City Big News Desk.
ಬಾಲಿವುಡ್ ಅಂಗಳದಲ್ಲಿ ಬಹು ಬೇಡಿಕೆಯನ್ನು ಹೊಂದಿರುವ ನಟ ಎಂದರೆ ಶಾರುಖಾನ್ ಎಂದರೆ ಅದು ತಪ್ಪಾಗಲಾರದು.
ಹೌದು ಹಲವಾರು ವರ್ಷಗಳ ಹಿಂದೆ ಶಾರುಖ್ ಖಾನ್ ಎಂದರೆ ಬಾಲಿವುಡ್ ಅಂಗಳದಲ್ಲಿ ಬಹು ಬೇಡಿಕೆಯನ್ನು ನಟನಾಗಿದ್ದರು. ಶಾರುಖ್ ಖಾನ್ ನಟನೆಯ ಸಿನಿಮಾ ಎಂದರೆ ಅದ್ದೂರಿಯಾಗಿ ಇರುತ್ತದೆ. ‘ಪಠಾಣ್’ ಸಿನಿಮಾ ಗೆದ್ದ ಬಳಿಕ ಅವರ ಸಿನಿಮಾಗಳ ಮಾರುಕಟ್ಟೆ ಕೂಡ ವಿಸ್ತಾರ ಆಗಿದೆ. ಈಗ ‘ಜವಾನ್’ ಸಿನಿಮಾವನ್ನು ತುಂಬ ಅದ್ದೂರಿಯಾಗಿ ನಿರ್ಮಾಣ ಮಾಡಲಾಗಿದೆ. ಅದಕ್ಕೆ ‘ಜಿಂದಾ ಬಂದಾ..’ ಗೀತೆಯೇ ಸಾಕ್ಷಿ. ಈ ಹಾಡಿನಲ್ಲಿ ಬರೋಬ್ಬರಿ ಒಂದು ಸಾವಿರಕ್ಕೂ ಹೆಚ್ಚು ಹುಡುಗಿಯರು ಡ್ಯಾನ್ಸ್ ಮಾಡಿದ್ದಾರೆ. ಹೈದರಾಬಾದ್, ಮುಂಬೈ, ಬೆಂಗಳೂರು, ಚೆನ್ನೈ ಮುಂತಾದ ನಗರಗಳ ಡ್ಯಾನ್ಸರ್ಗಳು ಇದರಲ್ಲಿ ಹೆಜ್ಜೆ ಹಾಕಿದ್ದಾರೆ.
ಆಗಸ್ಟ್ ಮೊದಲ ವಾರದಲ್ಲಿ ‘ಜವಾನ್’ ಚಿತ್ರದ ಫಸ್ಟ್ ಸಾಂಗ್ ಬಿಡುಗಡೆ ಆಗಬಹುದು ಎಂಬ ನಿರೀಕ್ಷೆ ಇದೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಜೊತೆ ದೀಪಿಕಾ ಪಡುಕೋಣೆ, ನಯನತಾರಾ, ವಿಜಯ್ ಸೇತುಪತಿ, ರಿದ್ಧಿ ಡೋಗ್ರಾ, ಸಾನ್ಯಾ ಮಲ್ಹೋತ್ರಾ ಮುಂತಾದವರು ನಟಿಸಿದ್ದಾರೆ. ಸಿನಿಮಾಗೆ ಅನಿರುದ್ಧ್ ರವಿಚಂದರ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಡುಗಳು ಸೂಪರ್ ಹಿಟ್ ಆದರೆ ಚಿತ್ರದ ಕಲೆಕ್ಷನ್ಗೆ ಬಹಳ ಅನುಕೂಲ ಆಗಲಿದೆ. ಆ ಹಿನ್ನೆಲೆಯಲ್ಲಿ ಅಭಿಮಾನಿಗಳು ಮೊದಲ ಸಾಂಗ್ ಬಿಡುಗಡೆಗಾಗಿ ಕಾಯುತ್ತಿದ್ದಾರೆ.
ಶಾರುಖ್ ಖಾನ್ ಅವರಿಗೆ ‘ಜವಾನ್’ ಸಿನಿಮಾದಲ್ಲಿ ಹಲವು ಶೇಡ್ನ ಪಾತ್ರ ಇದೆ. ಕೆಲವೇ ದಿನಗಳ ಹಿಂದೆ ಬಿಡುಗಡೆ ಆದ ಪ್ರಿವ್ಯೂ ವಿಡಿಯೋದಲ್ಲಿ ಅವರು ಬೋಳು ತಲೆಯ ಗೆಟಪ್ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದ್ದರು. ಈ ಚಿತ್ರಕ್ಕೆ ತಮಿಳಿನ ಖ್ಯಾತ ನಿರ್ದೇಶಕ ಅಟ್ಲಿ ಅವರು ಆ್ಯಕ್ಷನ್-ಕಟ್ ಹೇಳಿದ್ದಾರೆ.
City Big News.
Disclaimer: This Story is auto-aggregated by a Syndicated Feed and has not been Created or Edited By City Big News Staff.