ಬಿಗ್ ಬಾಸ್ ಸೀಸನ್ 7 ರ ಏಳನೇ ವಾರದ ಎಲಿಮಿನೇಟ್ ಆಗಿದೆ‌. ಈ ವಾರ ನಾಮಿನೇಟ್ ಆಗಿದ್ದವರುಈ ವಾರ ನಾಮಿನೇಟ್ ಆಗಿದ್ದ ಸದಸ್ಯರು ಯಾರೆಂದರೆ ಭೂಮಿ ಶೆಟ್ಡಿ, ಶೈನ್ , ರಾಜು ತಾಳಿಕೋಟೆ, ಚಂದನ್ ಆಚಾರ್ , ಕಿಶನ್ ಮತ್ತು RJ ಪೃಥ್ವಿ. ಎಲ್ಲರೂ ಇವರಲ್ಲಿ ಯಾರು ಎಲಿಮಿನೇಟ್ ಆಗುವರು ಎಂದು ಕುತೂಹಲದಲ್ಲಿ ಇದ್ದರು. ಇನ್ನು
ಈ ವಾರ ನಿಜಕ್ಕೂ ಬಿಗ್ ಬಾಸ್ ಶೋ ಬಹಳ ಮನರಂಜನಾತ್ಮಕವಾಗಿ ಮೂಡಿ ಬಂದಿದೆ. ಈ ವಾರ ಮನೆಯೊಳಗಿನ ಸದಸ್ಯರು ಹಾಗೂ ವೀಕ್ಷಕರಿಗೆ ಬಿಗ್ ಬಾಸ್ ಎರಡು ದೊಡ್ಡ ಶಾಕ್ ಅಥವಾ ಸರ್ಪ್ರೈಸ್ ನೀಡಿತು‌. ವಾರದ ಮೊದಲನೇ ದಿನವೇ ರಕ್ಷಾ ಸೋಮಶೇಖರ್ ಅವರು ಮನೆಯೊಳಗೆ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಆಗಮಿಸಿದರು. ಅವರ ಎಂಟ್ರಿಯಿಂದ ಮನೆಯ ಸದಸ್ಯರು ಶಾಕ್ ನಲ್ಲಿದ್ದಾಗಲೇ ಕೆಲವೇ ದಿನಗಳ ಅಂತರದಲ್ಲಿ ಮತ್ತೊಂದು ವೈಲ್ಡ್ ಕಾರ್ಡ್ ಎಂಟ್ರಿ ಕೂಡಾ ಆಯಿತು. ಇದಂತೂ ಮತ್ತೊಂದು ದೊಡ್ಡ ಶಾಕ್ ಆಗಿತ್ತು.

ಎರಡನೆಯ ವೈಲ್ಡ್ ಕಾರ್ಡ್ ಎಂಟ್ರಿ ಶಾಕ್ ನೀಡಿದ್ದು ಏಕೆಂದರೆ ಈಗಾಗಲೇ ಮನೆಯಿಂದ ಎಲಿಮಿನೇಟ್ ಆಗಿದ್ದ ಚೈತ್ರ ಕೊಟ್ಟೂರು ಅವರು ಮತ್ತೆ ಮನೆ ಒಳಗೆ ಬಂದರು.ಅದು ಎಲ್ಲರಿಗೂ ನಿಜವಾಗಿಯೂ ದೊಡ್ಡ ಶಾಕ್ ಎಂದೇ ಹೇಳಬಹುದು‌. ಹೀಗೆ ಎರಡು ವೈಲ್ಡ್ ಕಾರ್ಡ್ ಗಳ ಜೊತೆ ಸೀಕ್ರೆಟ್ ಟಾಸ್ಕ್ ಗಳು ಕೂಡಾ ರಂಜಿಸಿದವು‌. ಶೈನ್ ಅವರು ತಮ್ಮ ಗಡ್ಡ ಮೀಸೆ ತೆಗೆದು ಹೊಸ ಲುಕ್ ನಿಂದ ರಂಜಿಸಿದ್ದಾರೆ. ಇನ್ನು ದೀಪಿಕಾ ದಾಸ್ ಅವರು ತಮ್ಮ ಸೀಕ್ರೆಟ್ ಟಾಸ್ಕ್ ನಲ್ಲಿ ಗೆದ್ದಿದ್ದು ಮಾತ್ರವಲ್ಲದೇ ತಮ್ಮ ಜೀವನದ ಅಪೂರ್ಣ ಪ್ರೇಮ ಕಥೆಯನ್ನು ಕೂಡಾ ಹಂಚಿಕೊಂಡಿದ್ದಾರೆ.

ಹೀಗೆ ವಾರ ಪೂರ್ತಿ ಮನರಂಜನೆಯಿಂದ ಕೂಡಿದ ಓ ವಾರದ ಮುಖ್ಯ ಭಾಗವಾದ ವಾರದ ಕಥೆ ಕಿಚ್ಚನ ಜೊತೆಯಲ್ಲಿ ಕಿಚ್ಚ ಸುದೀಪ್ ಅವರು ನಾಮಿನೇಟ್ ಆದ ಸದಸ್ಯರಲ್ಲಿ ಯಾರು ಎಲಿಮಿನೇಟ್ ಎಂಬುದನ್ನು ಹೆಸರಿಸಿದ್ದಾರೆ. ಈ ವಾರ ಮನೆಯಿಂದ ಎಲಿಮಿನೇಟ್ ಆಗಿ ಹೊರ ಬಂದಿದ್ದಾರೆ RJ ಪೃಥ್ವಿ. ‌ಈ‌ ಮೂಲಕ ಬಿಗ್ ಬಾಸ್ ಸೀಸನ್ ಏಳರ ಏಳನೇ ವಾರದ ಎಲಿಮಿನೇಷನ್ ಪ್ರಕ್ರಿಯೆ ಮುಗಿದಿದ್ದು, ನಾಳೆ ಪೃಥ್ವಿ ಅವರು ಸುದೀಪ್ ಅವರೊಟ್ಟಿಗೆ ವೇದಿಕೆಯ ಮೇಲೆ ಕಾಣಲಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here