ನಿನ್ನೆ ಭಾರತದಲ್ಲಿ ಒಂದು ಐತಿಹಾಸಿನ ನಿರ್ಣಯ ಹೊರಬಂದ ದಿನ. ಬಹು ವರ್ಷಗಳ ಅಯೋಧ್ಯೆ ಭೂ ವಿವಾದಕ್ಕೆ ಸುಪ್ರೀಂ ಕೋರ್ಟ್ ನ್ಯಾಯಾಧೀಶ ರಂಜನ್ ಗೊಗೋಯಿ ನೇತೃತ್ವದ ನ್ಯಾಯಪೀಠ ಈ ವಿವಾದದ ವಿಷಯವಾಗಿದೆ ಐತಿಹಾಸಿಕ ತೀರ್ಪನ್ನು ನೀಡಿತ್ತು. ಇದೇ ನ್ಯಾಯಮೂರ್ತಿಗಳ ಪೀಠ ಈ ವಾರದಲ್ಲಿ ಇನ್ನೂ ನಾಲ್ಕು ಪ್ರಮುಖವಾದ ತೀರ್ಪುಗಳನ್ನು ನೀಡಲಿದೆ. ಇದೇ ನವೆಂಬರ್ 17 ಕ್ಕೆ ಸಿಜೆಐ ಗೊಗೋಯಿ ಅವರ ಅಧಿಕಾರಾವಧಿ ಮುಗಿಯುತ್ತಿದ್ದು, ಅದಕ್ಕೂ ಮುನ್ನ ಪ್ರಮುಖ ನಾಲ್ಕು ಪ್ರಕರಣಗಳಲ್ಲಿ ತೀರ್ಪನ್ನು ನೀಡಲಿದೆ ಈ ನ್ಯಾಯ ಪೀಠ.

10 ರಿಂದ 50 ವರ್ಷದವರೆಗಿನ ಎಲ್ಲಾ ಮಹಿಳೆಯರು ಶಬರಿಮಲೆಯ ಅಯ್ಯಪ್ಪ ಸನ್ನಿಧಾನವನ್ನು ಪ್ರವೇಶಿಸುವ ಕುರಿತಾದ ತೀರ್ಮಾನ ಹೊರ ಬೀಳಲಿದೆ. ಕಳೆದ ವರ್ಷ ಸಿಜೆಐ ದೀಪಕ್ ಮಿಶ್ರಾ ಅವರ ನೇತೃತ್ವದ ನ್ಯಾಯ ಪೀಠ ಸೆಪ್ಟೆಂಬರ್ ನಲ್ಲಿ ಈ ವಿಷಯವಾಗಿ ಎಲ್ಲಾ ಮಹಿಳೆಯರು ಶಬರಿ ಮಲೆ ಪ್ರವೇಶಿಸುವ ತೀರ್ಪನ್ನು ನೀಡಿತ್ತು. ಆದರೆ ಅದನ್ನು ಅಯ್ಯಪ್ಪ ಭಕ್ತರು ವಿರೋಧಿಸಿ, ಆಲಯ ಪ್ರವೇಶಿಸಲು ಮುಂದಾದ ಮಹಿಳೆಯರನ್ನು ತಡೆದಿದ್ದರು. ತೀರ್ಪಿನ ಮರುಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದರು. ಈಗ ಅದರ ತೀರ್ಪು ಹೊರ ಬರುವ ಸಾಧ್ಯತೆ ಇದೆ.

ನಂತರ ಎನ್.ಡಿ.ಎ. ಸರ್ಕಾರ ಫ್ರಾನ್ಸ್ ಜೊತೆ ನಡೆಸಿರುವ ರಫೇಲ್ ಡೀಲ್ ನಲ್ಲಿ ಅಕ್ರಮ ನಡೆದಿದೆ ಎಂದು ಅದರ ತನಿಖೆಗೆ ಅರ್ಜಿ ಸಲ್ಲಿಸಿದ್ದರಿಂದ, ಅದರ ಪರಿಶೀಲನೆ ನಡೆಸಿದ ಸುಪ್ರೀಂ ಕೋರ್ಟ್ ಸರ್ಕಾರಕ್ಕೆ ಕ್ಲೀನ್ ಚಿಟ್ ನೀಡಿದರೂ ಕೂಡಾ ಮರು ಪರಿಶೀಲನೆಗೆ ಅರ್ಜಿಗಳನ್ನು ಸಲ್ಲಿಸಿದ ಹಿನ್ನೆಲೆಯಲ್ಲಿ ಈ ಪ್ರಕರಣದ ತೀರ್ಪು ಈ ವಾರದಲ್ಲೇ ಹೊರಬೀಳಬಹುದು. ರಫೇಲ್ ಡೀಲ್ ವಿಷಯದಲ್ಲಿ ಬಹಳಷ್ಟು ಕೂಗಾಡಿದ ಕಾಂಗ್ರೆಸ್ ನ ರಾಹುಲ್ ಗಾಂಧಿ ಅವರು ಒಂದು ಹಂತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರನ್ನು ಚೌಕಿದಾರ್ ಚೋರ್ ಹೈ ಎಂದಿದ್ದರು. ಅಲ್ಲದೆ ಸುಪ್ರೀಂ ಕೋರ್ಟ್ ಇದನ್ನು ಒಪ್ಪಿದೆ ಎಂದು ಕೂಡಾ ಹೇಳಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಕೂಡಾ ಇದೇ ವಾರದಲ್ಲಿ ಹೊರಬೀಳುವ ಸಾಧ್ಯತೆ ಇದೆ. ಇನ್ನು ಕಡೆಯದಾಗಿ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ಕಛೇರಿ ಆರ್.ಟಿ.ಐ. ವ್ಯಾಪ್ತಿಗೆ ಒಳಪಡುತ್ತದೆಯೋ ಇಲ್ಲವೋ ಎಂಬ ವಿಚಾರದಲ್ಲಿ ಕೂಡಾ ನ್ಯಾಯಾಲಯದ ತೀರ್ಪು ಹೊರಬರುಬೇಕಿದ್ದು, ಈ ಎಲ್ಲಾ ನಾಲ್ಕು ವಿಷಯಗಳ ಕುರಿತಾದ ತೀರ್ಪು ಈ ವಾರದಲ್ಲಿ ಹೊರ ಬೀಳುವ ಸಾಧ್ಯತೆಗಳಿವೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here