ಟಿಕ್ ಟಾಕ್ ವಿಡಿಯೋಗಳ ಸದ್ದು ಎಲ್ಲೆಲ್ಲೂ ತುಂಬಿ ಹೋಗಿದೆ. ತಮ್ಮಲ್ಲಿ ಅಡಗಿರುವ ಪ್ರತಿಭೆಯನ್ನು ಹೊರಹಾಕಲು ಈಗ ಜನರಿಗೆ ದೊರೆತಿರುವ ಇಂದು ಅನ್ ಲೈನ್ ವೇದಿಕೆ ಈ ಟಿಕ್ ಟಾಕ್ ವಿಡಿಯೋ ಮಾಡೋ ಆ್ಯಪ್‌. ನಮ್ಮ ದೇಶದಲ್ಲಿ ಸರಿ ಸುಮಾರು ಎರಡು ಕೋಟಿ ಜನ ಈ ಆ್ಯಪನ್ನು ಬಳಸುತ್ತಿದ್ದಾರೆ. ಇದರ ಮೂಲಕ ಹಾಡುಗಳಿಗೆ ಹಾಗೂ ಡೈಲಾಗ್ ಗಳಿಗೆ ನಟಿಸೋ ಮೂಲಕ ತಮ್ಮ ವಿಡಿಯೋ ಮಾಡಿ ಖುಷಿ ಪಡುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡು ಫೇಮಸ್ ಆಗೋ ತವಕದಲ್ಲಿ ಹಲವರು ಇದ್ದಾರೆ. ಈಗಾಗಲೇ ಅನೇಕರು ಫೇಮಸ್ ಕೂಡಾ ಆಗಿದ್ದಾರೆ. ಆದರೆ ಕೆಲವರಿಗೆ ಟಿಕ್ ಟಾಕ್ ಒಂದು ಹವ್ಯಾಸವಾಗಿರದೆ ಚಟವಾಗಿ ಹೋಗಿದೆ.

 

ತಮಿಳುನಾಡಿನ ಅರಿಯಾಲೂರಿನಲ್ಲಿ 24 ವಯಸ್ಸಿನ ಮಹಿಳೆಗೆ ಟಿಕ್ ಟಾಕ್ ಹುಚ್ಚು ಹಿಡಿದಿದೆ. ಈಕೆಗೆ ಮದುವೆಯಾಗಿದ್ದು ಗಂಡ ಸಿಂಗಪೂರ್ ನಲ್ಲಿ ನಿರ್ವಹಿಸುತ್ತಿದ್ದಾನೆ‌. ಈಕೆ ಇತ್ತೀಚಿಗೆ ಟಿಕ್ ಟಾಕ್ ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದಾಳೆ. ನಂತರ ವಿಡಿಯೋ ಮಾಡಿ ಶೇರ್ ಮಾಡಲು ಆರಂಭಿಸಿದ್ದಾಳೆ. ಈ ಟಿಕ್ ಟಾಕ್ ಚಾಳಿ ಯಾವ ಮಟ್ಟಕ್ಕೆ ಹೋಗಿದೆ ಎಂದರೆ ಆಕೆ ಮನೆ, ಮಕ್ಕಳ ಕಡೆ ಕೂಡಾ ಗಮನ ಕೊಡದೆ ಕೇವಲ ವಿಡಿಯೋ ಮಾಡುವ ಬಗ್ಗೆ ಆಲೋಚಿಸುತ್ತಾ, ವಿಡಿಯೋ ಮಾಡುವುದರಲ್ಲಿ ಲೀನವಾಗಿ ಹೋಗಿದ್ದಾಳೆ.

ಇದಾದ ನಂತರ ನೆರೆಹೊರೆಯವರು ಆಕೆಯ ಪತಿ ಪಳನಿ ವೇಲ್ ಗೆ ಫೋನ್ ಮೂಲಕ ಆತನ ಪತ್ನಿಯ ಬಗ್ಗೆ ವಿಷಯ ತಿಳಿಸಿದ್ದಾರೆ. ಪಳನಿ ವೇಲ್ ಹೆಂಡತಿಗೆ ಕರೆ ಮಾಡಿ ಟಿಕ್ ಟಾಕ್ ಬಿಟ್ಟು ಮನೆ ಹಾಗೂ ಮಕ್ಕಳ ಕಡೆ ಗಮನ ನೀಡುವಂತೆ ಬುದ್ಧಿ ಹೇಳಿದ್ದಾನೆ. ಆದರೆ ಆಕೆ ಅದನ್ನು ಅರ್ಥ ಮಾಡಿಕೊಳ್ಳದೆ, ಮನ ನೊಂದು ಟಿಕ್ ಟಾಕ್ ವಿಡಿಯೋ ಮಾಡುತ್ತಾ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಟಿಕ್ ಟಾಕ್ ಅಡಿಕ್ಷನ್ ಒಂದು ಸಾವಿಗೆ ಕಾರಣವಾಗಿದೆ‌. ಆಕೆಗೆ ಮನೆ ಮಕ್ಕಳಿಗಿಂತ ಟಿಕ್ ಟಾಕ್ ವಿಡಿಯೋ ಪ್ರಿಯ ಎನಿಸಿದ್ದು ನಿಜಕ್ಕೂ ಬೇಸರದ ಸಂಗತಿ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here