ಒಂದೇ ಚಿತ್ರಕ್ಕೆ ಎರಡೆರಡು ಟೀಸರ್ ಮಾಡಿ ತಪ್ಪು ಮಾಡಿದ್ರಾ ಪ್ರೇಮ್ ? ಹೀಗೊಂದು ಪ್ರಶ್ನೆ ಈಗ ಸೋಷಿಯಲ್ ಮೀಡಿಯಾ ತುಂಬಾ ಸೌಂಡ್ ಮಾಡ್ತಿದೆ.ಇದಕ್ಕೆ ಕಾರಣವೂ ಇದೆ ದಿ ವಿಲನ್ ಚಿತ್ರದ ಟೀಸರ್ ಬಿಡುಗಡೆ ಆಗಿ ಎಲ್ಲೆಡೆ ಉತ್ತಮ ಪ್ರಶಂಸೆ ಪಡೆಯುತ್ತಿದೆ.ಸಹಜವಾಗಿ ಶಿವರಾಜಕುಮಾರ್ ಅಭಿಮಾನಿಗಳು ಮತ್ತು ಸುದೀಪ್ ಅಭಿಮಾನಿಗಳು ತಮ್ಮ ತಮ್ಮ ನಾಯಕರ ಟೀಸರ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮೆಚ್ಚುಗೆಯ ಮಾತುಗಳನ್ನಾಡಿದರು.ಯಾವಾಗ ಸುದೀಪ್ ಸೇರಿದಂತೆ ಕೆಲವು ಸ್ಟಾರ್ ಗಳು ಸುದೀಪ್ ಅವರ

ಟೀಸರ್ ಲಿಂಕ್ ಶೇರ್ ಮಾಡಿ ಶಿವಣ್ಣನವರ ಟೀಸರ್ ಲಿಂಕ್ ಶೇರ್ ಮಾಡುವುದನ್ನು ಮರೆತರೋ ಆವಾಗ ಶುರು ಆಯಿತು ನೋಡಿ ಫ್ಯಾನ್ಸ್ ವಾರ್.ಸುದೀಪ್ ಅವರ ಟೀಸರ್ ಶಿವಣ್ಣನವರ ಟೀಸರ್ ಗಿಂತ ನೋಡುಗರ ಸಂಖ್ಯೆಯಲ್ಲಿ ಕೊಂಚ ಮುಂದೋಗಿದೆ‌.ಆದರೆ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ ಶಿವರಾಜಕುಮಾರ್ ಅವರ ದಿ ವಿಲನ್ ಟೀಸರ್ ನಂಬರ್ ಒನ್ ಟ್ರೆಂಡಿಂಗ್ ಪಡೆದು ಶಿವಣ್ಣನ ಅಭಿಮಾನಿಗಳ ಸಂಭ್ರಮ ಹೆಚ್ಚುವಂತೆ ಮಾಡಿತು.ಇಷ್ಟಾದರೆ ಅಭಿಮಾನಿಗಳು ಸುಮ್ಮನಿರುತ್ತಿದ್ದರು ಆದರ ಪ್ರೇಮ್ ತಮ್ಮ ಟ್ವಿಟರ್ ನಲ್ಲಿ ಮಾಡಿದ ಎಡವಟ್ಟುಗಳು

ಪ್ರೇಮ್ ಮೇಲೆ ಶಿವಣ್ಣನವರ ಅಭಿಮಾನಿಗಳು ಸಿಡಿದೇಳುವಂತೆ ಮಾಡಿದೆ.ಇಷ್ಟಕ್ಕೂ ಪ್ರೇಮ್ ಏನ್ ಮಾಡಿದ್ರು ಅಂತೀರ.ಅಭಿಮಾನಿಗಳಿಗೆ ಸಮಾಧಾನ ಪಡಿಸುವ ನಿಟ್ಟಿನಲ್ಲಿ ಪ್ರೇಮ್ ಅವರು ಕನ್ನಡ ಚಿತ್ರರಂಗದ ಎಲ್ಲಾ ಕಲಾವಿದರು ಒಂದೇ ಯಾರು ಹೆಚ್ಚು ಯಾರು ಕಮ್ಮಿ ಅಲ್ಲ ದಿ ವಿಲನ್ ಚಿತ್ರದಲ್ಲಿ ಶಿವಣ್ಣ ಮತ್ತು ಸುದೀಪ್ ಒಂದೆ ಎಂದು ಪೋಸ್ಟ್ ಮಾಡಿದರು.ಈ ಪೋಸ್ಟ್ ನಿಂದಲೇ ಹೊತ್ತಿಕೊಂಡಿದ್ದು ಬೆಂಕಿ.ಪ್ರೇಮ್ ಅವರ ಈ ಪೋಸ್ಟ್ ಗೆ ಕಾಮೆಂಟ್ ಮಾಡಿದ ಅಭಿಮಾನಿಗಳು ಇಬ್ಬರು ಒಂದೇ ಎಂದಮೇಲೆ ಒಂದೇ ಚಿತ್ರದ ಎರಡು ಟೀಸರ್ ಯಾಕೆ ರಿಲೀಸ್ ಮಾಡಬೇಕಿತ್ತು ? ಇಬ್ಬರೂ ಇರುವ ಒಂದೇ

ಟೀಸರ್ ರಿಲೀಸ್ ಮಾಡಿದ್ದರೆ ಇಷ್ಟೊಂದು ಸಮಸ ಇರುತ್ತಿರಲಿಲ್ಲ ಈ ಚಿತ್ರದಲ್ಲಿ ಪ್ರತ್ಯೇಕ ನಾಯಕರ ಪ್ರತ್ಯೇಕ ಟೀಸರ್ ರಿಲೀಸ್ ಮಾಡಿ ಎಲ್ಲರೂ ಒಂದೇ ಎನ್ನುವ ಪ್ರೇಮ್ ಗೆ ಎರಡು ಟೀಸರ್ ಮಾಡುವ ಅವಶ್ಯಕತೆ ಏನಿತ್ತು ಎಂದು ಅಭಿಮಾನಿಗಳು ತಿರುಗೇಟು ಕೊಟ್ಟಿದ್ದಾರೆ.ಅಷ್ಟೇ ಅಲ್ಲದೇ ಪ್ರೇಮ್ ಕೆಲವು ಪೋಸ್ಟ್ ಗಳಲ್ಲಿ ಮೊದಲು ಸುದೀಪ್ ಹೆಸರು ಬರೆದು ಕೊನೆಯಲ್ಲಿ ಶಿವಣ್ಣನ ಹೆಸರು ಮೆನ್ಸನ್ ಮಾಡುವ ಮೂಲಕ ಶಿವಣ್ಣನವರಿಗೆ ಅವಮಾನ ಮಾಡುತ್ತಿದ್ದಾರೆ.ಇದರಲ್ಲೇ ಪ್ರೇಮ್ ಅವರ ಯೂನಿಟಿ ಬಗ್ಗೆ ತಿಳಿಯುತ್ತಿದೆ.

ಶಿವಣ್ಣನವರನ್ನು ದುರುಪಯೋಗ ಪಡಿಸಿಕೊಂಡ ಪ್ರೇಮ್ ಅಂತಹವರಿಂದ ನಾವು ಯೂನಿಟಿ ಪಾಠ ಕಲಿಯುವ ಅಗತ್ಯ ಇಲ್ಲ ಎಂದು ಶಿವಣ್ಣ ಫ್ಯಾನ್ಸ್ ಟ್ವಿಟರ್ ನಲ್ಲಿ ಪ್ರೇಮ್ ವಿರುದ್ದ ರೊಚ್ಚಿಗೆದ್ದಿದ್ದಾರೆ.ಆದರೆ ಪ್ರೇಮ್ ಮಾತ್ರ ಹೇಳಿದ್ದೇ ತಿರುಮಂತ್ರ ಎನ್ನುವ ಹಾಗೆ ಒಂದೇ ಕಾಮೆಂಟ್ ಅನ್ನು ಎಲ್ಲರಿಗೂ ರಿಪ್ಲೆ ಮಾಡುತ್ತಿದ್ಧಾರೆ.ಒಟ್ಟಿನಲ್ಲಿ ದಿ ವಿಲನ್ ಟೀಸರ್ ಬಿಡುಗಡೆಯಾದ ನಂತರ ಅದ್ಬುತವಾದ ಯಶಸ್ಸಿನ ಜೊತೆಗೆ ಅಷ್ಟೇ ವಿವಾದಗಳನ್ನು ಸಹ ಸೃಷ್ಟಿ ಮಾಡಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದೆ.ಇನ್ನು ಹಾಡುಗಳು ಟ್ರೈಲರ್ ಮತ್ತು ಸಿನಿಮಾ ತೆರೆಗೆ ಬರುವ ವೇಳೆಗೆ ಮತ್ತೇನೂ ವಿವಾದ ಸೃಷ್ಟಿಮಾಡಿಕೊಳ್ಳದಿರಲಿ ಎಂಬುದೇ ನಮ್ಮ ಆಶಯ.

Photos credit :- Twitter account

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here