ಕಳೆದ ಒಂದು ವರ್ಷದಿಂದ ಸಿನಿಮಾ ಪ್ರೇಮಿಗಳಿಗೆ ಸಾಕಷ್ಟು ನಿರೀಕ್ಷೆ ಮೂಡಿಸಿದ್ದ ದಿ ವಿಲನ್ ಚಿತ್ರದ ಟೀಸರ್ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ‌.
ಕೊನೆಗೂ ಬಹುದಿನಗಳಿಂದ ಕಾತುರದಿಂದ ಕಾಯುತ್ತಿದ್ದ ಕ್ಷಣ ಸಮೀಪಿಸುತ್ತಿದೆ. ಕಿಚ್ಚ ಮತ್ತು ಶಿವಣ್ಣನ ಅಭಿಮಾನಿಗಳು ಜೂ.28ಕ್ಕಾಗಿ ತುದಿಗಾಲಲ್ಲಿ ನಿಂತು ಕಾಯುತ್ತಿದ್ದಾರೆ, ಕಾರಣವಿಷ್ಟೇ ಅಂದು ಬಿಗ್ ಬಜೆಟ್ , ಮಲ್ಟಿ ಸ್ಟಾರ್ , ಬಹು ನಿರೀಕ್ಷಿತ ವಿಲನ್ ಚಿತ್ರದ ಟ್ರೈಲರ್ ಬಿಡುಗಡೆಯಾಗಲಿದೆ. ಗಿಮಿಕ್ ಡೈರೆಕ್ಟರ್ ಎಂದೇ ಹೆಸರು ಮಾಡಿರುವ ಜೋಗಿ ಪ್ರೇಮ್ ಇಲ್ಲೂ ಕೂಡ ತಮ್ಮ ವಿಭಿನ್ನ ಪ್ರಚಾರದ ತಂತ್ರ ಬಳಸಿಕೊಂಡಿದ್ದು ಟೀಸರ್ ಬಿಡುಗಡೆಯನ್ನು ವಿಭಿನ್ನ ಮತ್ತು ವಿಶೇಷವಾಗಿಸಲು ನಿರ್ಧರಿಸಿದ್ದಾರೆ .ಇನ್ನು ಇದೇ ಮೊದಲ ಬಾರಿಗೆ ಒಂದೆ ಚಿತ್ರದ ಎರಡು ಟೀಸರ್ ಒಂದೆ ದಿನ ರಿಲೀಸ್ ಆಗಲಿದೆ.ಶಿವರಾಜಕುಮಾರ್ ಮತ್ತು ಸುದೀಪ್ ಅಭಿಮಾನಿಗಳಿಗಾಗಿ ಪ್ರತ್ಯೇಕ ಟೀಸರ್ ರಿಲೀಸ್ ಮಾಡಲಾಗುತ್ತಿದೆ‌.

“ದಿ ವಿಲನ್” ಟೀಸರ್ ಇದೇ 28 ರಂದು ಮಾಗಡಿ ರೋಡ್ನಲ್ಲಿರುವ ಜಿ.ಟಿ. ವಾರ್ಡ್ ಮಾಲ್ ನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ. ಮಾಲ್ ನ ಎಲ್ಲಾ ಪರದೆಯ ಮೇಲೆ ಈ ಟೀಸರ್ ಬಿಡುಗಡೆಯಾಗುತ್ತಿರುವುದು ವಿಶೇಷ. ಈ ಒಂದು ಕಾರ್ಯಕ್ರಮಕ್ಕೆ ಸನ್ಮಾನ್ಯ ಮುಖ್ಯಮಂತ್ರಿಗಳಾದ ಎಚ್. ಡಿ. ಕುಮಾರಸ್ವಾಮಿ ಆಗಮಿಸಿ ಟೀಸರ್ ಲೋಕಾರ್ಪಣೆ ಮಾಡಲಿದ್ದಾರoತೆ.ಈ ಒಂದು ಟೀಸರ್ ನೋಡಲು ಬರುವ ಅಭಿಮಾನಿಗಳಿಗೆ 500 ರೊ ಟಿಕೆಟ್ ದರವನ್ನು ನಿಗದಿಪಡಿಸಲಾಗಿದೆ.ಇದಕ್ಕೆ ಒಂದು ಕಾರಣವೂ ಕೂಡ ಇದೇ. ಸಿ.ಆರ್.ಮನೋಹರ್ ನಿರ್ಮಾಣದ ಈ ಚಿತ್ರವನ್ನು ಜೋಗಿ ಪ್ರೇಮ್ ನಿರ್ದೇಶನ ಮಾಡಿದ್ದಾರೆ . ಈ ಚಿತ್ರ ಬಹಳಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ. ಸಾಮಾನ್ಯವಾಗಿ ಒಂದು ಚಿತ್ರಕ್ಕೆ ನಿರ್ದೇಶಕನೇ ನಾಯಕ. ಅಂತ ಹಲವಾರು ನಾಯಕರ ಸ್ಥಿತಿ ಇಂದು ತುಂಬಾ ಕಷ್ಟದಲ್ಲಿದ್ದಾರೆ. ಹಾಗಾಗಿಯೇ ಈ ಒಂದು ಚಿತ್ರದ ಟೀಸರ್ ಬಿಡುಗಡೆ ಕಾರ್ಯಕ್ರಮಕ್ಕೆ ಬರುವ ಸಿನಿಪ್ರಿಯರು 500 ರೊ ಕೊಟ್ಟು ಟಿಕೆಟ್ ಅನ್ನು ಪಡೆದರೆ ಆ ಹಣವನ್ನೆಲ್ಲ ಸೇರಿಸಿ ತೊಂದರೆಯಲ್ಲಿರುವ ನಿರ್ದೇಶಕ ಎ.ಟಿ .ರಘು ಹಾಗೂ ಎ.ಆರ್. ಬಾಬು ಸೇರಿದಂತೆ ಇನ್ನೂ ಕೆಲವು ನಿರ್ದೇಶಕರಿಗೆ ಸಹಾಯ ಮಾಡುವ ಉದ್ದೇಶವೂ ಈ ಚಿತ್ರ ತಂಡಕ್ಕೆ ಇದೆಯಂತೆ. “ದಿ ವಿಲನ್” ಚಿತ್ರಕ್ಕೆ ಅರ್ಜುನ್ ಜನ್ಯ ರ ಸಂಗೀತ ಸಂಗೀತದ ಮೋಡಿ ಇರುವ ಈ ಚಿತ್ರದ ಟೀಸರ್ ಇದೇ 28 ರಂದು ಸಂಜೆ 7 ಗಂಟೆಗೆ ಜಿ.ಟಿ.ವಾರ್ಡ್ ಮಾಲ್ ನಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here