ಡಾ.ರಾಜ್‍ಕುಮಾರ್ ಅವರ ಕುಟುಂಬ ಹಾಗೂ ಅವರ ಮನೆಯ‌ನ್ನು ದೊಡ್ಮನೆ ಎಂದೇ ಕರೆಯಲಾಗುತ್ತದೆ. ಈ ದೊಡ್ಮನೆಯಲ್ಲಿ ಈಗ ಎಲ್ಲೆಲ್ಲೂ ಮದುವೆಯದೇ ಸಂಭ್ರಮ. ರಾಘವೇಂದ್ರ ರಾಜ್‍ಕುಮಾರ್ ಅವರ ಕಿರಿಯ ಮಗ ಯುವ ರಾಜ್‍ಕುಮಾರ್ ಅವರ ಮದುವೆ ಇದೇ ತಿಂಗಳ 26ರಂದು ಬೆಂಗಳೂರಿನ ಪ್ಯಾಲೇಸ್ ಮೈದಾನದಲ್ಲಿ ಅದ್ದೂರಿಯಾಗಿ ನಡೆಯಲಿದೆ. ಮೇ 26 ರಂದು ಯುವ ರಾಜ್‍ಕುಮಾರ್ ಅವರು ತಮ್ಮ ಗೆಳತಿ ಶ್ರೀದೇವಿಯವರನ್ನು ಮದುವೆಯಾಗುವ ಮೂಲಕ ವಿವಾಹ ಬಂಧನದಲ್ಲಿ ಬೆಸೆದು, ಸಾಂಸಾರಿಕ ಜೀವನಕ್ಕೆ ಅಡಿ ಇಡಲಿದ್ದಾರೆ. ಈಗಾಗಲೇ ಮದುವೆಯ ಸಿದ್ದತೆ ಕಾರ್ಯಗಳು ಆರಂಭವಾಗಿವೆ.

ಯುವ ರಾಜ್‍ಕುಮಾರ್ ಅವರ ನಿಶ್ಚಿತಾರ್ಥ ಕಳೆದ ವರ್ಷದ ಜುಲೈನಲ್ಲಿ ಮೈಸೂರಿನಲ್ಲಿ ನಡೆದಿತ್ತು. ಮೈಸೂರಿನ ಖಾಸಗಿ ಹೋಟೆಲ್ ಒಂದರಲ್ಲಿ ನಡೆದ ನಿಶ್ಚಿತಾರ್ಥ ಮಹೋತ್ಸವದಲ್ಲಿ ಯುವ ರಾಜ್ ಅವರು ತಮ್ಮ ಗೆಳತಿ ಶ್ರೀದೇವಿಯೊಂದಿಗೆ ಉಂಗುರಗಳನ್ನು ಬದಲಾಯಿಸಿಕೊಂಡಿದ್ದರು. ಆಗ ಇಡೀ ಕುಟುಂಬ ಹಾಜರಿದ್ದು ಯುವ ಜೋಡಿಗಳ ಹೊಸ ಬಾಳಿಗೆ ಹರಸಿ, ಶುಭಾಶಯವನ್ನು ಕೋರಿದ್ದರು. ಯುವ ರಾಜ್ ಅವರ ಮದುವೆಯ ಸಂಭ್ರಮ ಈಗಾಗಲೇ ದೊಡ್ಮನೆಯಲ್ಲಿ ಸಂತೋಷ ಹಾಗೂ ಸಂಭ್ರಮವನ್ನು ತಂದಿದೆ.

ಯುವ ರಾಜ್‍ಕುಮಾರ್ ಅವರು ಇದುವರೆವಿಗೂ ಯಾವುದೇ ಚಿತ್ರದಲ್ಲೂ ನಟಿಸಿಲ್ಲವಾದರೂ ತಮ್ಮ ಬ್ಯಾನರ್ ನಲ್ಲಿ ಸಿನಿಮಾಗಾಗಿ ಕೆಲಸ ಮಾಡಿದ್ದಾರೆ. ಪುನೀತ್ ಅವರ ನಟಸಾರ್ವಭೌಮ ಚಿತ್ರದ ಆಡಿಯೋ ಬಿಡುಗಡೆಯಲ್ಲಿ ಒಂದು ಡಾನ್ಸ್ ಪರ್ಫಾಮೆನ್ಸ್ ನೀಡಿ ಈಗಾಗಲೇ ಅಪಾರ ಅಭಿಮಾನಿಗಳನ್ನು ಗಳಿಸಿರುವ ಯುವ ರಾಜ್‍ಕುಮಾರ್ ಅವರು ವಿವಾಹದ ನಂತರ ಸ್ಯಾಂಡಲ್ ವುಡ್ ಗೆ ನಾಯಕ ನಟನಾಗಿ ಪ್ರವೇಶ ಮಾಡುವುದು ಖಚಿತವಾಗಿದೆ. ಈಗಾಗಲೇ ಒಬ್ಬ ನಾಯಕ ನಟನ ಕ್ರೇಜ್ ಅವರಿಗೆ ಅಭಿಮಾನಿ ಬಳಗದಿಂದ ಸಿಗುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here