ಬಿಡುಗಡೆಯ ಮುನ್ನ ಹಾಗೂ ಬಿಡುಗಡೆಯ ನಂತರ ಸ್ಯಾಂಡಲ್ ವುಡ್ ನಲ್ಲಿ ಭಾರಿ ಸದ್ದನ್ನು ಮಾಡಿದ್ದ ಪ್ರೇಮ್ ನಿರ್ದೇಶನ, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಹಾಗೂ ಕಿಚ್ಚ ಸುದೀಪ್ ಅಭಿನಯದ ಚಿತ್ರ ದಿ ವಿಲನ್. ಸಿನಿಮಾ ಬಿಡುಗಡೆಯ ಮುನ್ನ ತನ್ನ ವಿವಿಧ ಆಸಕ್ತಿಕರ ವಿಷಯಗಳಿಂದ ಅಭಿಮಾನಿ ಹಾಗೂ ಸಿನಿರಸಿಕರ ಮನಗಳಲ್ಲಿ ಕುತೂಹಲವನ್ನು ಮೂಡಿಸಿತ್ತು. ಹಾಗೂ ಬಿಡುಗಡೆಯ ನಂತರ ಕೂಡಾ ಕೆಲವು ವಿವಾದ, ಕೆಲವು ಅಸಮಾಧಾನ ಹಾಗೂ ಕೆಲವು ಸಣ್ಣ ಪ್ರಮಾಣದ ಗಲಭೆಗಳಿಂದಲೂ ಚಿತ್ರ ಮಾದ್ಯಮಗಳಲ್ಲಿ ಸದ್ದಾಗಿತ್ತು. ದಿ ವಿಲನ್ ಹಲವು ಕಾರಣಗಳಿಗಾಗಿ ಒಂದಲ್ಲಾ ಒಂದು ವಾಹಿನಿಯಲ್ಲಿ ಸ್ಥಾನ ಪಡೆದುಕೊಂಡಿತ್ತು. ಈಗ ಚಿತ್ರಕ್ಕೆ ಮತ್ತೊಂದು ಸಂಕಟ ಎದುರಾಗಿದೆ. ಅದೇನೆಂದು ಈಗ ತಿಳಿಯೋಣ.

ದಿ ವಿಲನ್ ಚಿತ್ರದ ದೃಶ್ಯಗಳಿಗೆ ಸಂಬಂಧಿಸಿದಂತೆ , ದೃಶ್ಯವೊಂದನ್ನು ವಿರೋಧಿಸಿ ಚಿತ್ರ ನಿರ್ದೇಶಕ ಪ್ರೇಮ್ ಹಾಗೂ ನಾಯಕನಟ ಸುದೀಪ್ ವಿರುದ್ಧ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ದೂರೊಂದು ದಾಖಲಾಗಿದೆ. ಆರೋಪ ಏನೆಂಬ ವಿಷಯಕ್ಕೆ ಬಂದರೆ ಈ ಚಿತ್ರದ ದೃಶ್ಯವೊಂದರಲ್ಲಿ ಕನ್ನಡ ಬಾವುಟಕ್ಕೆ ಅವಮಾನ ಮಾಡಲಾಗಿದೆ ಎಂಬುದಾಗಿದೆ. ಕರ್ನಾಟಕ ಸಂಘಟನೆ ಒಕ್ಕೂಟದ ಅಧ್ಯಕ್ಷರಾದ ನಾಗೇಶ್ ಎಂಬುವವರೇ ಈಗ ನಿರ್ದೇಶಕ ಪ್ರೇಮ್ ಹಾಗೂ ನಾಯಕ ಕಿಚ್ಚ ಸುದೀಪ್ ವಿರುದ್ಧ ವಾಣಿಜ್ಯ ಮಂಡಳಿಯಲ್ಲಿ ದೂರನ್ನು ನೀಡಿರುವುದು.

ಇನ್ನು ಚಿತ್ರದಲ್ಲಿ ಯಾವ ರೀತಿ ಅವಮಾನವಾಗಿದೆ ಎಂಬ ವಿಷಯಕ್ಕೆ ಬಂದರೆ, ಚಿತ್ರದ ಹಾಡಿನ ದೃಶ್ಯವೊಂದರಲ್ಲಿ ಸುದೀಪ್ ಅವರು ಕನ್ನಡದ ಬಾವುಟವನ್ನು ತಮ್ಮ ಸೊಂಟಕ್ಕೆ ಸುತ್ತಿಕೊಳ್ಳುತ್ತಾರೆ. ಇದೇ ಕಾರಣಕ್ಕಾಗಿ ಅವರ ವಿರುದ್ಧ ದೂರು ‌ನೀಡಲಾಗಿದೆ. ಸದ್ಯಕ್ಕೆ ಪ್ರೇಮ್ ಹಾಗೂ ಸುದೀಪ್ ಇಬ್ಬರೂ ಈ ವಿಷಯಕ್ಕೆ ಸಂಬಂಧಿಸಿದಂತೆ ಕ್ಷಮೆ ಯಾಚಿಸಬೇಕು. ಇಲ್ಲದಿದ್ದರೆ ಬರುವ ದಿನಗಳಲ್ಲಿ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ ಎಂದು ಈ ಕನ್ನಡ ಸಂಘಟನೆಯು ಎಚ್ಚರಿಕೆಯನ್ನು ಸಹಾ ನೀಡಿದೆ. ವಿಷಯ ಮುಂದೆ ಯಾವ ಹಂತಕ್ಕೆ ತಲುಪಲಿದೆ ಎಂದು ಕಾದು ನೋಡಬೇಕಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here