ಕನ್ನಡ ಚಿತ್ರರಂಗದ ಬಹುನಿರೀಕ್ಷೆಯ ಬಿಗ್ ಬಜೆಟ್ ಚಿತ್ರ ದಿ ವಿಲನ್ , ಇದೇ ಮೊದಲ ಬಾರಿಗೆ ಸೆಂಚುರಿ ಸ್ಟಾರ್ ಡಾ.ಶಿವರಾಜಕುಮಾರ್ ಮತ್ತು ಕಿಚ್ಚ ಸುದೀಪ್ ಇದೇ ಪ್ರಥಮಬಾರಿಗೆ ಜೊತೆಯಾಗಿ ಒಂದೇ ಚಿತ್ರದಲ್ಲಿ ಕಾಣಿಸಿಕೊಂಡಿರುವ ದಿ ವಿಲನ್ ಗೆ ಯಶಸ್ವಿ ನಿರ್ದೇಶಕ ಪ್ರೇಮ್ ಆಕ್ಸನ್ ಕಟ್ ಹೇಳಿದ್ದಾರೆ‌.

ಬಹುತೇಕ ಚಿತ್ರೀಕರಣ ಮುಗಿಸಿರುವ ದಿ ವಿಲನ್ ಚಿತ್ರ ಈ ವರ್ಷದ ವರಮಹಾಲಕ್ಷ್ಮಿ ಹಬ್ಬದಂದು ತೆರೆಗೆ ಬರಲಿದೆ ಎಂದು ಈಗಾಗಲೇ ದಿ ವಿಲನ್ ನಿರ್ದೇಶಕ ಪ್ರೇಮ್ ತಿಳಿಸಿದ್ದಾರೆ.ಇದೀಗ ದಿ ವಿಲನ್ ಚಿತ್ರದ ಎರಡು ಪ್ರತ್ಯೇಕ ಪೋಸ್ಟರ್ ರಿಲೀಸ್ ಆಗಿವೆ.ಒಂದು ಪೋಸ್ಟರ್ ನಲ್ಲಿ ಡಾ.ಶಿವರಾಜಕುಮಾರ್ ಸಖತ್ ಸ್ಟೈಲೀಶ್ ಲುಕ್ ನಲ್ಲಿ ಮಿಂಚುತ್ತಿದ್ದಾರೆ.

ಮತ್ತೊಂದು ಪೋಸ್ಟರ್ ನಲ್ಲಿ ಕಿಚ್ಚ ಸುದೀಪ್ ಸಹ ಸಖತ್ ಸ್ಟೈಲ್ ಆಗಿ ಮಿಂಚಿದ್ದಾರೆ.ಈ ಎರಡು ಪೋಸ್ಟರ್ ಗಳು ರಿಲೀಸ್ ಆಗುತ್ತಿದ್ದಂತೇ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದ್ದು ದಿ ವಿಲನ್ ಬಗ್ಗೆ ಸ್ಯಾಂಡಲ್ ವುಡ್ ಸಿನಿರಸಿಕರಿಗೆ ಇನ್ನೂ ನಿರೀಕ್ಷೆ ಹೆಚ್ಚಾಗುವಂತೆ ಮಾಡಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here