Kannada news - Suddi Mane is a live Kannada news portal offering Kannada news online, Movie News in Kannada, Sports News in Kannada, Business News In Kannada etc

ದೇಶದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸಿದ ವ್ಯಕ್ತಿ.!

 

ಮುಂಬೈ: ಬಾಲಿವುಡ್ ಸ್ಟಾರ್ ಹೀರೋ ಅಕ್ಷಯ್ ಕುಮಾರ್ ದೇಶದಲ್ಲೇ ಅತಿ ಹೆಚ್ಚು ತೆರಿಗೆ ಪಾವತಿಸಿದ ವ್ಯಕ್ತಿ ಎನಿಸಿಕೊಂಡಿದ್ದಾರೆ. 2021-22ರ ಹಣಕಾಸು ವರ್ಷದಲ್ಲಿ ಅಕ್ಷಯ್ ₹29.5 ಕೋಟಿ ಆದಾಯ ತೆರಿಗೆ ಪಾವತಿಸಿದ್ದಾರೆ.

ಅಂಬಾನಿ, ಅದಾನಿ, ರತನ್ ಟಾಟಾ ಮುಂತಾದ ಉದ್ಯಮಿಗಳಿಗೆ ವೈಯಕ್ತಿಕ ಆಸ್ತಿ ಇಲ್ಲ. ಎಲ್ಲಾ ಅವರ ಕಂಪನಿಗಳ ಹೆಸರಿನಲ್ಲಿದೆ. ಹಾಗಾಗಿ ಅವರು ಈ ಪಟ್ಟಿಯಲ್ಲಿಲ್ಲ. 2022-23ರ ಆರ್ಥಿಕ ವರ್ಷಕ್ಕೆ ಇದುವರೆಗೆ 6.50 ಕೋಟಿ ITRಗಳನ್ನು ಸಲ್ಲಿಸಲಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಬಹಿರಂಗಪಡಿಸಿದೆ.