ಬೆಂಗಳೂರು: ಭಾರತ ದೇಶವಲ್ಲದೆ ಇಡೀ ವಿಶ್ವವೇ ಚಂದ್ರಯಾನ ಮೂರರ ಮೇಲೆ ಎಲ್ಲರ ಕಣ್ಣು ಇದೆ. ಆಗಸ್ಟ್ 23ನೇ ತಾರೀಕು ಸಂಜೆ 6:00 4 ನಿಮಿಷಕ್ಕೆ ವಿಕ್ರಮ ಚಂದ್ರನ ಮೇಲೆ ಲ್ಯಾಂಡ್ ಆಗಲಿದೆ ಹಾಗಾಗಿ ಸಿಲಿಕಾನ್ ಸಿಟಿ ಬೆಂಗಳೂರಿನ ಮಂದಿ ದೇವರ ಮೊರೆಯನ ಹೋಗಿದ್ದಾರೆ.
ನಾಳೆ ಸಂಜೆ ಚಂದ್ರನ ದಕ್ಷಣದಲ್ಲಿ ಚಂದ್ರಯಾನ 3 ಲ್ಯಾಂಡ್ ಆಗಲಿದೆ. ಹೀಗಾಗಿ ಜನರು ದೇವರ ಮೊರೆ ಹೋಗಿದ್ದಾರೆ. ವಿಜ್ಞಾನಿಗಳ ಕನಸು ಈಡೇರಬೇಕು, ಇಡಿ ವಿಶ್ವ ಭಾರತದ ಹೆಮ್ಮೆಯ ಕಡೆ ನೋಡಬೇಕು ಅಂತ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ
ಚಂದ್ರಯಾನ-3 ಉಡಾವಣೆಗೂ ಮುನ್ನ ಇಸ್ರೋ ವಿಜ್ಞಾನಿಗಳ ತಂಡವು ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ ಆಗಮಿಸಿ ಈ ಯೋಜನೆ ಯಶಸ್ವಿ ಆಗಲಿ ಎಂದು ಪ್ರಾರ್ಥನೆ ಸಲ್ಲಿಸಿದ್ದರು.
ಚಂದ್ರಯಾನ-3 ಸ್ವದೇಶಿ ಲ್ಯಾಂಡರ್ ಮಾಡ್ಯೂಲ್ (LM), ಪ್ರೊಪಲ್ಷನ್ ಮಾಡ್ಯೂಲ್ (PM) ಮತ್ತು ರೋವರ್ ಅನ್ನು ಒಳಗೊಂಡಿದ್ದು, ಅಂತರ ಗ್ರಹಗಳ ಕಾರ್ಯಾಚರಣೆಗಳಿಗೆ ಅಗತ್ಯವಿರುವ ಹೊಸ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವ ಮತ್ತು ಪ್ರದರ್ಶಿಸುವ ಉದ್ದೇಶವನ್ನು ಹೊಂದಿದೆ. ಲ್ಯಾಂಡರ್ ನಿರ್ದಿಷ್ಟ ಚಂದ್ರನ ಸ್ಥಳದಲ್ಲಿ ಮೃದುವಾಗಿ ಇಳಿಯುವ ಸಾಮರ್ಥ್ಯವನ್ನು ಹೊಂದಿರುತ್ತದೆ ಮತ್ತು ರೋವರ್ ಅನ್ನು ನಿಯೋಜಿಸುತ್ತದೆ, ಇದು ಅದರ ಚಲನಶೀಲತೆಯ ಅವಧಿಯಲ್ಲಿ ಚಂದ್ರನ ಮೇಲ್ಮೈಯ ಸ್ಥಳದಲ್ಲಿ ರಾಸಾಯನಿಕ ವಿಶ್ಲೇಷಣೆಯನ್ನು ನಡೆಸುತ್ತದೆ.
Disclaimer: This Story is auto-aggregated by a Syndicated Feed and has not been Created or Edited By City Big News Staff.