City Big News Desk.
ಬೆಂಗಳೂರು: ಕೋಟಾ ಶ್ರೀನಿವಾಸ್ ಪೂಜಾರಿ ಅವರ ಅಭಿಮಾನಿ ನಾನು, ಈ ಪರಿಷತ್ತಿನ ಘನತೆ ಹೇಗಿತ್ತು ಎಂದರೆ ಬಂಗಾರಪ್ಪ ಅವರ ಕಾಲದಲ್ಲಿ ಮಂತ್ರಿಯಾಗಿ ಬಂದವನು. ಎಚ್.ಕೆ.ಪಾಟೀಲ್, ಕಲ್ಮನ್ಕರ್, ಎಕೆ.ಸುಬ್ಬಯ್ಯ, ಎಂಸಿ ನಾಣಯ್ಯ ಇದ್ದರು.
ಇಂದು ಸದನದಲ್ಲಿ ಮಾತಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ,ಎರಡನೇ ಹಾಗೂ ಮೂರನೇ ದರ್ಜೆ ಲಿಕ್ಕರ್ ಕುರಿತು ಎಂಸಿ.ನಾಣಯ್ಯ ಅವರ ಮಾತನ್ನು ಕೇಳಿ ಎಸ್.ಎಂ.ಕೃಷ್ಣ ಅವರು ಈ ಲಿಕ್ಕರ್ಗಳನ್ನ ಬ್ಯಾನ್ ಮಾಡುವುದಾಗಿ ಹೇಳಿದರು.
ಹಿರಿಯರ ಮನೆ ಇದು, 33 ವರ್ಷ ಆಯಿತು ಇಲ್ಲಿಗೆ ಬಂದು ಇದರ ಘನತೆಯನ್ನು ಕಾಪಾಡಬೇಕು. ನಮ್ಮ ಪಂಚ ಗ್ಯಾರಂಟಿಗಳನ್ನ ಮನತುಂಬಿ ಒಪ್ಪಿಕೊಂಡಿದ್ದೀರಿ ಧನ್ಯವಾದಗಳು.
ನಾನು ಸಮಾಧಾನದಿಂದ ನಿಮ್ಮ ಮಾತನ್ನು ಆಲಿಸಿದ್ದೇನೆ. ಅರ್ಚಕಸ್ಯ ಪ್ರಭಾಯನ ಶಿಲಾಭೂತಿ ಶಂಕರಃ “ಅರ್ಚಕನ ಪ್ರಭಾವದಿಂದ ಶಿಲೆ ಕೂಡ ಶಂಕರನನ್ನು ಕಾಣಬಹುದು”
ಅಧ್ಯಕ್ಷರೇ, ಈ ರಾಜ್ಯದ ಜನ ನಮಗೆ ಆಶೀರ್ವಾದ ಮಾಡಿದ್ದಾರೆ. ಈ ಹಿಂದನ ಸರ್ಕಾರದ ಎಲ್ಲಾ ಆಚಾರ- ವಿಚಾರಗಳನ್ನ ನಾವು ಪ್ರಚಾರ ಮಾಡಿದಿವಿ, ಅದರ ಬಗ್ಗೆ ಮಾತನಾಡುವುದಿಲ್ಲ.
ನಮ್ಮಪಂಚ ಗ್ಯಾರಂಟಿಗಳನ್ನ ರಾಜ್ಗಪಾಲರ ಭಾಷಣದ ಮೂಲಕ ನೀವುಗಳು ತಿಳಿದುಕೊಳ್ಳಬಹುದು. ಬೇರೆ ಚರ್ಚೆಗೆ ಸಂದರ್ಭವಲ್ಲ.
ಯಾಕೆ ಈ ಯೋಜೆನಗಳನ್ನು ತಂದೆವು ಎಂದರೆ ಪ್ರತಿ ದಿನ PICK POCKET ಆಗ್ತಾ ಇತ್ತು. 60 ರೂಪಾಯಿ ಇದ್ದ ಪೆಟ್ರೋಲ್ ಡಿಸೇಲ್ 100 ರೂಪಾಯಿ ಆಗಿ ಗ್ಯಾಸ್ 1 ಸಾವಿರ ರೂಪಾಯಿ ಆಗಿ, ಉಪ್ಪು, ಮೊಸರಿಗೂ GST ಹಾಕಿ ಸಾಕಷ್ಟು ಕಷ್ಟ ಆಗುತ್ತಿತ್ತು.
ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದರು. ಜನ ಈ ಕಾರಣಕ್ಕೆ ಈ ಪಂಚ ಯೋಜನೆಗಳನ್ನು ಜಾರಿಗೆ ತರುವ ಆಲೋಚನೆ ಬಂದಿತು. ಯಾವುದೇ ಭ್ರಷ್ಟಾಚಾರ ಇಲ್ಲದೇ ಈ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ.
ನಿಮ್ಮ ಯಾವುದೇ ಪೇ ಕಮಿಷನ್, ಪೇ ಮಿನಿಸ್ಟರ್, ಪೇ ಸಿಎಂ ಆಗದಂತೆ ಈ ಯೋಜನೆಗಳನ್ನು ಜಾರಿಗೆ ತರಲಾಗುವುದು.
ನೀವು ಯಾವುದೇ ಸಲಹೆ- ಸೂಚನೆಗಳನ್ನು ಕೊಟ್ಟರು ನಾವು ತೆಗೆದುಕೊಳುತ್ತೇವೆ. ಈಗ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆಗೆ ಅವಕಾಶವಿದೆ, ಅದರ ಮೇಲೆ ಮೊದಲು ಚರ್ಚೆಯಾಗಲಿ ಎಂದುರು.
City Big News.
Disclaimer: This Story is auto-aggregated by a Syndicated Feed and has not been Created or Edited By City Big News Staff.