ಬಿಗ್ ಬಾಸ್ ಸೀಸನ್ 7 ಆರಂಭವಾದ ಮೇಲೆ ವಾರ ಇಡೀ ಬಿಗ್ ಹೌಸ್ ನಲ್ಲಿ ನಡೆಯುವ ಚಟುವಟಿಕೆಗಳನ್ನು ನೋಡುವುದು, ಮನರಂಜನೆ ಪಡೆಯುವುದು ಹಾಗೂ ಟಾಸ್ಕ್ ಗಳಲ್ಲಿ ಯಾರು ಏನು ಮಾಡುವರು ಎಂಬುದನ್ನು ನೋಡುವ ಜನರು, ಅವುಗಳ ಆಧಾರದ ಮೇಲೆ ನಾಮಿನೇಟ್ ಆದ ತಮ್ಮ ಫೇವರಿಟ್ ಸ್ಪರ್ಧಿಗಳನ್ನು ಉಳಿಸಲು ವೋಟಿಂಗ್ ಮಾಡುವುದು ಇದು ನಡೆಯುತ್ತದೆ. ಇನ್ನು ವಾರಾಂತ್ಯ ಬಂದ ಕೂಡಲೇ, ವಾರದ ಕಥೆ ಕಿಚ್ಛನ‌ ಜೊತೆ ನೋಡುವ ಹಾಗೂ ಮನೆಯಿಂದ ಯಾರು ಹೊರಗೆ ನಡೆಯಲಿದ್ದಾರೆ ಎಂಬ ಕುತೂಹಲದಿಂದ ಅವರು ಕಾರ್ಯಕ್ರಮದ ಕಡೆ ಗಮನ ನೀಡುವರು.

ಜನರ ಲೆಕ್ಕಾಚಾರಗಳ ಪ್ರಕಾರ ನಾಮಿನೇಟ್ ಆದವರಲ್ಲಿ ಇವರು, ಅವರು ಹೊರಗೆ ನಡೆಯುವರು ಎಂಬ ಆಲೋಚನೆಗಳು ಇರುತ್ತವೆ. ಆದರೆ ಅವರ ಲೆಕ್ಕಾಚಾರ ಸರಿಯೋ ತಪ್ಪೋ ಎಂದು ತಿಳಿಯುವುದು ಮಾತ್ರ ವಾರದ ಕಥೆಯಲ್ಲಿ. ಅದೇ ರೀತಿ ಈ ವಾರದ ಕೊನೆಯಲ್ಲಿ ಬಿಗ್ ಹೌಸ್ ನಿಂದ ನಾಲ್ಕನೇ ವಿಕೆಟ್ ಪತನಗೊಂಡಿದೆ. ನಾಲ್ಕನೇ ವಾರದ ಕೊನೆಗೆ ಮನೆಯ ಸದಸ್ಯರಲ್ಲಿ ಒಬ್ಬರು ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ. ಈ ವಾರ ನಾಮಿನೇಷನ್ ನಲ್ಲಿ ಇದ್ದವರ ಸಂಖ್ಯೆ ಹೆಚ್ಚೇ ಇತ್ತು.

ಈ ವಾರ ನಾಮಿನೇಟ್ ಆಗಿದ್ದವರು ಚೈತ್ರ ಕೊಟ್ಟೂರು, ಭೂಮಿ ಶೆಟ್ಟಿ, ಚಂದನ್ ಆಚಾರ್, ರಾಜು ತಾಳಿಕೋಟೆ, ದೀಪಿಕಾ ದಾಸ್ , ಪ್ರಿಯಾಂಕ, ಶೈನ್ ಶೆಟ್ಟಿ. ಈ ಏಳು ಮಂದಿ ನಾಮಿನೇಟ್ ಸದಸ್ಯರಲ್ಲಿ ಈಗ ಬಿಗ್ ಹೌಸ್ ನಿಂದ ಹೊರಗೆ ಬಂದಿರುವವರು ಚೈತ್ರ ಕೊಟ್ಟೂರು. ಅಲ್ಲಿಗೆ ಈ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ನಾಲ್ಕನೇ ಸ್ಪರ್ಧಿ ಮನೆಯಿಂದ ಹೊರ ಬಂದಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here