ವೆಟರ್ನರಿ ಡಾಕ್ಟರ್ ಪ್ರಿಯಾಂಕ ರೆಡ್ಡಿಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಮತ್ತೊಮ್ಮೆ ನಡುಕು ಹುಟ್ಟಿಸಿದೆ. ಆಕೆಯ ಸ್ಕೂಟಿ ಟೈರ್ ಪಂಕ್ಚರ್ ಆದಾಗ ನಡೆದ ಘಟನೆಯೊಂದರಲ್ಲಿ ಪ್ರಿಯಾಂಕ ರೆಡ್ಡಿಯ ಹತ್ಯೆಯಾಗಬಹುದೆಂದು ಯಾರೊಬ್ಬರೂ ಊಹೆ ಕೂಡಾ ಮಾಡಿರಲಿಲ್ಲ. ತೆಲಂಗಾಣದಲ್ಲಿ ನಡೆದ ಈ ಕೃತ್ಯಕ್ಕೆ ಕಾರಣರಾದವರನ್ನು ಹೈದರಾಬಾದ್ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಇದರಲ್ಲಿ ಲಾರಿ ಡ್ರೈವರ್ ಗಳು ಮತ್ತು ಕ್ಲೀನರ್ ಸೇರಿ ವಿಕೃತಿಯನ್ನು ಮೆರೆದಿದ್ದಾರೆ. ಸ್ಕೂಟಿಯ ಟೈರ್ ನಲ್ಲಿ ಬೇಕಂತಲೇ ಗಾಳಿಯನ್ನು ತೆಗೆದು, ಆಕೆಗೆ ಮೋಸ ಮಾಡಿ ತಮ್ಮ ನೀಚತನವನ್ನು ಮೆರೆದಿದ್ದಾರೆ ಎನ್ನಲಾಗುತ್ತಿದೆ.

ಘಟನೆ ನಡೆದ 24 ಗಂಟೆಗಳಲ್ಲಿ ಪೋಲಿಸರು ನಡೆಸಿದ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದ್ದು, ನಾರಾಯಣ ಪೇಟ ಜಿಲ್ಲೆಯ ಮುಕ್ತಲೇಕು ಎಂಬಲ್ಲಿನ ಮಹಮ್ಮದ್ ಪಾಷ, ಮಹಬೂಬ್ ಎಂಬ ಇಬ್ಬರು ಪ್ರಧಾನ ಆರೋಪಿಗಳು ಎಂದು ತಿಳಿಸಿದ್ದಾರೆ ಪೋಲಿಸರು. ಶಂಶಾಬಾದ್ ಟೋಲ್ ಪ್ಲಾಜಾ ಬಳಿಯ ನಿರ್ಜನವಾದ ಪ್ರದೇಶದಲ್ಲಿ ಪ್ರಿಯಾಂಕ ಮೇಲೆ ಅತ್ಯಾಚಾರ ನಡೆಸಿರುವುದಾಗಿ ತನಿಖೆಯಲ್ಲಿ ತಿಳಿದು ಬಂದಿದೆ‌. ಅತ್ಯಾಚಾರದ ನಂತರ ಉಸಿರಾಡಲು ಬಿಡದೆ ಸಾಯಿಸಿ, ಆಕೆಯ ದೇಹವನ್ನು ಚೀಲದಲ್ಲಿ ಕಟ್ಟಿ 28 ಕಿಮೀ ದೂರದ ಶಾದ್ ನಗರಕ್ಕೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲಿಂದ ಬೆಳಿಗಿನ ಜಾವ 3, 4 ಗಂಟೆಯ ವೇಳೆಯಲ್ಲಿ ಚಟಾನ್ ಪಲ್ಲಿ ಎಂಬಲ್ಲಿ ದಹನ ಮಾಡಿದ್ದಾರೆ.

ಪ್ರಿಯಾಂಕ ಅವರ ಓಡಾಟವನ್ನು ಗಮನಿಸಿ ಅನಂತರ ಇಂತಹುದೊಂದು ಕಿರಾತಕ ಉಪಾಯವನ್ನು ಮಾಡಿ ಆರೋಪಿಗಳು ಪ್ರಿಯಾಂಕ ಅವರ ಮೇಲೆ ಇಂತಹ ಕ್ರೌರ್ಯವನ್ನು ಮೆರೆದಿದ್ದಾರೆ. ಸೀಮೆ ಎಣ್ಣೆ ಹಾಕಿ ಶವವನ್ನು ಸುಟ್ಟಿದ್ದು, 70% ದೇಹ ಸುಟ್ಟು ಹೋಗಿದೆ. ಇನ್ನು ಪ್ರಿಯಾಂಕ ಸಹೋದರಿ ತನ್ನಕ್ಕ ಕಡೆಯದಾಗಿ ರಾತ್ರಿ ಒಂಬತ್ತರ ಸಮಯದಲ್ಲಿ ಫೋನ್ ಮಾಡಿ ಸ್ಕೂಟಿ ಟೈರ್ ಪಂಕ್ಚರ್ ಆದ ವಿಷಯವನ್ನು ಹೇಳುತ್ತಿರುವಾಗ , ಆಗ ಹಿಂದಿನಿಂದ ಅಕ್ಕನ ಸಹಾಯಕ್ಕೆ ಬರುವಂತೆ ನಾಟಕವಾಡಿದ್ದ ಆರೋಪಿಗಳ ಧ್ವನಿ ಕೇಳಿತ್ತು ಎಂದು ಕೂಡಾ ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here