City Big News Desk.
ಬೆಂಗಳೂರು: ಇದೇ ಮೊದಲ ಬಾರಿಗೆ ವಿಧಾನಸಭಾ ಅಧಿವೇಶನದಲ್ಲಿ ವಿಪಕ್ಷ ನಾಯಕರುಗಳೆ ಇಲ್ಲದೆ ಅಧಿವೇಶನ ಮುಕ್ತಾಯಗೊಂಡಿದೆ.
ಬಿಜೆಪಿ ನಾಯಕರಲ್ಲಿ ವಿಪಕ್ಷ ನಾಯಕ ನೇಮಕಾತಿ ಗೊಂದಲವಿದ್ದು ಅಧಿವೇಶನ ಪ್ರಾರಂಭವಾಗಿ ಮತ್ತೆ ಅಧಿವೇಶನ ಮುಕ್ತಾಯಗೊಂಡರು ಸಹ ಬಿಜೆಪಿ ಪಕ್ಷದಲ್ಲಿ ವಿಪಕ್ಷ ನಾಯಕ ಯಾರೆಂದು ಬಗೆ ಹರಿಯುತ್ತಿಲ್ಲ.
ಹೌದು, ರಾಜ್ಯ ವಿಧಾನಸಭಾ ಅಧಿವೇಶನದ 30 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವಿರೋಧ ಪಕ್ಷದ ನಾಯಕನಿಲ್ಲದೆ ಅಧಿವೇಶನ ಮುಗಿಸುವ ಮೂಲಕ ಇತಿಹಾಸ ಪುಟ ಸೇರಿದ ರಾಜ್ಯ ವಿಧಾನಸಭೆ ಹಾಗೆ ಇದೊಂದು ಬಿಜೆಪಿ ಪಕ್ಷಕ್ಕೆ ದೊಡ್ಡ ಕಪ್ಪುಚುಕ್ಕೆಯಾಗಿ ಉಳಿದುಬಿಡುತ್ತದೆ.
ವಿಧಾನಸಭೆ ಅಧಿವೇಶನ ಆರಂಭವಾದಾಗಿನಿಂದಲೂ ರಾಜ್ಯ ಬಿಜೆಪಿಯಲ್ಲಿ ಗೊಂದಲವೋ ಗೊಂದಲ, ವಿರೋಧ ಪಕ್ಷದ ನಾಯಕನಿಲ್ಲದೇ ಬಜೆಟ್ ಮೇಲಿನ ಚರ್ಚೆಯ ವೇಳೆ ನಾಮ್ಕೇವಾಸ್ತೆ ವಿಪಕ್ಷದ ಸಾರಥ್ಯವನ್ನು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ವಹಿಸಿಕೊಂಡಿದ್ದರು.
ಬಿಜೆಪಿ ಪಕ್ಷದ ಗುಂಪುಗಾರಿಕೆಯಿಂದ ವಿಪಕ್ಷ ನಾಯಕನ ಆಯ್ಕೆ ವಿಳಂಬವಾಗಿದೆ, ಇದರೊಂದಿಗೆ ಅಧಿವೇಶನದಲ್ಲಿ ಕೇಸರಿ ಪಡೆ ನಾಯಕರು ತೀವ್ರ ಮುಜುಗರಕ್ಕೆ ಈಡಾಗಿದ್ದರು, ವಿಪಕ್ಷ ನಾಯಕನ ಆಯ್ಕೆ ಕಗ್ಗಂಟಾಗೇ ಉಳಿದಿದ್ದರು ಬಿಜೆಪಿ ವರಿಷ್ಠರು ತಲೆಕೆಡಿಸಿಕೊಂಡಿಲ್ಲ.
ರಾಜ್ಯ ವಿಧಾನಸಭಾ ಅಧಿವೇಶನದ ಆರಂಭವಾದಾಗಿನಿಂದ ಗಲಾಟೆ, ಗದ್ದಲ, ಪ್ರತಿಭಟನೆಗಳಿಂದಲೇ ಮುಗಿದಿದ್ದು ಒಟ್ಟಾರೆ ಅಧಿವೇಶನವು ಜ್ವಲಂತ ಸಮಸ್ಯೆಗಳ ಬಗ್ಗೆ ಹೆಚ್ಚು ಚರ್ಚೆಯೇ ನಡೆಯದೇ ಇಂದು ಮುಕ್ತಾಯವಾಗಲಿದೆ.
City Big News.
Disclaimer: This Story is auto-aggregated by a Syndicated Feed and has not been Created or Edited By City Big News Staff.