ಕನ್ನಡ ಚಿತ್ರರಂಗದ ಬಹು ನಿರೀಕ್ಷೆಯ ಬಿಗ್ ಬಜೆಟ್ ನ ಸಿನಿಮಾ ದಿ ವಿಲನ್.ಸ್ಟಾರ್ ಡೈರೆಕ್ಟರ್ ಪ್ರೇಮ್ ನಿರ್ದೇಶನದ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಮತ್ತು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರು ಇದೇ ಮೊದಲ ಬಾರಿಗೆ ಜೊತೆಯಾಗಿ ಅಭಿನಯಿಸುತ್ತಿರುವ ಕನ್ನಡ ಚಿತ್ರರಂಗದ ದುಬಾರಿ ಬಜೆಟ್ ನ  ದಿ ವಿಲನ್ ಸಿನಿಮಾದ ಎರಡನೇ ಹಾಡು ಇಂದು ರಿಲೀಸ್ ಆಗಿದೆ.ಅರ್ಜುನ್ ಜನ್ಯಾ ಅವರ ಅಧ್ಬುತವಾದ ಸಂಗೀತದಲ್ಲಿ ಮೂಡಿ ಬಂದಿರುವ ದಿ ವಿಲನ್ ಚಿತ್ರದ ಎಲ್ಲಾ ಹಾಡುಗಳೂ ಒಂದಕ್ಕಿಂತ ಒಂದು ಸೌಂಡ್ ಮಾಡುವಂತಿವೆ.ಇಂದು ರಿಲೀಸ್ ಆಗಿರುವ ಎರಡನೇ ಹಾಡು ಸಹ ಬಿಡುಗಡೆ ಆದ ಕೆಲವೇ ಕ್ಷಣಗಳಲ್ಲಿ ಫುಲ್ ವೈರಲ್ ಆಗುತ್ತಿದೆ.

ಮೊದಲ ಹಾಡಿನಲ್ಲಿ ಸುದೀಪ್ ಅಭಿಮಾನಿಗಳಿಗೆ ಸಖತ್ ಇಷ್ಟವಾಗುವಂತ ಹಾಡನ್ನು ನೀಡಿದ್ದ ಪ್ರೇಮ್ ಅವರು ಡಾ.ಶಿವರಾಜಕುಮಾರ್ ಅವರ ಅಭಿಮಾನಿಗಳಿಗೆ ತುಂಬಾ ಇಷ್ಟವಾಗುವಂತ ಸಾಹಿತ್ಯ ಇರುವ ದಿ ವಿಲನ್ ಚಿತ್ರದ ಎರಡನೇ ಹಾಡನ್ನು ಇಂದು ಯೂಟ್ಯೂಬ್‌ ನಲ್ಲಿ ಬಿಡುಗಡೆ ಮಾಡಿದ್ದಾರೆ. ದಿ ವಿಲನ್ ಚಿತ್ರದ ಈ ಹಾಡಿನ ಬಗ್ಗೆ ಕೆಲ ದಿನಗಳ ಹಿಂದೆ ಬಾರೀ ಚರ್ಚೆ ನಡೆದಿತ್ತು‌.ಅದೇ ಹಾಡು ಇಂದು ರಿಲೀಸ್ ಆಗಿದೆ.ಬಿಡು ಬಿಡು ಬಿಡು ಬಿಡು ನಾನು ಅನ್ನೋದು ಮೊದ್ಲು ಬಿಡು ಶಿವ ಶಂಕರಾ ಎಂದು ಆರಂಭವಾಗುವ ಈ ಹಾಡನ್ನು ಶಿವರಾಜಕುಮಾರ್ ಅವರ ಅಭಿಮಾನಿಗಳಿಗಾಗಿಯೇ ಬರೆದಂತಿದೆ.

ಹಾಡು ಕೇಳಿ ಸಖತ್ ಥ್ರಿಲ್ ಆಗಿರುವ ಅಭಿಮಾನಿಗಳು ದಿ ವಿಲನ್ ಚಿತ್ರದ ಮೇಲೆ ಸಿಕ್ಕಿ ಪಟ್ಟೆ ಕಾಯುವಂತಾಗಿದ್ದಾರೆ.ಯಾವಾಗಲೂ ತಮ್ಮ ನಿರ್ದೇಶನದ ಸಿನಿಮಾಗಳಲ್ಲಿ ಸಂಗೀತಕ್ಕೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಡುವ ನಿರ್ದೇಶಕ ಪ್ರೇಮ್ ಅವರು ಈ ಬಾರಿ ಮಲ್ಟಿಸ್ಟಾರ್ ಸಿನಿಮಾದಲ್ಲಿ ಅಭಿಮಾನಿಗಳಿಗೆ ನಿರಾಶೆ ಮಾಡದಂತೆ ಅರ್ಜುನ್ ಜನ್ಯಾ ಸಾರಥ್ಯದಲ್ಲಿ ಸಂಗೀತ ಮಾಡಿಸಿದ್ದಾರೆ.ಟೀಸರ್ ಮೂಲಕ ಸೆನ್ಸೇಸನ್ ಕ್ರಿಯೇಟ್ ಮಾಡಿದ್ದ ದಿ ವಿಲನ್ ಮೊದಲ ಹಾಡಿನ ಮೂಲಕ ಸಹ ಸಖತ್ ಸೌಂಡ್ ಮಾಡಿದ್ದರು.

ಮಚ್ಚು ಗಿಚ್ಚು ಹಿಡಿದೋನಲ್ಲಾ ಆದ್ರು ರಾಜ್ಯ ಆಳ್ತಾವ್ನಲ್ಲ ಎನ್ನುವ ಮಾಸ್ ಸಾಂಗ್ ಮೂಲಕ ಸುದೀಪ್ ಅಭಿಮಾನಿಗಳಿಗೆ ಹುಚ್ಚು ಹಿಡಿಸಿದ್ದರು.ಇದೀಗ ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಅವರ ಅಭಿಮಾನಿಗಳಿಗಾಗಿ ಮಾಡಿರುವ ಹಾಡು ಯೂಟ್ಯೂಬ್‌ ನಲ್ಲಿ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದ್ದು ಹಾಡು ಕೇಳಿದ ಶಿವರಾಜಕುಮಾರ್ ಅಭಿಮಾನಿಗಳು ಸಖತ್ ಖುಷಿ ವ್ಯಕ್ತಪಡಿಸಿದ್ದಾರೆ.ಈ ಸಖತ್ ಮಾಸ್ ಸಾಂಗ್ ಇಲ್ಲಿದೆ ಕೇಳಿ

https://youtu.be/UCTB_MEXw2c

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here