಂದ ಪ್ರತಿಕ್ರಿಯೆಗಳನ್ನು ನೀಡಬೇಕೇ ಹೊರತು ಉರಿಯುವ ಬೆಂಕಿಗೆ ತುಪ್ಪ ಸುರಿಯಬಾರದು ಎಂದು ಯುವ ಸಂಸದರಿಗೆ ಸಲಹೆಯನ್ನು ನೀಡಿದ್ದಾರೆ.

ಕೇಂದ್ರವು ನೆರೆ ಪರಿಹಾರ ಏಕೆ ‌ನೀಡಿಲ್ಲ ಎಂದು ಪ್ರಶ್ನಿಸುವ ಹಕ್ಕು ಜನರಿಗಿದೆ. ಆಗ ನೀವು ಶೀಘ್ರದಲ್ಲೇ ಬಿಡುಗಡೆಯಾಗಲಿದೆ ಎಂದು ಉತ್ತರ ನೀಡಬೇಕೇ ಹೊರತು , ರಾಜ್ಯವು ಕೇಂದ್ರವನ್ನು ನೆರವು ಕೋರುವ ಅಗತ್ಯ ಇಲ್ಲ ಎಂಬ ಉದ್ದಟತನದ ಹೇಳಿಕೆ ನೀಡಬಾರದು ಎಂದು ಕೂಡಾ ಯಡಿಯೂರಪ್ಪನವರು ನೂತನ ಸಂಸದರಿಗೆ ಹೇಳಿದ್ದು, ನೀವು ಮೊದಲ ಬಾರಿಗೆ ಸಂಸದರಾಗಿದ್ದು, ಮಾತನಾಡುವಾಗ ಬಹಳ ಯೋಚಿಸಿ, ಅಳೆದು ತೂಗಿ ಮಾತನಾಡಿ ಎಂಬ ಸಲಹೆಯನ್ನು ಕೂಡಾ ನೀಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here