ನಮ್ಮ ಆರೋಗ್ಯದಲ್ಲಿ ಪ್ರತಿನಿತ್ಯ ಒಂದಲ್ಲ ಒಂದು ರೀತಿಯ ಸಮಸ್ಯೆಗಳು ಕಾಡುತ್ತಲೇ ಇರುತ್ತವೆ. ಇಂತಹ ಸಮಸ್ಯೆಗಳನ್ನು ನಾವು ನಮ್ಮ ಮನೆಯಲ್ಲಿ ಸಿಗುವಂತಹ ಕೆಲವು ಪದಾರ್ಥಗಳನ್ನು ಉಪಯೋಗಿಸಿಕೊಂಡು ಸಮಸ್ಯೆಗಳನ್ನು ದೂರ ಮಾಡಿಕೊಳ್ಳಬಹುದು.
ಹೌದು ನಮಗೆ ಗೊತ್ತಿರುವ ಹಾಗೆ ಹೆಸರುಕಾಳು ಎಲ್ಲರಿಗೂ ಗೊತ್ತಿರುವ ಸಂಗತಿಯಾಗಿದೆ. ಈ ಹೆಸರುಕಾಳನ್ನು ನಾವು ನಮ್ಮ ಆಹಾರದಲ್ಲಿ ಕ್ರಮೇಣವಾಗಿ ಬಳಸುವುದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳನ್ನು ಗುಣಪಡಿಸಿಕೊಳ್ಳಬಹುದು.
ಹೆಸರುಕಾಳು ನೋಡಲು ಚಿಕ್ಕದಾದರೂ ಇದರಲ್ಲಿ ಹಲವಾರು ರೀತಿಯ ಪ್ರೋಟೀನ್ ಇರುತ್ತದೆ. ಇದರಲ್ಲಿ ಇರುವ ಆರೋಗ್ಯದ ಗುಣವು ಅದ್ಭುತ ಸಂಗತಿಗಳಿಂದ ಕೂಡಿದೆ. ಗಣನೀಯವಾಗಿ ಆಹಾರದಲ್ಲಿ ಇದನ್ನು ಬಳಸುವುದರಿಂದ ಆರೋಗ್ಯದಲ್ಲಿ ಸಾಕಷ್ಟು ಉತ್ತಮ ದಲಾವಣೆ ಉಂಟಾಗುವುದು
ಹೆಸರು ಕಾಳಿನಲ್ಲಿ ಫೋಲೇಟ್, ವಿಟಮಿನ್ ಬಿ9 ಸಮೃದ್ಧವಾಗಿವೆ. ಇವು ದೇಹದಲ್ಲಿ ಹೊಸ ರಕ್ತಕಣಗಳ ಸೃಷ್ಟಿಗೆ ಸಹಾಯ ಮಾಡುತ್ತವೆ. ಅದರಲ್ಲೂ ಕೆಂಪು ರಕ್ತ ಕಣಗಳನ್ನು ಹೆಚ್ಚುವಂತೆ ಮಾಡುವುದು. ಹಾಗಾಗಿ ಗರ್ಭಿಣಿಯರಿಗೆ ಅತ್ಯುತ್ತಮವಾದದ್ದು.
ಹೃದಯದ ಆರೋಗ್ಯಕ್ಕೆ ಉತ್ತಮ
ಹೆಸರು ಕಾಳಿನಲ್ಲಿ ಫ್ಲೋವೊನೈಡ್ ಆಂಟಿ ಆಕ್ಸಿಡೆಂಟ್ ಅಧಿಕವಾಗಿದೆ. ಇದು ಸ್ವತಂತ್ರ ರಾಡಿಕಲ್ಸನಿಂದ ಉಂಟಾದ ಹಾನಿಯನ್ನು ಸುಲಭವಾಗಿ ತಡೆಯುವುದು. ಜೊತೆಗೆ ಸ್ವತಂತ್ರ ರಾಡಿಕಲ್ಸಗಳನ್ನು ನಿಯಂತ್ರಣದಲ್ಲಿ ಇಡುವುದು. ರಕ್ತವು ಆರೋಗ್ಯಕರ ಸ್ಥಿರತೆಯನ್ನು ಕಾಯ್ದುಕೊಂಡು, ದೇಹದಲ್ಲಿ ಉತ್ತಮ ಸಂಚಾರವನ್ನು ಒಳಗೊಳ್ಳುವಂತೆ ಮಾಡುವುದು.
ಅಧಿಕ ಪ್ರೋಟೀನ್ಗಳನ್ನು ಒಳಗೊಂಡಿದೆ
ದೇಹದಲ್ಲಿ ಪ್ರೋಟೀನ್ಗಳ ಕೊರತೆ ಉಂಟಾದಾಗ ಸಾಕಷ್ಟು ಅನಾರೋಗ್ಯಗಳು ಕಾಣಿಸಿಕೊಳ್ಳುತವೆ. ನಿತ್ಯದ ಆಹಾರದಲ್ಲಿ ಹೆಸರು ಕಾಳನ್ನು ಸೇರಿಸಿಕೊಳ್ಳುವುದರಿಂದ ಅಧಿಕ ರಕ್ತಕಣಗಳ ಉತ್ಪತ್ತಿ ಮತ್ತು ಮೂಳೆಗಳು ಬಲಗೊಳ್ಳುವುದು. ಜೊತೆಗೆ ದೇಹಕ್ಕೆ ಅಗತ್ಯವಾದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದು.
ತೂಕ ಇಳಿಸಲು ಉತ್ತಮ
ನಿತ್ಯದ ಆಹಾರದಲ್ಲಿ ಅಥವಾ ಯೋಜನಾ ಬದ್ಧ ಆಹಾರ ಕ್ರಮದಲ್ಲಿ ಹೆಸರು ಕಾಳನ್ನು ಸೇರಿಸಿಕೊಂಡರೆ ದೇಹದಲ್ಲಿ ಇರುವ ಅನಗತ್ಯ ಕೊಬ್ಬಿನಂಶವು ಕರಗುವುದು. ಇದು ತೂಕ ಇಳಿಸಲು ಅತ್ಯಂತ ಸಹಾಯಕಾರಿ ಎಂದು ವೈದ್ಯರು ಅಭಿಪ್ರಾಯಿಸುತ್ತಾರೆ. ಅಧಿಕ ಸಮಯಗಳ ಕಾಲ ಹಸಿವನ್ನು ತಡೆ ಹಿಡಿಯುವ ಶಕ್ತಿಯನ್ನು ಪಡೆದುಕೊಂಡಿದೆ.
ಕಡಿಮೆ ರಕ್ತದೊತ್ತಡ
ಹೆಸರು ಕಾಳು ಎಲ್ ಡಿಎಲ್ ಆಕ್ಸಿಡೀಕರಣವನ್ನು ನಿಯಂತ್ರಣದಲ್ಲಿ ಇಡುವುದು. ಜೊತೆಗೆ ರಕ್ತದ ಉತ್ತಮ ಹರಿವಿಗೆ ಪ್ರಚೋದನೆ ನೀಡುವುದು. ಇದರಲ್ಲಿ ಇರುವ ಸಮೃದ್ಧವಾದ ಪೊಟ್ಯಾಸಿಯಮ್ ರಕ್ತದಲ್ಲಿ ಇರುವ ಅನಗತ್ಯ ಸೋಡಿಯಮ್ ಅನ್ನು ನಿವಾರಿಸುವುದು. ಜೊತೆಗೆ ಕಡಿಮೆ ಪ್ರಮಾಣದ ರಕ್ತದೊತ್ತಡ ಅಥವಾ ಅಧಿಕ ರಕ್ತದೊತ್ತಡದಂತಹ ಯಾವ ಸಮಸ್ಯೆ ಇದ್ದರೂ ಅದನ್ನು ನಿಯಂತ್ರಿಸುವುದು.
Disclaimer: This Story is auto-aggregated by a Syndicated Feed and has not been Created or Edited By City Big News Staff.