ದಿ ವಿಲನ್ ಕ್ರೇಜ್ ದಿನೇ ದಿನೇ ಹೆಚ್ಚಾಗುತ್ತಲೇ ಇದೇ.ಇಂದು ಬೆಳಿಗ್ಗೆ ತಾನೇ ದಿ ವಿಲನ್ ಚಿತ್ರಕ್ಕೆ ಯು ಎ ಸರ್ಟಿಫಿಕೇಟ್ ಸಿಕ್ಕಿದ್ದರ ಬಗ್ಗೆ ಸುದ್ದಿ ತಿಳಿದಿದ್ದಿರಿ.ಈಗ ದಿ ವಿಲನ್ ಸೆಪ್ಟೆಂಬರ್ 21 ಅಥವಾ ಸೆಪ್ಟೆಂಬರ್ 28 ರಂದು ತೆರೆಗೆ ಬರುವುದು ಖಚಿತವಾಗಿದೆ. ಇದೇ ಗಣೇಶ ಚತುರ್ಥಿಯಂದು ದಿ ವಿಲನ್ ಚಿತ್ರದ ಅಡ್ವಾನ್ಸ್ ಬುಕಿಂಗ್ ರಾಜ್ಯಾದ್ಯಂತ ಸಿಗುವ ವ್ಯವಸ್ಥೆಯನ್ನು ಸಹ ಪ್ರೇಮ್ ಮಾಡುತ್ತಿದ್ದಾರೆ.‌ಈಗ  ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರ ಅಭಿಮಾನಿಗಳು ಮೆಚ್ಚಿನ ನಟರಿಬ್ಬರು ಒಟ್ಟಿಗೆ ನಟಿಸಿರುವುದನ್ನು ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ. ದಿ ವಿಲನ್

ಸಿನಿಮಾದ ಹೋಲ್ಡಿಂಗ್ ಗಾಗೂ ಥ್ರೀಡಿ ಪೋಸ್ಟರ್ ಈಗ ರಾಜ್ಯದ ಮಲ್ಟಿಪ್ಲೆಕ್ಸ್ ಮತ್ತು ಚಿತ್ರಮಂದಿರಗಳಲ್ಲಿ ಸಿದ್ದವಾಗುತ್ತಿವೆ. ಇನ್ನು ಇಂದು ದಿ ವಿಲನ್ ಬಿಡುಗಡೆಗೆ ಇನ್ನೂ ಅಧಿಕೃತ ದಿನಾಂಕ ಪ್ರಕಟವಾಗುವ ಮೊದಲೇ ಸೆಂಚುರಿ ಸ್ಟಾರ್ ಡಾ‌.ಶಿವರಾಜಕುಮಾರ್ ಅಭಿಮಾನಿಗಳು ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಇರುವ ಜಿ ಟಿ‌ ಮಾಲ್ ನಲ್ಲಿ ಡಾ.ಶಿವರಾಜಕುಮಾರ್ ಅವರ ದಿ ವಿಲನ್ ಹೋಲ್ಡಿಂಗ್ ಗೆ ನೋಟಿನ ಹಾರ ಹಾಗೂ ಹೂವಿನ ಹಾರ ಮತ್ತು ಮಣಿಯ ಹಾರಗಳನ್ನು ಹಾಕಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿರುವ ಫೋಟೋಸ್ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

ದಿ ವಿಲನ್ ಚಿತ್ರದಲ್ಲಿ ಡಾ.ಶಿವರಾಜಕುಮಾರ್ ಮತ್ತು ಕಿಚ್ಚ ಸುದೀಪ್ ಅವರು ಜೊತೆಯಾಗಿ ಇದೇ ಮೊದಲ ಬಾರಿಗೆ ಅಭಿನಯಿಸಿರುವುದು ಒಂದು ಕ್ರೇಜ್ ಆದರೆ ಪ್ರೇಮ್  ಈ ಚಿತ್ರದ ಸೂತ್ರಧಾರ ಆಗಿರುವುದು ಮತ್ತೊಂದು ಕ್ರೇಜ್. ಈಗಾಗಲೇ ಅರ್ಜುನ್ ಜನ್ಯಾ ಸಂಗೀತದ ಹಾಡುಗಳು ಸಿನಿರಸಿಕರಿಗೆ ಇಷ್ಟವಾಗಿರುವುದರಿಂದ ದಿ ವಿಲನ್ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here