ದಿ ವಿಲನ್ ನಿನ್ನೆ ತೆರೆಗೆ ಬಂದಿದೆ.ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ದಿ ವಿಲನ್ ಚಿತ್ರವನ್ನು ನೋಡಿದ ಶಿವರಾಜಕುಮಾರ್ ಅವರ ಅಭಿಮಾನಿಗಳು ಏನು ಮಾಡಿದ್ದಾರೆ ಗೊತ್ತಾ ? ದಿ ವಿಲನ್ ಚಿತ್ರದಲ್ಲಿ ಶಿವರಾಜಕುಮಾರ್ ಅವರಿಗೆ ಕೊಟ್ಟಿರುವ ಪಾತ್ರದ ಬಗ್ಗೆ ಅಸಮಧಾನ ಹೊರಹಾಕಿದ್ದಾರೆ. ದಿ ವಿಲನ್ ಚಿತ್ರ ನೋಡಿರುವ ಡಾ.ಶಿವರಾಜಕುಮಾರ್ ಅವರ ಅಭಿಮಾನಿಗಳಿಗೆ ದಿ ವಿಲನ್ ಖಂಡಿತವಾಗಿ ಖುಷಿ ಕೊಡುತ್ತಿಲ್ಲ ಎಂದು ಈ ಮೂಲಕ ಗೊತ್ತಾಗುತ್ತದೆ.ದಿ ವಿಲನ್ ಸಿನಿಮಾ ದ ಮೂಲಕ ಪ್ರೇಮ್ ಮತ್ತೊಮ್ಮೆ ಶಿವರಾಜಕುಮಾರ್ ಅವರ ಅಭಿಮಾನಿಗಳಿಗೆ ನಿರಾಶೆ ಮೂಡಿಸಿರುವುದು ಇಲ್ಲೇ ಗೊತ್ತಾಗುತ್ತಿದೆ. ನೊಂದಿರುವ ಶಿವರಾಜಕುಮಾರ್ ಅಭಿಮಾನಿಗಳು ಬಹಿರಂಗವಾಗಿ ಶಿವರಾಜ್ ಕುಮಾರ್ ಅವರಿಗೆ ಪತ್ರದ ಮೂಲಕ ಅಸಮಧಾನ ಹೊರಹಾಕಿದ್ದಾರೆ.ಶಿವಣ್ಣನ ಅಭಿಮಾನಿಗಳು ಶಿವಣ್ಣನಿಗೆ ಪತ್ರದಲ್ಲಿ ಬರೆದಿರುವ ಯಥಾವತ್ ರೂಪ ಇಲ್ಲಿದೆ ನೋಡಿ.

ಅಲ್ರೀ ನೀವುಗಳಾದರೂ ಶಿವಣ್ಣನಿಗೆ ಹೇಳಬಾರದಿತ್ತಾ..
“ಖಾಲಿ ಬುರುಡೆ” ಪ್ರೇಮ್ ನಿರ್ದೇಶನದ ಸಿನಿಮಾದಲ್ಲಿ ಮಾಡಿದರೆ, ಅವರ Image ಗೆ ದೊಡ್ಡ Damage ಆಗುತ್ತೆ ಅಂತ.

ಕರ್ನಾಟಕದಲ್ಲಿ/ ಸಮಸ್ತ ಕನ್ನಡಿಗರ ಹೃದಯದಲ್ಲಿ “ಅಣ್ಣಾವ್ರಿಗೆ” ಒಂದು ದೇವರ ಸ್ಥಾನವಿದೆ ಹಾಗೂ “ರಾಜವಂಶ” ದ ಬಗ್ಗೆ ಇನ್ನಿಲ್ಲದ ಗೌರವ/ಅಭಿಮಾನ ಇದೆ.
ಅದು ಸೂರ್ಯ-ಚಂದ್ರ ರಿರುವವರೆಗೂ ಸಹ ಶಾಶ್ವತವಾಗಿರುತ್ತದೆ.

ಆದರೆ, “ಕಿಚ್ಚ” ನ ಮುಂದೆ “ಓಂ” “ಶಿವಣ್ಣ” ನನ್ನು ಡಮ್ಮಿ ಮಾಡಿರುವ “ಪ್ರೇಮ್” ಎಂಬ ಊಸರವಳ್ಳಿಯ ಬಳಿ “ಕಥೆ-ಚಿತ್ರಕಥೆ” ಯನ್ನೇ ಕೇಳದೆ call sheet ಕೊಟ್ಟಿದ್ದಾದರೂ ಏಕೆ ? ಎಂಬ ಅಭಿಮಾನಿಗಳ ಪ್ರಶ್ನೆಗೆ ಶಿವಣ್ಣ ಉತ್ತರಿಸಬೇಕಿದೆ…

ಶಿವಣ್ಣನಿಗೆ, ತನ್ನನ್ನು ಇನ್ನಿಲ್ಲದಂತೆ ಪ್ರೀತಿಸುವ ನಿಷ್ಕಲ್ಮಶ ಅಭಿಮಾನಿಗಳ “ಸ್ವಾಭಿಮಾನ” ಮುಖ್ಯವಾಗಿರಬೇಕಿತ್ತೇ ಹೊರತು, ತನಗಿಂತ ಮಿಗಿಲಾರೂ ಇಲ್ಲ ಎಂಬ ಹುಸಿ ಭ್ರಮೆ ಯಲ್ಲಿರುವ “ಕಿಚ್ಚ” ನ ಒಡನಾಟವಲ್ಲ..

ಅಂತೂ ಶಿವಣ್ಣನ ತಪ್ಪು ನಿರ್ಧಾರದಿಂದಾಗಿ, “ಅಣ್ಣಾವ್ರ ವಂಶ” ದ ನೈಜ ಅಭಿಮಾನಿಗಳೆಲ್ಲಾ – ಈಗ ಅಹಂಕಾರಿಯ ಹಿಂಬಾಲಕರ ಮುಂದೆ ತಲೆ ತಗ್ಗಿಸುವಂತಾಗಿರುವುದಂತೂ ಅಕ್ಷರಶಃ ಸತ್ಯ..

ಕಳೆದ ಹತ್ತು ವರ್ಷಗಳಲ್ಲಿ Single Screen ಇರುವ 08 ಚಿತ್ರಮಂದಿರಗಳಲ್ಲಿ 125 ದಿನಗಳನ್ನು ಯಶಸ್ವಿಯಾಗಿ ಪ್ರದರ್ಶನ ಕಂಡಂತಹ ಏಕೈಕ ಚಿತ್ರ ಎಂಬ ಹಿರಿಮೆಗೆ ಪಾತ್ರವಾಗಿರುವ “ಟಗರು” ಚಿತ್ರದ ನಾಯಕನಾಗಿರುವ “ಶಿವಣ್ಣನವರಿಗೆ ಈ ಪಾತ್ರದ ಅವಶ್ಯಕತೆ ಇತ್ತಾ ?.

” ವಿಲನ್” ಎಂಬ ಪರಮ ಅಧ್ವಾನದ ಚಿತ್ರದಲ್ಲಿ ನಟಿಸಲೇಬೇಕೆಂಬ ಜರೂರು ಶಿವಣ್ಣನಿಗಿತ್ತೆ…

ಅಥವಾ, ಶಿವಣ್ಣನ ಒಳ್ಳೆಯತನವನ್ನು ಇಷ್ಟೊಂದು ಸ್ವಾರ್ಥಪರನಾಗಿ ಬಳಸಿಕೊಳ್ಳುವ ಭಂಡ ಧೈರ್ಯ “ಪ್ರಚಾರ ಪ್ರಿಯ ತಿಕ್ಕಲ ಪ್ರೇಮ್” ಗೆ ಬಂದದ್ದಾದರೂ ಹೇಗೆ ???

“ಈ ಸಿನಿಮಾವನ್ನು ಒಪ್ಪಿಕೊಳ್ಳುವ ಮೊದಲು ಶಿವಣ್ಣ ಒಮ್ಮೆ
ಅಭಿಮಾನಿಗಳ ಬಗ್ಗೆ ಹಾಗೂ ಅದಕ್ಕಿಂತಲೂ ಮುಖ್ಯವಾಗಿ ಅಣ್ಣಾವ್ರಿಗೆ ಇರುವ ಗೌರವ – ಪ್ರತಿಷ್ಠೆ – ತೂಕ – ವ್ಯಕ್ತಿತ್ವ ಗಳ ಬಗ್ಗೆ ನಿಜಕ್ಕೂ ಯೋಚಿಸಬೇಕಿತ್ತು”.

ಏಕೆಂದರೆ, ಕರ್ನಾಟಕದಲ್ಲಿ – ಕನ್ನಡಿಗರ ಹೃದಯಾಂತರಾಳದಲ್ಲಿ ಅಣ್ಣಾವ್ರ ಸ್ಥಾನವನ್ನು ಬೇರೆ ಯಾರೂ ಪಡೆಯಲು ಸಾಧ್ಯವಿಲ್ಲವೆಂಬ ಪರಮ ಸತ್ಯವನ್ನು ಬಲ್ಲವರು ನಾವು…

ಅದಕ್ಕಾಗಿ ಇಷ್ಟೆಲ್ಲಾ ಹೇಳಬೇಕಾಯಿತು….

—ಎನ್.ಆರ್.ರಮೇಶ್

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here