ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಕಿರಿಕರಿದ್ದಾರೆ.
ನನ್ನ ಬಗ್ಗೆ ಕಾಂಗ್ರೆಸ್ನವರು ಕರೆಂಟ್ ಕಳ್ಳ ಮತ್ತು ಇಲ್ಲದ ಸಲದ ಆರೋಪಗಳನ್ನು ಮಾಡುತ್ತಿದ್ದಾರೆ. ಇನ್ನು ನನ್ನ ಬಗ್ಗೆ ಅವ ಹೇಳನಕಾರಿ ಹೇಳಿಕೆಗಳನ್ನು ಮತ್ತು ಪೋಸ್ಟರ್ಗಳನ್ನು ಕಾಂಗ್ರೆಸ್ನವರು ಬಿಡುಗಡೆ ಮಾಡುತ್ತಿದ್ದಾರೆ.
ಕೇವಲ ಎರಡು ಮೂರು ಸಾವಿರಕ್ಕೆ ನಾನು ಕರೆಂಟ್ ಕಳ್ಳತನ ಮಾಡು ಅನಿವಾರ್ಯತೆ ನನಗಿಲ್ಲ. ಕರೆಂಟ್ ಕಳ್ಳತನ ಮಾಡುವ ಕರ್ಮನೂ ನನಗೆ ಇನ್ನೂ ಬಂದಿಲ್ಲ ಎಂದು ಕಾಂಗ್ರೆಸ್ ನವರಿಗೆ ತಿರುಗೇಟು ನೀಡಿದ್ದಾರೆ.
ಕಾಂಗ್ರೆಸ್ ನವರು ಸರ್ಕಾರಿ ಜಾಗವನ್ನು ತಮ್ಮ ಜಾಗವೆಂದು ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿಕೊಂಡು ಸರ್ಕಾರಿ ಜಾಗಗಳನ್ನು ಆಹುತಿ ಮಾಡಿಕೊಂಡಿದ್ದಾರೆ.
ಕಾಂಗ್ರೆಸ್ ನವರ ಬ್ರಹ್ಮಾಂಡ ಭ್ರಷ್ಟಾಚಾರ ಇದೆ. ಇವರಿಗೆ ಮಾನ ಮರ್ಯಾದೆ ಇದ್ರೆ ಆತ್ಮ ಸಾಕ್ಷಿ ಇದ್ರೆ ಇದನ್ನೆಲ್ಲಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಕೋತಾರ ಎಂದು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
Disclaimer: This Story is auto-aggregated by a Syndicated Feed and has not been Created or Edited By City Big News Staff.