ಇದೇ ತಿಂಗಳ ಅಂದರೆ ಡಿಸೆಂಬರ್ 26 ರಂದು ಕಂಕಣ ಸೂರ್ಯಗ್ರಹಣ ಇದೆ. ಈಗಾಗಲೇ ಈ ವಿಷಯದ ಬಗ್ಗೆ ಸಾಕಷ್ಟು ಮಾಹಿತಿಗಳು ಸುದ್ದಿಯಾಗುತ್ತಿದೆ. ಗ್ರಹಣಗಳಿಗೆ ನಮ್ಮ ಹಿಂದೂ ಧರ್ಮದಲ್ಲಿ ವಿಶೇಷ ಮಾನ್ಯತೆ ಹಾಗೂ ಗ್ರಹಣದ ಜೊತೆ ಅನೇಕ ಸಾಂಪ್ರದಾಯಿಕ ಹಾಗೂ ನಂಬಿಕೆಗಳು ಬೆಸೆದುಕೊಂಡಿವೆ. ಈ ನಂಬಿಕೆಗಳ ಕಾರಣದಿಂದಲೇ ಇಂದಿಗೂ ಕೂಡಾ ಜನರು ಗ್ರಹಣ ಕಾಲದಲ್ಲಿ ಕೆಲವು ನಿರ್ದಿಷ್ಟವಾದ ಆಚರಣೆಗಳನ್ನು ಬಹಳ ಶ್ರದ್ಧೆಯಿಂದ ನಿರ್ವಹಿಸುವುದನ್ನು ನಾವು ನೋಡುತ್ತಲೇ ಬಂದಿದ್ದೇವೆ. ಗ್ರಹಣ ಕಾಲದಲ್ಲಿ ದೇವಿ ದೇವತೆಗಳ ಆರಾಧನೆಯನ್ನು ಕೂಡಾ ಮಾಡಲಾಗುವುದಿಲ್ಲ.

ಈಗ ಇದೇ ಹಿನ್ನೆಲೆಯಲ್ಲಿ ಅಂದರೆ ಡಿಸೆಂಬರ್ 26 ರ ಕಂಕಣ ಸೂರ್ಯಗ್ರಹಣದ ಹಿನ್ನೆಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳದ ದೇವಾಲಯದ ಕಡೆಯಿಂದ ಭಕ್ತಾದಿಗಳಿಗೆ ಸೂಚನೆಯೊಂದನ್ನು ಹೊರಡಿಸಲಾಗಿದೆ. ಧರ್ಮಸ್ಥಳಕ್ಕೆ ಭೇಟಿ ನೀಡುವ ಯಾತ್ರಿಕರಿಗೆ ಈ ಮೂಲಕ ಪ್ರಮುಖವಾದ ಮಾಹಿತಿಯನ್ನು ನೀಡಲಾಗಿದ್ದು, ” 2019 ರ ಡಿಸೆಂಬರ್ 26 ರಂದು ಸೂರ್ಯಗ್ರಹಣದಿಂದಾಗಿ, ದೇವಾಲಯವು ಬೆಳಿಗ್ಗೆ 6.30 ರಿಂದ ಮಧ್ಯಾಹ್ನ 12 ರವರೆಗೆ ಮುಚ್ಚಲ್ಪಡುತ್ತದೆ. ದೇವಾಲಯದ ದರ್ಶನ, ತುಲಾಭಾರ ಮತ್ತು ಸೇವಾಗಳನ್ನು ಈ ಅವಧಿಗೆ ತಡೆಹಿಡಿಯಲಾಗಿದೆ. ಎಲ್ಲಾ ದೇವಾಲಯದ ಪ್ರಕ್ರಿಯೆಗಳು ಮಧ್ಯಾಹ್ನ 12 ರ ನಂತರ ಸಾಮಾನ್ಯ ರೀತಿಯಲ್ಲಿ ನಡೆಯುತ್ತವೆ.”

ಮೇಲೆ ತಿಳಿಸಿದಂತ ಮಾಹಿತಿಯನ್ನು ಧರ್ಮಸ್ಥಳದ ದೇವಾಲಯದ ವತಿಯಿಂದ ಭಕ್ತಾದಿಗಳು ಮತ್ತು ಯಾತ್ರಾರ್ಥಿಗಳಿಗೆ ನೀಡಲಾಗಿದ್ದು, ಆ ದಿನ ದೇವಾಲಯಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಅನಾನುಕೂಲವಾಗದಂತೆ ದೇವಾಲಯದ ಆಡಳಿತ ಮಂಡಳಿ ಈ ಸೂಚನೆಯನ್ನು ನೀಡಿದೆ. ಧರ್ಮಸ್ಥಳಕ್ಕೆ ಭೇಟಿ ನೀಡುವವರು ಇದನ್ನು ಗಮನದಲ್ಲಿ ಇರಿಸಿಕೊಂಡು ಆಲಯಕ್ಕೆ ಭೇಟಿ ನೀಡುವುದು ಸೂಕ್ತ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here