ದಶಕಗಳ ಕಾಲ ಕೋರ್ಟ್ ನಲ್ಲಿ ನಲುಗಿದ್ದ ವಿವಾದಿತ ಅಯೋಧ್ಯಾ ಭೂ ವಿವಾದ ಪ್ರಕರಣ ನಿನ್ನೆಯ ಸುಪ್ರೀಂ ಕೋರ್ಟ್ ತೀರ್ಮಾನದ ನಂತರ ಸುಖಾಂತ್ಯವಾಗಿದೆ. ಈ ಪ್ರಕರಣದ ಕುರಿತಾಗಿ ಅಂದರೆ ಅಯೋಧ್ಯೆಯಲ್ಲಿ ರಾಮಮಂದಿರ ಇತ್ತು ಎಂದು ಕೋರ್ಟ್ ನಲ್ಲಿ ವಾದ ಮಂಡಿಸಿ ಇಂದಿನ ಈ ತೀರ್ಪಿಗೆ ಪೂರಕವಾದ ವಾದ ಮಂಡನೆ ಮಾಡಿದ ಆ ವಕೀಲರು ಯಾರು ಎನ್ನುವುದನ್ನು ನಾವು ತಿಳಿಯಬೇಕು. ಅವರ ಬಗ್ಗೆ ತಿಳಿಯಲು ಹೋದಾಗ ಮೊದಲಿಗೆ ನಮಗೊಂದು ಆಶ್ಚರ್ಯಕರ ಸಂಗತಿ ಎದುರಾಗುವುದು ಅದೇನೆಂದರೆ ಕೋರ್ಟ್ ನಲ್ಲಿ ಈ ಪ್ರಕರಣದ ಕುರಿತಾಗಿ ವಾದ ಮಂಡಿಸಿದ ವಕೀಲರ ಪ್ರಸ್ತುತ ವಯಸ್ಸು 92.

ಹೌದು 92 ರ ಇಳಿವಯಸ್ಸಿನಲ್ಲಿ ಕೂಡಾ ವಕೀಲರಾದ ಪರಸರನ್ ಅವರು ಸುಪ್ರೀಂ ಕೋರ್ಟ್ ನಲ್ಲಿ 40 ದಿನಗಳ ಕಾಲ ರಾಮಲಲ್ಲಾ ವಿರಾಜ ಮಾನ್ ಪರವಾಗಿ ತಮ್ಮ ವಾದವನ್ನು ಮಂಡಿಸಿದ್ದಾರೆ. ವಿಶೇಷ ಎಂದರೆ ಅವರು ತಮ್ಮ ವಾದ ಮಂಡನೆ ಮಾಡುವ ಸಮಯದಲ್ಲಿ ನ್ಯಾಯಧೀಶರ ಮುಂದೆ ನಿಂತು ಕೊಂಡೇ ವಾದ ಮಂಡಿಸಿದ್ದಾರೆ. ವಯೋಸಹಜ ಆಯಾಸ ಅಥವಾ ಇನ್ನಾವುದೇ ವಿಷಯದ ಕಡೆಗೆ ಗಮನ ನೀಡದೆ, ಸ್ವತಃ ನ್ಯಾಯಾಧೀಶರೇ ಅವರಿಗೆ ಕುಳಿತು ನ್ಯಾಯ ಮಂಡನೆ ಮಾಡಲು ಅವಕಾಶ ನೀಡಿದರೂ, ಪರಸರನ್ ಅವರು ಹಾಗೆ ಮಾಡಲಿಲ್ಲ.
ಬದಲಿಗೆ ನಿಂತು ವಾದ ಮಂಡಿಸುವುದು ನಮ್ಮ ಸಂಸ್ಕೃತಿ ಎಂದು ಹೇಳಿದ್ದಾರೆ.

ಮಾಜಿ ಪ್ರಧಾ‌ನಿ ಇಂದಿರಾಗಾಂಧಿ ಅವರು ಆಗ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದಾಗ ಪರಸರನ್ ತಮಿಳುನಾಡು ಅಡ್ವೊಕೇಟ್ ಜನರಲ್ ಆಗಿದ್ದರು. 1980 ರಲ್ಲಿ ಅವರು ಭಾರತದ ಸಾಲಿಸಟಿರ್ ಜನರಲ್ ಆಗಿ, ನಂತರ 1983-89 ರ ಅವಧಿಯಲ್ಲಿ ಅಟಾರ್ನಿ ಜನರಲ್ ಆಗಿ ಸೇವೆ ಸಲ್ಲಿಸಿದ್ದಾರೆ. ಶಬರಿಮಲೈ ದೇಗುಲಕ್ಕೆ ಮಹಿಳೆಯರ ಪ್ರವೇಶದ ವಿರುದ್ಧವಾಗಿ ಅವರು ತಮ್ಮ ವಾದ ಮಂಡನೆ ಮಾಡಿದ್ದಾರೆ. 2012 ರಿಂದ 2018 ರವರೆಗೆ ಅವರು ರಾಜ್ಯ ಸಭೆಯಲ್ಲಿ ಎಂಪಿ ಆಗಿದ್ದವರು. ಹೀಗೆ ನ್ಯಾಯಶಾಸ್ತ್ರ ದಲ್ಲಿ ಬಹಳಷ್ಟು ಅನುಭವಿಯಾಗಿರುವ ಹಿರಿಯ ವಕೀಲರು ಪರಸರನ .

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here