ಇದೇ ಮೊದಲ ಬಾರಿಗೆ ಶಿವರಾಜ್ ಕುಮಾರ್ ಮತ್ತು ಸುದೀಪ್ ಜೊತೆಯಾಗಿ ಒಂದೇ ಚಿತ್ರದಲ್ಲಿ ಅಭಿನಯಿಸುತ್ತಿರುವ ಪ್ರೇಮ್ ನಿರ್ದೇಶನದ ಬಹುನಿರೀಕ್ಷೆಯ ದಿ ವಿಲನ್ ಚಿತ್ರದ ಹಾಡುಗಳ ಚಿತ್ರೀಕರಣ ಭರದಿಂದ ನಡೆದಿದೆ.ನಿರ್ದೇಶನದ ಮೂಲಕವೇ ಇಡೀ ಭಾರತ ಚಿತ್ರರಂಗ ಕನ್ನಡದತ್ತ ನೋಡುವಂತೆ ಮಾಡುವ ಪ್ರೇಮ್ ಈ ಬಾರಿ ಮ್ಯಾಜಿಕ್ ಮಾಡೋದು ಪಕ್ಕಾ.

ಒಂದು ಕಡೆ ಶಿವರಾಜ್ ಕುಮಾರ್ ಅವರ ಇಂಟ್ರಡಕ್ಸನ್ ಹಾಡಿನ ಚಿತ್ರೀಕರಣ ನಡೆಯುತ್ತಿದೆ ವಿಶೇಷವಾಗಿಈ ಹಾಡಿನಲ್ಲಿ ಖ್ಯಾತ ನಟಿಯರಾದ ರಚಿತಾ ರಾಮ್ ,ಶ್ರದ್ಧಾ ಶ್ರೀನಾಥ್ ,ರಾಧಿಕಾ ಚೇತನ್ ,ಭಾವನಾ ರಾವ್ , ಸಂಯುಕ್ತಾ ಹೊರನಾಡು ಮತ್ತು ಶಾನ್ವಿ ಶ್ರೀವಾತ್ಸವ್ ಅವರು ಡಾ.ಶಿವರಾಜ್ ಕುಮಾರ್ ಅವರ ಜೊತೆ ಹೆಜ್ಜೆ ಹಾಕಿದ್ದಾರೆ.

ಈಗಾಗಲೇ ಕಳೆದ ಮೂರು ದಿನಗಳಿಂದ ಮದ್ದೂರು ಸಮೀಪದ ತೈಲೂರು ಎಂಬ ಹಳ್ಳಿಯ ಬಳಿ ದಿ ವಿಲನ್ ಚಿತ್ರದ ಈ ಹಾಡಿನ ಚಿತ್ರೀಕರಣ ನಡೆದಿದೆ.ಮತ್ತೊಂದೆಡೆ ಕಿಚ್ಚ ಸುದೀಪ್ ಅವರ ಇಂಟ್ರಡಕ್ಸನ್ ಹಾಡಿನ ಚಿತ್ರೀಕರಣ ಸಹ ಅದ್ದೂರಿಯಾಗಿ ನಡೆಯುತ್ತಿದೆ.

ಸುಮಾರು ಎರಡು ಕೋಟಿ ರೂ ವೆಚ್ಚದಲ್ಲಿ ಸುದೀಪ್ ಇಂಟ್ರಡಕ್ಸನ್ ಸಾಂಗ್ ಅನ್ನು ಚಿತ್ರೀಕರಿಸಲಾಗುತ್ತಿದ್ದು ವಿಷ್ಣುವರ್ಧನ್ ಅವರ ಸಮಾಧಿ ಬಳಿ ಕೂಡ ಚಿತ್ರೀಕರಣ ನಡೆದಿದೆ ವಿಲನ್ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು ಇನ್ನು ಮೂರು ಹಾಡುಗಳ

 

ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆ ಎಂದು ಚಿತ್ರದ ನಿರ್ದೇಶಕ ಪ್ರೇಮ್ ತಿಳಿಸಿದ್ದಾರೆ.ಈ ಚಿತ್ರವನ್ನು ಸುಮಾರು 50 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗುತ್ತಿದ್ದು ಎಸ್ ಮನೋಹರ್ ದಿ ವಿಲನ್ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ‌.ಅರ್ಜುನ್ ಜನ್ಯಾ ದಿ ವಿಲನ್ ಚಿತ್ರದ ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here