ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರು ಈ ಬಾರಿ ಅವರ ಹುಟ್ಟು ಹಬ್ಬವನ್ನು ತಮ್ಮ ಅಭಿಮಾನಿಗಳ ಜೊತೆ ಆಚರಿಸುವುದಿಲ್ಲ. ಕಾರಣ ಆ ಸಂದರ್ಭದಲ್ಲಿ ಅವರು ಈ ಬಾರಿ ವಿದೇಶದಲ್ಲಿ ಇರುತ್ತಾರೆ. ಶಿವಣ್ಣ ಹುಟ್ಟು ಹಬ್ಬ ಆಚರಣೆಗೆ ವಿದೇಶಕ್ಕೆ ಹೋಗುತ್ತಿಲ್ಲ‌. ಬದಲಿಗೆ ಅವರ ಅನಾರೋಗ್ಯದ ನಿಮಿತ್ತ ಚಿಕಿತ್ಸೆ ಪಡೆಯಲು ಅವರು ಲಂಡನ್ ಗೆ ತೆರಳಲಿದ್ದಾರೆ. ಆದ ಕಾರಣ ಅವರು ಈ ಸಲ ತಮ್ಮ ಹುಟ್ಟು ಹಬ್ಬವನ್ನು ಆಚರಣೆ ಮಾಡುತ್ತಿಲ್ಲ ಎನ್ನಲಾಗಿದೆ. ಶಿವಣ್ಣನವರು ಜುಲೈ 12 ಕ್ಕೆ ತಮ್ಮ 57 ನೇ ವಸಂತಕ್ಕೆ ಕಾಲಿಡಲಿದ್ದಾರೆ. ಅವರ ಹುಟ್ಟು ಹಬ್ಬ ಅಂದ ಮೇಲೆ ಅಭಿಮಾನಿಗಳು ಹೇಗೆ ಸುಮ್ಮನಿರಲು ಸಾಧ್ಯ? ಆದರೆ ಈ ಬಾರಿ ಅಭಿಮಾನಿಗಳಿಗೆ ಅದು ನಿರಾಸೆಯನ್ನು ಮೂಡಿಸಿದೆ.

ಶಿವಣ್ಣನವರಿಗೆ ತಮ್ಮ ಬಲ ಭುಜದಲ್ಲಿ ಶೋಲ್ಡರ್ ಟಯರ್ ಆಗಿದ್ದು, ಅದಕ್ಕಾಗಿ ಒಂದು ಸಣ್ಣ ಶಸ್ತ್ರ ಚಿಕಿತ್ಸೆಯ ಅಗತ್ಯವಿದೆ. ಅದೇ ಚಿಕಿತ್ಸೆಗಾಗಿ ಅವರು ಲಂಡನ್ ಗೆ ತೆರಳಬೇಕಾಗಿದ್ದು, ಅವರ ಚಿಕಿತ್ಸೆಗೆ ವೈದ್ಯರು ಜುಲೈ 8 ರ ದಿನಾಂಕವನ್ನು ನೀಡಿದ್ದಾರೆ ಎಂದು ಹೇಳಲಾಗಿದೆ. ಆದ ಕಾರಣ ಅವರು ಹುಟ್ಟು ಹಬ್ಬದ ಸಮಯಕ್ಕೆ ಲಂಡನ್ ನಲ್ಲಿ ವಿಶ್ರಾಂತಿಯಲ್ಲಿ ಇರಬೇಕಾಗಿರುವುದರಿಂದ ಅವರ ಜನ್ಮ ದಿನದ ಆಚರಣೆಗೆ ಒಂದು ಬ್ರೇಕ್ ಬಿದ್ದಿದೆ. ಅಭಿಮಾನಿಗಳಿಗೆ ಈ ಸುದ್ದಿ ಒಂದು ಶಾಕ್ ಎಂದೇ ಹೇಳಬಹುದು.

ಈಗಾಗಲೇ ಚಿತ್ರಗಳ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ಶಿವಣ್ಣನವರು ಕೆಲವು ಸಿನಿಮಾಗಳ ಶೂಟಿಂಗ್ ಮುಗಿಸಿ, ಭಜರಂಗಿ ಎರಡರ ಮೊದಲ ಶೆಡ್ಯೂಲ್ ಮುಗಿಸಿ ಜುಲೈ5 ರಂದು ಲಂಡನ್ ಗೆ ತೆರಳಲಿದ್ದಾರೆ. ಅಭಿಮಾನಿಗಳಿಗೆ ಇದು ನಿರಾಶೆ ತಂದರೂ, ಆರೋಗ್ಯ ಮುಖ್ಯ ಎಂಬುದನ್ನು ಅಭಿಮಾನಿಗಳು ಕೂಡಾ ಅರಿತಿದ್ದಾರೆ ಎಂಬುದು ಕೂಡಾ ನಿಜವೇ ಆಗಿದೆ. ಅಭಿಮಾನಿಗಳು ಈ ವಿಷಯದಲ್ಲಿ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಲಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here