ಒಂದು ಜೋಡಿ ಜೀನ್ಸ್ ವಸ್ತ್ರದ ತಯಾರಿಕೆಗೆ ಸುಮಾರು 8000 ಲೀಟರ್ ನೀರಿನ ಅಗತ್ಯ ಇದೆ ಎಂಬುದು ಹಲವರಿಗೆ ತಿಳಿದಿಲ್ಲ. ವರ್ಷದಿಂದ ವರ್ಷಕ್ಕೆ ಜೀನ್ಸ್ ವಸ್ತ್ರಗಳ ಬಳಕೆ ಹೆಚ್ಚುತ್ತಲೇ ಇದೆ. ಅದು ಮಾತ್ರವಲ್ಲದೆ ಜೀನ್ಸ್ ಹಳೆಯದಾದ ಮೇಲೆ ಅದನ್ನು ಯಾವ ರೀತಿ ಸದ್ಬಳಕೆ ಮಾಡಬಹುದು ಎಂಬುದರ ಬಗ್ಗೆ ಯಾವುದೇ ಮಾಹಿತಿ ಸಾಕಷ್ಟು ಜನರಿಗೆ ಇಲ್ಲ. ಅದಕ್ಕೆ ಪ್ರತಿವರ್ಷ ಮಿಲಿಯನ್ ಗಟ್ಟಲೆ ಜೀನ್ಸ್ ಗಳು ಕಸದ ತೊಟ್ಟಿಯನ್ನು ಸೇರಿ, ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಇನ್ನು ಡೆನಿಮ್ ಬ್ರಾಂಡ್ ನ ಜೀನ್ಸ್ ಗಳು ಬೇಗ ಹಾಳಾಗುವುದಿಲ್ಲ. ಆದರೆ ಹಳೆಯದಾಯಿತೆಂದು ಬಳಸದೆ ಎಸೆಯುವವರ ಸಂಖ್ಯೆ ಕೂಡಾ ಕಡಿಮೆಯೇನಿಲ್ಲ. ಇದು ಕೂಡಾ ಹಾನಿಯನ್ನು ಉಂಟು ಮಾಡುತ್ತಿದೆಯೇ ಹೊರತು ಲಾಭವನ್ನಲ್ಲ.

ಇದರ ಬಗ್ಗೆ ಕೇವಲ ಮಾತಿನಲ್ಲೇ ಹೇಳಿ ಸುಮ್ಮನಾಗುವ ಜನರ ನಡುವೆ, ಈ ವಿಚಾರವಾಗಿ ಸಾಕಷ್ಟು ಚಿಂತನೆ ನಡೆಸಿದ ಮೂರು ಯುವಜನರ ತಂಡವೊಂದು ಈಗ ಮಾಡುತ್ತಿರುವ ಕೆಲಸ ನಿಜಕ್ಕೂ ಶ್ಲಾಘನೀಯ ಎನಿಸಿದೆ. ಮೃಣಾಲಿನಿ ರಾಜ್ ಪುರೋಹಿತ್, ಅತುಲ್ ಮೆಹ್ತಾ, ನಿಖಿಲ್ ಗೆಹ್ಲೋಟ್ ಎನ್ನುವ ಮೂವರು ಸೇರಿ ರಾಜಸ್ಥಾನದ ಜೋಧ್ ಪುರದಲ್ಲಿ ಆರಂಭಿಸಿದರು ಸೋಲ್ ಕ್ರಾಫ್ಟ್ ಎಂಟರ್ ಪ್ರೈಸ್. ಇದೊಂದು ಸಾಮಾಜಿಕ ಸೇವಾ ಕಾರ್ಯವನ್ನು ಆರಂಭಿಸಿದೆ. ಇಲ್ಲಿ ಹಳೆಯ ಡೆನಿಮ್ ಜೀನ್ಸ್ ಗಳಿಂದ ಶಾಲಾ ಬ್ಯಾಗ್, ಚಪ್ಪಲಿ ಮತ್ತು ಪೆನ್ಸಿಲ್ ಕೇಸ್ ಗಳನ್ನು ತಯಾರಿಸಿ ಬಡ ಮಕ್ಕಳಿಗೆ ಹಂಚುವ ಕೆಲಸ ಮಾಡಲಾಗುತ್ತಿದೆ.

100 ಮಕ್ಕಳನ್ನು ತಲುಪಲು ಪ್ರಾರಂಭಿಸಿದ ಪ್ರಾಯೋಗಿಕ ಯೋಜನೆಯು ಕ್ರಮೇಣ 1,200 ಕ್ಕೆ ಏರಿತು, ಇದರಿಂದಾಗಿ ಹಲವಾರು ಜೀವನಗಳ ಮೇಲೆ ಪರಿಣಾಮ ಬೀರಿತು.ಈಗ ಒಂದು ಮಿಲಿಯನ್ ಮಕ್ಕಳನ್ನು ತಲುಪುವ ಯೋಜನೆ ಅವರದಾಗಿದೆ. ಮೂವರು ಸ್ನೇಹಿತರು ಕೂಡಾ ಲಾಭವನ್ನು ಗಳಿಸುವ ಆಶಯವನ್ನು ಪಕ್ಕಕ್ಕಿಟ್ಟು ಈ ಉದ್ದಿಮೆಯಲ್ಲಿ ತೊಡಗಿಕೊಂಡಿದ್ದಾರೆ. ಅಲ್ಲದೆ ಇದನ್ನು ಕೊಳ್ಳಲು ಬಯಸುವವರಿಗೆ ಮಾರಾಟ ಕೂಡಾ ಮಾಡಲಾಗುತ್ತದೆ. ಸ್ಥಳೀಯ ಅಂಗಡಿಗಳಲ್ಲಿ ಮಾರಾಟ ಮಾಡುವುದಕ್ಕೂ ಮಾತುಕತೆ ನಡೆಸಿದ್ದಾರೆ.

ಅವರು ಯೋಜನೆ ವ್ಯಾಪಾರದ ಜೊತೆಗೆ ಬಡ ಮಕ್ಕಳಿಗೆ ಶಾಲಾ ಬ್ಯಾಗು ಮತ್ತು ಚಪ್ಪಲಿಗಳನ್ನು ಉಚಿತವಾಗಿ ನೀಡುವ ಗುರಿಯನ್ನು ಕೂಡಾ ಮಾಡುತ್ತಿರುವುದು ನಿಜಕ್ಕೂ ಸಮಾಜದಲ್ಲಿ ಒಂದು ಸಂದೇಶವನ್ನು ಕೂಡಾ ನೀಡುತ್ತಿದ್ದು, ಇವರ ಪ್ರಯತ್ನ ಮೆಚ್ಚುಗೆಗೆ ಪಾತ್ರವಾಗಿದೆ‌.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here