ಬೆಂಗಳೂರು; ಬೆಂಗಳೂರಿನ ಕೃಷಿ ತಂತ್ರಜ್ಞರ ಸಂಸ್ಥೆಯ ಒಳ ಸಭಾಂಗಣದಲ್ಲಿ ಐತಿಹಾಸಿಕ ಪುನಾ ಒಪ್ಪಂದದ ಸಮಾವೇಶವನ್ನು ಡಾಕ್ಟರ್ ಆರ್ ಮೋಹನ್ ರಾಜ್ ಇವರ ನೇತ್ರತ್ವದಲ್ಲಿ ಸಭೆ ನಡೆಸಲಾಯಿತು.
ಈ ಸಭೆಯಲ್ಲಿ ಇತಿಹಾಸಕಾರ ಅಕ್ಕ ಅಕಾಡೆಮಿ ಐಎಎಸ್ ತರಬೇತಿದಾರರಾದ ಶಿವಕುಮಾರ್ ಅವರು ಮಾತನಾಡಿ, ನಾವು ಯಾರನ್ನು ಹಾಗೂ ಯಾವ ಧರ್ಮವನ್ನು ನಿಂದಿಸಬಾರದು ಅದು ಸರಿಯಾದ ಮಾರ್ಗವಲ್ಲ ಇತ್ತೀಚಿನ ದಿನಗಳಲ್ಲಿ ಸ್ಟಾಲಿನ್ ಎನ್ನುವವರು ಸನಾತನ ಧರ್ಮ ಅಳಿಸಬೇಕು ಎಂದು ಹೇಳಿದ್ದು ಸರಿಯಲ್ಲ, ಅವರ ವಂಶ ಪರಂಪರೆ ಅಧಿಕಾರಗಳನ್ನು ವಹಿಸಿಕೊಂಡು ಬಂದಿದ್ದರು ಸನಾತನ ವಿರುದ್ಧ ಯಾವುದೇ ಕಾರ್ಯಗಳನ್ನು ಮಾಡಲಿಲ್ಲ. ಆದರೆ ಈಗ ದಲಿತರನ್ನು ಒಲಿಸುವ ಸಲುವಾಗಿ ಮತ್ತು ದಲಿತರು ಎಮೋಷನಲ್ ಆಗುತ್ತಾರೆ ಎಂದು ಮನಗಂಡಿದ್ದ ಇವರು ಎಸ್ಸಿ,ಎಸ್ಟಿ ಒಬಿಸಿ ಮತಗಳು ಅತೀ ಹೆಚ್ಚಾಗಿ ಬರಲಿ ಎನ್ನುವ ಕಾರಣಕ್ಕಾಗಿ ಹೇಳಿರಬಹುದೆಂದು ಅವರು ಹೇಳಿದ್ದಲ್ಲದೆ ಮೊದಲು ನಾವು ಬದಲಾಗಬೇಕು ಈ ರೀತಿ ನಿಂದನೆ ಮಾಡುವುದು ತಪ್ಪು ಇದು ಕಾರ್ಯರೂಪಕ್ಕೆ ಬರಬೇಕಾದರೆ ನಮ್ಮ ವೋಟಿಂಗ್ ಪವರ್ ಸರಿಯಾದ ರೀತಿಯಲ್ಲಿ ಬಳಸಬೇಕು ಅಂದರೆ ಮತದಾನ ಯಾರಿಗೆ ಹಾಕಬೇಕು ಎಂದು ಯೋಚನೆ ಮಾಡಿ ಮತದಾನ ಮಾಡಬೇಕು ಆಗ ಮಾತ್ರ ಡಾ. ಬಿ ಆರ್ ಅಂಬೇಡ್ಕರ್ ಅವರ ನಿಜವಾದ ಅನುಯಾಯಿಗಳು ಆಗಲು ಸಾಧ್ಯ ಎಂದು ಹೇಳಿದರು.
ಇನ್ನು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ ರಾಜ್ಯ ಅಧ್ಯಕ್ಷರಾದ ಡಾ. ಆರ್ ಮೋಹನ್ ರಾಜ್ ಅವರು ಮಾತನಾಡಿ, ಧಮನಿತರ ಶೋಷಣೆ ಒಳಗಾದ ಸಮಾಜಕ್ಕೆ ಬಾಬಾ ಸಾಹೇಬ್ರು ತಮ್ಮ ಜೀವನವನ್ನೇ ಮುಡುಪಾಗಿಟ್ಟು ಸೆಪ್ಟಂಬರ್ 24, 1932ರಂದು ಮತದಾನದ ಹಕ್ಕನ್ನು ತಂದುಕೊಟ್ಟರೆ, ಇವರಿಗೆ ಮತದಾನ ಕೊಡುವುದಾದರೆ ನಮಗೆ ಸ್ವಾತಂತ್ರ್ಯವೇ ಬೇಡ ಎಂದು ಹೇಳಿದ್ದರೋ ಅವರ ಜೊತೆಯಲ್ಲಿ ಇಂದು ದಲಿತರು ಗುಲಾಮಗಿರಿಯಲ್ಲಿರುವುದು ವಿಪರ್ಯಾಸ ಎಂದು ಅವರ ಮನದಾಳದ ನುಡಿಗಳನ್ನು ನೂರಾರು ಜನ ಕಾರ್ಯಕರ್ತರಿಗೆ ಮನಮುಟ್ಟುವಂತೆ ಹೇಳಿದರು. ಈ ಸಂದರ್ಭದಲ್ಲಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ(rpi ) ಉಪಾಧ್ಯಕ್ಷರಾದ, ರಾಜು ಎಂ ತಳವಾರ, ರಮೇಶ ವಕೀಲರು, ಅಯ್ಯಪ್ಪ ವಕೀಲರು, ರಾಜು ಕೊಡಗು, ವೇದಿಕೆ ಮೇಲೆ ಉಪಸ್ಥಿತರಿದ್ದರು.
ವರದಿಗಾರ, ಎ ಚಿದಾನಂದ.
Disclaimer: This Story is auto-aggregated by a Syndicated Feed and has not been Created or Edited By City Big News Staff.