ಆಸಕ್ತಿ ಇದ್ದರೆ ಕಲೆ ಎನ್ನುವುದು ಅರಳಲು, ಪ್ರತಿಭೆಯನ್ನು ಹೊರಹಾಕಲು ನಮ್ಮ ಸುತ್ತ ಮುತ್ತಲಿನ ಪರಸರದಲ್ಲಿನ ಸಂಪನ್ಮೂಲಗಳೇ, ಕೈಗೆಟುಕುವ ವಸ್ತುಗಳೇ ಕಲೆಯನ್ನು ಅರಳಿಸಲು ನೆರವು ನೀಡುತ್ತದೆ. ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಚಳಿಯು ಮುಂದುವರೆದಿದ್ದು, ಮಂಜಿನ ಮಳೆಯಾಗುತ್ತಿದ್ದು, ಅನೇಕ ಕಡೆಗಳಲ್ಲಿ ಹಿಮ ಸುರಿದು, ಹಿಮಚ್ಛಾದಿತವಾಗಿದೆ. ಈಗ ಇದೇ ಹಿಮವನ್ನು ಬಳಸಿಕೊಂಡು ಶ್ರೀನಗರದಲ್ಲಿ ಯುವಕನೊಬ್ಬ ತನ್ನ ಪ್ರತಿಭೆಯನ್ನು ಹಿಮದಲ್ಲಿ ಅರಳಿಸುವ ಮೂಲಕ ಸುದ್ದಿಯಾಗಿ ಎಲ್ಲರ ಗಮನವನ್ನು ಸೆಳೆದಿದ್ದಾನೆ.

ಶ್ರೀ ನಗರದಲ್ಲಿ ಜುಬೇರ್ ಅಹ್ಮದ್ ಎಂಬ ಯುವಕ ಸುರಿದಿರುವ ಹಿಮವನ್ನು ಸದ್ಭಳಕೆ ಮಾಡಿಕೊಂಡಿದ್ದಾನೆ. ಜುಬೇರ್ ಅಹ್ಮದ್ ಹಿಮವನ್ನು ಬಳಸಿಕೊಂಡು ಅದರಿಂದ ಸುಂದರವಾದ ಒಂದು ಕಾರಿನ ಮಾದರಿಯನ್ನು ಅರಳಿಸಿದ್ದಾನೆ. ಹಿಮದಲ್ಲಿ ಜುಬೇರ್ ಮಾಡಿರುವ ಈ ಕಾರ್ ಈಗ ಅಲ್ಲಿನ ಸ್ಥಳೀಯರ ಆಕರ್ಷಣೆ ಕೇಂದ್ರವಾಗಿದ್ದು, ಹಿಮದಿಂದ ಅರಳಿದ ಕಾರನ್ನು ನೋಡಲು ಜನರು ಬರುತ್ತಿರುವುದು ಮಾತ್ರವೇ ಅಲ್ಲದೇ ಆ‌ ಕಾರಿನೊಂದಿಗೆ ಫೋಟೋಗಳನ್ನು ಕೂಡಾ ತೆಗೆಸಿಕೊಂಡು ಸಂಭ್ರಮ ಪಡುತ್ತಿದ್ದಾರೆ.

ಜುಬೇರ್ ಗೆ ಬಾಲ್ಯದಿಂದಲೂ ಕೂಡಾ ಹಿಮದಿಂದ ವಸ್ತುಗಳನ್ನು ಮಾಡುವ ಆಸಕ್ತಿಯಿದ್ದು, ಆತ ಹಿಮದಿಂದ ತಾಜ್ ಮಹಲ್ ಕೂಡಾ ಮಾಡಬಲ್ಲ ಎನ್ನಲಾಗಿದೆ. ಕಾಶ್ಮೀರದಲ್ಲಿ ಈಗ ಉಷ್ಣಾಂಶ ಕಡಿಮೆಯಿರುವುದರಿಂದ ಎಲ್ಲೆಲ್ಲೂ ಹಿಮ ಬೀಳುವುದು ಸಾಮಾನ್ಯ‌. ಈ ಹಿಮವನ್ನೇ ತನ್ನ ಕಲೆಗೆ ಸಾಧನವನ್ನಾಗಿ ಮಾಡಿಕೊಂಡು ಜುಬೇರ್ ಮಾಡಿದ ಕಾರ್ ನ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲರ ಗಮನವನ್ನು ಸೆಳೆಯುತ್ತಿವೆ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here