ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ 69 ನೇ ಹುಟ್ಟು ಹಬ್ಬವನ್ನು ಅವರ ಕುಟುಂಬ ವರ್ಗ ಹಾಗೂ ಅಭಿಮಾನಿಗಳು ಬಹಳ ಭರ್ತರಿಯಾಗಿ ಆಚರಣೆಯನ್ನು ಮಾಡಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಅಭಿಮಾನ್ ಸ್ಟುಡಿಯೋ ದಲ್ಲಿರುವ ವಿಷ್ಣು ಅವರ ಸಮಾಧಿ ಬಳಿಗೆ ಬಂದ ಅಭಿಮಾನಿಗಳು, ಸಮಾಧಿಗೆ ನಮಿಸಿ , ವಿಷ್ಣುವರ್ಧನ್ ಅವರಿಗೆ ಜೈ ಕಾರ ಹಾಕಿ ಸಂಭ್ರಮಿಸಿದ್ದಾರೆ. ಸಾಹಸಸಿಂಹನ ಜನ್ಮದಿನದ ಅಂಗವಾಗಿ ವಿವಿಧೆಡೆಗಳಲ್ಲಿ ಅನ್ನದಾನ, ರಕ್ತದಾನಗಳಂತಹ ಕಾರ್ಯಕ್ರಮಗಳನ್ನು ಕೂಡಾ ಅಭಿಮಾನಿಗಳು ಆಯೋಜಿಸಿದ್ದರು‌.

ವಿಷ್ಣುವರ್ಧನ್ ಅವರ ಕುಟುಂಬವು ಮೈಸೂರಿನ ಬಳಿ ಉದ್ಬೂರಿನಲ್ಲಿ ಸರ್ಕಾರ ವಿಷ್ಣು ಸ್ಮಾರಕಕ್ಕೆ ನೀಡಿರುವ ಜಾಗದಲ್ಲಿ ಗಿಡ ನೆಡುವ ಮೂಲಕ ಜನ್ಮ ದಿನಾಚರಣೆ ಅರ್ಥಪೂರ್ಣವಾಗಿ ಆಚರಿಸಿದರು‌. ವಿಷ್ಣುವರ್ಧನ್ ಅವರ ಸಮಾಧಿಯ ಬಳಿ ವಿಷ್ಣುವರ್ಧನ್ ಅವರ ಅಭಿಮಾನಿ ಸಂಘದ ಸದಸ್ಯರು, ಗೀತ ಸಾಹಿತಿ ಹಾಗೂ ನಿರ್ದೇಶಕ ಡಾ.ವಿ‌.ನಾಗೇಂದ್ರ ಪ್ರಸಾದ್ ಮತ್ತು ನಿರ್ಮಾಪಕ ಕೆ.ಮಂಜು ಮತ್ತು ಹಿರಿಯ ನಟ ರಮೇಶ್ ಭಟ್ ಹಾಗೂ ವಿನಯ್ ಗುರೂಜಿ ಅವರು ಪುಷ್ಪಾರ್ಚನೆಯನ್ನು ಮಾಡಿ, ವಿಷ್ಣು ಅವರಿಗೆ ಗೌರವವನ್ನು ಸಲ್ಲಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ವಿನಯ್ ಗುರೂಜಿಯವರು ಅದ್ಭುತವಾದ ಮಾತುಗಳನ್ನು ಆಡಿದರು. ಅವರು ವಿಷ್ಣು ಸ್ಮಾರಕ ನಿರ್ಮಾಣದ ವಿಚಾರದಲ್ಲಿ ತಮ್ಮ ಗಾಂಧಿ ಆಶ್ರಮದ ಕಡೆಯಿಂದ ಅಗತ್ಯ ಬಿದ್ದರೆ ಸತ್ಯಾಗ್ರಹಕ್ಕೂ ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ. ನಿನ್ನೆ ವಿಷ್ಣು ದಾದ ಅವರ ಅಭಿಮಾನಿಗಳು ಎರೆಡೆರಡು ಕಡೆ ವಿಷ್ಣುವರ್ಧನ್ ಅವರ ಜನ್ಮಾದಿನಾಚರಣೆಯನ್ನು ಆಚರಿಸುವ ಮೂಲಕ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here