ಬಾರೀ ಕುತೂಹಲ ಹುಟ್ಟಿಸಿದ್ದ ದಿ ವಿಲನ್ ಚಿತ್ರ ತೆರೆಗೆ ಬಂದಿದೆ. ಯಾರು ದಿ ವಿಲನ್ ಚಿತ್ರದ ವಿಲನ್ ಎಂಬ ಪ್ರಶ್ನೆಗೆ ಉತ್ತರವೂ ಸಿಕ್ಕಿದೆ. ಪ್ರೇಮ್ ಸಿನಿಮಾ ಎಂದಮೇಲೆ ಅದಕ್ಕೆ ಮಿಶ್ರ ಪ್ರತಿಕ್ರಿಯೆ ಖಾಯಂ ಎನ್ನುವ ಕೆಲ ಜನರ ಮಾತಿನಂತೆ ದಿ ವಿಲನ್ ಚಿತ್ರಕ್ಕೂ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮಿಶ್ರ ಪ್ರತಿಕ್ರಿಯೆಯ ನಡುವೆಯೂ ದಿ ವಿಲನ್ ಚಿತ್ರದ ಮೊದಲ ದಿನದ ಕಲೆಕ್ಸನ್ ಈ‌ ಹಿಂದಿನ ಕನ್ನಡ ಚಿತ್ರರಂಗದ ಎಲ್ಲಾ ದಾಖಲೆಗಳನ್ನು ಮುರಿದು ಹಾಕಿದೆ. ದಿ ವಿಲನ್ ಚಿತ್ರದಲ್ಲಿ ಸುದೀಪ್ ಅವರಿಗೆ ಇಷ್ಟವಾದ ಡೈಲಾಗ್ ಯಾವುದು ಎಂದು ಸುದೀಪ್ ಅವರೇ ಬಹಿರಂಗ ಪಡಿಸಿದ್ದಾರೆ. ನರ್ತಕಿ ಚಿತ್ರಮಂದಿರಕ್ಕೆ ದಿ ವಿಲನ್ ಚಿತ್ರತಂಡ ಭೇಟಿ ನೀಡಿತ್ತು. ಈ ಸಮಯದಲ್ಲಿ ನಿರ್ದೇಶಕ ಪ್ರೇಮ್ ಜೊತೆ ಡಾ.ಶಿವರಾಜಕುಮಾರ್ , ಸುದೀಪ್ ಮತ್ತು ದಿ ವಿಲನ್ ಚಿತ್ರದ ನಿರ್ಮಾಪಕರಾದ ಮನೋಹರ್ ಬಂದಿದ್ದರು.

ದಿ ವಿಲನ್ ಎರಡು ದಿನಗಳಿಂದ 32 ಕೋಟಿ  ಕಲೆಕ್ಸನ್ ಪಡೆದುಕೊಂಡಿದೆಯಂಬ ಮಾಹಿತಿ ಇದೆ‌ .
ದಿ ವಿಲನ್ ಚಿತ್ರದಲ್ಲಿ ಡಾ‌. ಶಿವರಾಜಕುಮಾರ್ ಮತ್ತು ಸುದೀಪ್ ಮುಖಾಮುಖಿಯಾಗುವ ಸಂದರ್ಭಗಳು ಬಹಳ ಕಡಿಮೆ ಎನ್ನಬಹುದು. ಮಲ್ಟಿಸ್ಟಾರ್ ಸಿನಿಮಾ ಎಂದಮೇಲೆ ನಟರಿಬ್ಬರನ್ನು ಒಟ್ಟಿಗೆ ಕಾಣುವುದು ಅಭಿಮಾನಿಗಳಿಗೆ ಹಬ್ಬದ ಸಡಗರ. ಇನ್ನು ದಿ ವಿಲನ್ ಚಿತ್ರದಲ್ಲಿ ಶಿವಣ್ಣ ಮತ್ತು ಸುದೀಪ್ ಎದುರಾಗುವ ದೃಶ್ಯಗಳು ಕಮ್ಮಿಯಿದ್ದರೂ ಇಬ್ಬರು ನಟರು ಒಟ್ಟಿಗೆ ಸೇರುವ ಸಂದರ್ಭಗಳಲ್ಲಿ ಅಭಿಮಾನಿಗಳಿಂದ ಚಪ್ಪಾಳೆ ಶಿಳ್ಳೆಗಳಿಗೆ ಬರವಿಲ್ಲ. ಇನ್ನು ದಿ ವಿಲನ್ ಚಿತ್ರ ಬಿಡುಗಡೆಯ ಸಂದರ್ಭದಲ್ಲಿ ನರ್ತಕಿ‌ ಚಿತ್ರಮಂದಿರಕ್ಕೆ ಬಂದಿದ್ದ ಡಾ.ಶಿವರಾಜಕುಮಾರ್ ಮತ್ತು ಕಿಚ್ಚ ಸುದೀಪ್ ಜಂಟಿಯಾಗಿ ಮಾಧ್ಯಮಗಳ ಜೊತೆ ಮಾತನಾಡಿದರು.

ಈ ಸಮಯದಲ್ಲಿ ಮಾಧ್ಯಮದವರು ಸುದೀಪ್ ಅವರಿಗೆ ಈ ಚಿತ್ರದಲ್ಲಿ ನಿಮಗೆ ತುಂಬಾ ಇಷ್ಟವಾದ ಡೈಲಾಗ್ ಯಾವುದು ಎಂದು ಕೇಳಿದಾಗ ಉತ್ತರಿಸಿದ ಸುದೀಪ್ ಅವರು ಈ ಚಿತ್ರದ ಕ್ಲೈಮಾಕ್ಸ್ ನ ಫೈಟ್ ಸಂದರ್ಭದಲ್ಲಿ ಶಿವಣ್ಣ ಅವರು ನನ್ನ ಪಾತ್ರದ ಕುರಿತು ವಿಲನ್ ಗಳಿಗೆ ಹೇಳುವ ಡೈಲಾಗ್ ಇದೆ ಅದು ಶಿವಣ್ಣ ಸುದೀಪ್ ಗೆ ನಾವಿಬ್ಬರು ಒಂದೇ ತಾಯಿ ಹೊಟ್ಟೆಯಲ್ಲಿ ಹುಟ್ಟದಿರಬಹುದು ಆದರೆ ಅವನು ಎಂದಿಗೂ ನನ್ನ ತಮ್ಮನೇ ಎಂದು ಸುದೀಪ್ ಗೆ ಶಿವಣ್ಣ ಹೇಳುವ ಡೈಲಾಗ್ ತುಂಬಾ ಮನಮುಟ್ಟಿದೆಯಂತೆ.ಈ ವಿಚಾರವನ್ನು ಸುದೀಪ್ ಅವರು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here