ದಿ ವಿಲನ್ ಚಿತ್ರ ತೆರೆಗೆ ಬಂದಿದೆ. ಅತ್ತ ಕೆಲ ಶಿವರಾಜಕುಮಾರ್ ಅಭಿಮಾನಿಗಳು ಚಿತ್ರ ನೋಡಿ ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ‌ .ಇತ್ತ ಕಿಚ್ಚ ಸುದೀಪ್ ಅಭಿಮಾನಿಗಳು ದಿ ವಿಲನ್ ಚಿತ್ರಕ್ಕೆ ಮನಸೋತಿದ್ದಾರೆ. ಹಲವು ಅಭಿಮಾನಿಗಳು ಕಿಚ್ಚ ಸುದೀಪ್ ಹೆಸರಿನಲ್ಲಿ ಸಮಾಜ ಸೇವೆ ಮಾಡಿ ಮಾದರಿಯಾಗುತ್ತಿದ್ದಾರೆ. ಆದರೆ ಇನ್ನೂ ಕೆಲವು ಅಭಿಮಾನಿಗಳು ಅತಿರೇಕದ ವರ್ತನೆ ತೋರಿ ಸುದೀಪ್ ಹೆಸರಿಗೆ ಮಸಿ ಬಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ನೆನ್ನೆ ಅಷ್ಟೇ ಶಿವಮೊಗ್ಗದ ಶಿಕಾರಿಪುರದ ಮಾಲತೇಸ ಚಿತ್ರಮಂದಿರದ ಮುಂದೆ ಮೇಕೆ ಬಲಿ‌ ಕೊಟ್ಟು ಅಂಧಾಭಿಮಾನ ಮೆರೆದಿದ್ದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಇದರ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಮತ್ತು ನಿರ್ದೇಶಕ ಪ್ರೇಮ್ ಅವರು ಅಸಮಧಾನ ವ್ಯಕ್ತಪಡಿಸಿದ್ದರು.

ಇದರ ಬೆನ್ನಲ್ಲೇ ದಿ ವಿಲನ್ ರಿಲಿಸ್ ದಿನ ಚಿತ್ರದುರ್ಗ ಜಿಲ್ಲೆಯ ಜಗಳೂರಿನಲ್ಲಿ ಅಭಿಮಾನಿಗಳು ಎಮ್ಮೆಯೊಂದನ್ನು ವಿಕೃತವಾಗಿ ಕೊಂದು ದಿ ವಿಲನ್ ಪೋಸ್ಟರ್ ಗೆ ರಕ್ತದ ಅಭಿಷೇಕ ಮಾಡಿದ್ದಾರೆ‌. ಈ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದ್ದು ವೀಡಿಯೋ ಮಾಡಿ ವಿಕೃತ ಸಂತಸ ಹಂಚಿಕೊಂಡಿರುವ ಅಭಿಮಾನಿಗಳ ವಿರುದ್ದ ಎಲ್ಲರೂ ರೊಚ್ವಿಗೆದ್ದಿದ್ದಾರೆ.

 

ಮೇಲ್ನೋಟಕ್ಕೆ ಇವರೆಲ್ಲಾ ನಿಜವಾಗಿಯೂ ಅಭಿಮಾನಿಗಳಾ ಎನ್ನುವ ಪ್ರಶ್ನೆ ಕಾಡಿದೆ. ತಮ್ಮ ಹುಚ್ಚು ಅಭಿಮಾನಕ್ಕೆ ಎಮ್ಮೆಯ ತಲೆಯನ್ನು ಕಡಿಯಲಾಗಿದೆ. ತಲೆ ಕಡಿಯುವ ಮುನ್ನ ವಿಕೃತವಾಗಿ ಎಮ್ಮೆ ಯನ್ನು ಕೆಳಕ್ಕೆ ಎರಡು ಬಾರಿ ಕುಕ್ಕಲಾಗಿದೆ. ಈ ಎಮ್ಮೆ ಇನ್ನೂ ಚಿಕ್ಕದಾಗಿದ್ದು ಅಮಾನುಷವಾಗಿ ಒಂದು ಮೂಕ ಪ್ರಾಣಿಯ ಬಲಿ ನೀಡಲಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಾರೀ ವಿರೋಧ ವ್ಯಕ್ತವಾಗಿದ್ದು ಈ ನೀಚ ಕೃತ್ಯ ಎಸಗಿದವರ ಮೇಲೆ ಕ್ರಮ ಕೈಗೊಳ್ಳಲು   ಶಿವರಾಜ್ ಕುಮಾರ್ ಮತ್ತು ಸುದೀಪ್ ಅಭಿಮಾನಿಗಳು ಒತ್ತಾಯಿಸಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here