ಸಾಮಾನ್ಯವಾಗಿ ಮಕ್ಕಳನ್ನು ದೇವರೆಂದೇ ನಾವೆಲ್ಲರೂ ಕರೆಯುತ್ತೇವೆ. ಮಕ್ಕಳ ಮನಸ್ಸು ಹಾಗೇ ಇರುತ್ತದೆ. ಮಕ್ಕಳು ಮುಗ್ಧರು, ಅವರ ಮುಗ್ಧ ಮನಸ್ಸಿಗೆ ಸಾಕ್ಷಿ ಎಂಬಂತೆ ಆಗಾಗ ಎಲ್ಲರೂ ಆಶ್ಚರ್ಯ ಪಡುವಂತ ಸಂಘಟನೆಗಳು ನಡೆದು ಮಕ್ಕಳ ಒಳ್ಳೆಯ ಮನಸ್ಸಿನ ಬಗ್ಗೆ ಎಲ್ಲರೂ ಹಾಡಿ ಹೊಗಳುವಂತಾಗುತ್ತದೆ. ಈಗ ಅಂತಹುದೇ ಒಂದು ಅಪರೂಪದ ಘಟನೆಯೊಂದು ಮಿಜೋರಾಂನಲ್ಲಿ ನಡೆದಿದೆ. ಇಲ್ಲಿ‌ ಪುಟ್ಟ ಬಾಲಕನೊಬ್ಬ ಮಾಡಿದ ಕಾರ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಎಲ್ಲರೂ ಆತನ ಮುಗ್ಧತೆ ಹಾಗೂ ಒಳ್ಳೆಯ ಮನಸ್ಸನ್ನು ಹಾಡಿ ಹೊಗಳುತ್ತಿದ್ದಾರೆ. ಮಿಜೋರಾಂನಲ್ಲಿ ಬಾಲಕನೊಬ್ಬ ತನ್ನ ಸೈಕಲ್ ಸವಾರಿ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಆತನ ಸೈಕಲ್ ಚಕ್ರದ ತಗುಲಿ ನೆರೆ ಮನೆಯವರ ಕೋಳಿ ಮರಿ ಸತ್ತಿದೆ. ನಂತರ ಆ ಬಾಲಕ ಮಾಡಿದ ಕೆಲಸ ನಿಜಕ್ಕೂ ಎಲ್ಲರೂ ಮೆಚ್ಚುವಂತದ್ದು, ಹಾಗೂ ಅದೇ ಈ ಬಾಲಕನನ್ನು ಈಗ ಎಲ್ಲೆಡೆ ಜನಪ್ರಿಯಗೊಳಿಸಿದೆ.

ಮಿರಾರಾಮ್ನ ಸೈರಂಗ್ ನ ಆರು ವರ್ಷದ ಡೆರೆಕ್ ಸಿ ಲಲ್ಚನಿಹಿಮಾ ಮನೆಯ ಬಳಿ ಸೈಕಲ್ ಸವಾರಿ ಮಾಡುವಾಗ ಆಕಸ್ಮಿಕವಾಗಿ ನೆರೆ ಮನೆಯ ಕೋಳಿ ಮರಿ ಆತನ ಸೈಕಲ್ ಚಕ್ರಕ್ಕೆ ಸಿಲುಕಿ ಸತ್ತಿದೆ. ಅದು ಸತ್ತಿರುವ ವಿಷಯ ತಿಳಿಯದ ಬಾಲಕ, ಕೂಡಲೇ ಅದನ್ನು ಎತ್ತಿಕೊಂಡು ಮನೆಯೊಳಗೆ ಓಡಿ, ಅವರ ಅಪ್ಪ ಅಮ್ಮನ ಮುಂದೆ ಅದನ್ನು ಆಸ್ಪತ್ರೆಗೆ ತೆಗೆದುಕೊಂಡು ಹೋಗುವಂತೆ, ಚಿಕಿತ್ಸೆ ಕೊಡಿಸುವಂತೆ ಗೋಗರೆದಿದ್ದಾನೆ. ಆದರೆ ಕೋಳಿ ಮರಿ ಅದಾಗಲೇ ಸತ್ತಿರುವುದನ್ನು ಮನಗಂಡ ಹುಡುಗನ ತಂದೆ ಅವನ ಕೈಗೆ ಹತ್ತು ರೂ ನೀಡಿ ನೀನೇ ಹೋಗಿ ಚಿಕಿತ್ಸೆ ಕೊಡಿಸು ಎಂದಿದ್ದಾರೆ.

ಕೂಡಲೇ ಬಾಲಕ ಹತ್ತಿರದ ಆಸ್ಪತ್ರೆಗೆ ಓಡಿದ್ದಾನೆ. ಅಲ್ಲಿ ಕೋಳಿ ಮರಿಯನ್ನು ತೋರಿಸಿ ಅದಕ್ಕೆ ಚಿಕಿತ್ಸೆ ನೀಡಿ ಎಂದು ಹತ್ತು ರೂಪಾಯಿ ನೀಡಲು ಹೋಗಿದ್ದಾನೆ. ಆಗ ಅಲ್ಲಿ ಬಾಲಕನ ಫೋಟೋ ತೆಗೆದಿದ್ದಾರೆ. ನಂತರ ಕೆಲ ಸಮಯದ ನಂತರ ಮನೆಗೆ ಬಂದ ಹುಡುಗ ಆಸ್ಪತ್ರೆಗೆಯಲ್ಲಿ ಕೋಳಿ ಮರಿಗೆ ಚಿಕಿತ್ಸೆ ನೀಡಲಿಲ್ಲ. ಬದಲಿಗೆ ನನ್ನ ಫೋಟೋ ತೆಗೆದು ನೂರು ರೂಪಾಯಿ ಕೊಟ್ಟರೆಂದು ಅವರ ತಂದೆಗೆ ಆ ನೂರನ್ನು‌ ಕೊಟ್ಟಿದ್ದಾನೆ. ನಂತರ ಫೇಸ್ ಬುಕ್ ನಲ್ಲಿ ಡೆರೆಕ್ ಒಂದು ಕೈನಲ್ಲಿ ಹತ್ತರ ನೋಟು, ಮತ್ತೊಂದು ಕೈ ನಲ್ಲಿ ಕೋಳಿ ಮರಿಯನ್ನು ಹಿಡಿದಿರುವ ಪೋಟೋ ವೈರಲ್ ಆಗಿ ಎಲ್ಲೆಡೆಯಿಂದ ಬಾಲಕನ ಕಾರ್ಯಕ್ಕೆ ಪ್ರಶಂಸೆ ಬಂದಿದೆ.

ಬಾಲಕನು ಮಾಡಿರುವ ಕಾರ್ಯ ದಯೆ ಹಾಗೂ ಮಾನವೀಯತೆಗೆ ನಿದರ್ಶನ. ಈ ಕಿರಿಯ ವಯಸ್ಸಿನಲ್ಲೇ ಅವನಲ್ಲಿರುವ ಈ ಗುಣವನ್ನು ಎಲ್ಲರೂ ಕೊಂಡಾಡಿದ್ದಾರೆ. ಬಾಲಕನ ತಂದೆ ಮಾತನಾಡುತ್ತಾ ನಾನು ಮಗ ಹತ್ತು ರೂಪಾಯಿ ಹಿಡಿದು ಆಸ್ಪತ್ರೆಗೆ ಹೋಗುವನೆಂದು ನಿರೀಕ್ಷೆ ಮಾಡಿರಲಿಲ್ಲ ಎಂದು ಹೇಳುತ್ತಾ, ತಮ್ಮ ಮಗನಲ್ಲಿರುವ ಒಳ್ಳೆಯ ಗುಣಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here