ವೀಕೆಂಡ್ ವಿತ್ ರಮೇಶ್ ಸೀಸನ್ ನಾಲ್ಕು, ವಾರದಿಂದ ವಾರಕ್ಕೆ ಜನರ ಮನಸ್ಸನ್ನು ಗೆದ್ದು ಮುನ್ನುಗ್ಗುತ್ತಿರುವ ಜನಪ್ರಿಯ ಟಿವಿ ಶೋ. ಕಳೆದ ಶನಿವಾರ ಹಾಗೂ ಭಾನುವಾರ ಚಿತ್ರರಂಗದ ಇಬ್ಬರು ಪ್ರತಿಭಾವಂತ ಹಾಸ್ಯ ನಟರ ಜೀವನ ಹಾಗೂ ಸಾಧನೆಯನ್ನು ನಮ್ಮ ಮುಂದೆ ಇಟ್ಟಿತ್ತು ವೀಕೆಂಡ್ ಶೋ. ವೈಜ್ಯನಾಥ್ ಬಿರಾದರ್ ಹಾಗೂ ಚಿಕ್ಕಣ್ಣ ಈ ಇಬ್ಬರೂ ಕಲಾವಿದರು ಕೂಡ ಕ್ರಮವಾಗಿ ಶನಿವಾರ ಹಾಗೂ ಭಾನುವಾರ ಸಾಧಕರ ಕುರ್ಚಿಯನ್ನು ಅಲಂಕರಿಸಿ, ತಮ್ಮ ಜೀವನದ ಸಾಧಕ ಬಾಧಕಗಳನ್ನು ತಿಳಿಸಿದ್ದರು. ಇನ್ನು ಈ ಶನಿವಾರ ಮತ್ತು ಭಾನುವಾರ ಸಾಧಕರ ಕುರ್ಚಿಯ ಮೇಲೆ ಕೂರಲು ಯಾರು ಬರಲಿದ್ದಾರೆ ಎಂಬುದಕ್ಕೆ ಜೀ ವಾಹಿನಿ ತೆರೆ ಎಳೆದಿದೆ.

ಈ ವಾರಾಂತ್ಯದ ವೀಕೆಂಡ್ ಗೆ ಸಾಧಕರ ಕುರ್ಚಿ ಅಲಂಕರಿಸುವುದಕ್ಕೆ ಸಿನಿಮಾದವರಲ್ಲ, ಬದಲಿಗೆ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಹೊಣೆ ಹೊತ್ತ, ಸಮಾಜದಲ್ಲಿ ಅಪರಾಧಿಗಳ ಅಪರಾಧಗಳನ್ನು ಮಟ್ಟ ಹಾಕುವ ಗುರುತರ ಜವಾಬ್ದಾರಿಯನ್ನು ಹೆಗಲು ಮೇಲೆ ಹೊತ್ತ ಪೋಲಿಸ್ ಇಲಾಖೆಯ ಇಬ್ಬರು , ದಕ್ಷತೆಗೆ ಹೆಸರಾಗಿ, ನಾಡಿನಲ್ಲಿ ಕೀರ್ತಿ ಪಡೆದಿರುವ ಇಬ್ಬರು ಖಡಕ್ ಪೊಲೀಸ್ ಅಧಿಕಾರಿಗಳು ಬರುತ್ತಿದ್ದಾರೆ. ಒಬ್ಬರು ಖಡಕ್ ಐಪಿಎಸ್ ಅಧಿಕಾರಿ ಶಂಕರ್ ಬಿದರಿ , ಮತ್ತೊಬ್ಬರು ರಿಟೈರ್ಡ್ ಅಸಿಸ್ಟೆಂಟ್ ಕಮೀಷನರ್ ಟೈಗರ್ ಅಶೋಕ್ ಕುಮಾರ್.

ಶಂಕರ್ ಬಿದರಿ ಯವರು ಈಗಾಗಲೇ ನಾಡಿನಲ್ಲಿ ಹೆಸರು ಮಾಡಿರುವ ಖಡಕ್ ಐಪಿಎಸ್ ಅಧಿಕಾರಿ. ತಮ್ಮ ಕಾರ್ಯ ದಕ್ಷತೆಗಾಗಿ ಹಲವು ಪ್ರಶಸ್ತಿಗಳನ್ನು ಪಡೆದಿರುವ ಅಧಿಕಾರಿ ಕೂಡಾ ಹೌದು. ಇನ್ನು ನರಹಂತಕ ವೀರಪ್ಪನ್ ಕಾರ್ಯಚಾರಣೆ, ಡೆಡ್ಲಿ ಸೋಮನ ಪುಂಡಾಟಕ್ಕೆ ಕೊನೆ ಹಾಡಿದ, ಸರಗಳ್ಳತನಗಳನ್ನು ತಡೆಯುವಲ್ಲಿ ಪ್ರಮುಖ ಪಾತ್ರವಹಿಸಿದವರ ಎಂದು ಹೇಳುವಾಗ ಅಸಿಸ್ಟೆಂಟ್ ಕಮೀಷನರ್ ಆಗಿದ್ದ ಟೈಗರ್ ಅಶೋಕ್ ಕುಮಾರ್ ಅವರ ಹೆಸರು ಹೇಳಲೇಬೇಕು. ಹೀಗೆ ಪೋಲಿಸ್ ಇಲಾಖೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ಈ ಇಬ್ಬರು ಅಧಿಕಾರಿಗಳು ಈ ಬಾರಿ ವೀಕೆಂಡ್ ನ‌ ಸಾಧಕರ ಕುರ್ಚಿಯಲ್ಲಿ ಕುಳಿತು ತಮ್ಮ ಜೀವನದ ರೋಚಕ ಸಾಹಸಗಳನ್ನು ಕುರಿತು ಹೇಳಲಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here