ರಾಜ್ಯದ ಮುಖ್ಯಮಂತ್ರಿ ಒಬ್ಬರು ಪುಟ್ಟ ಬಾಲಕಿಯೊಬ್ಬಳ ಜೊತೆ ಟಿಕ್ ಟಾಕ್ ವೀಡಿಯೋ ಮಾಡುವುದು ಎಂದರೆ ಅದು ಬಹಳ ಆಶ್ಚರ್ಯಕರ ಸಂಗತಿ ಎನಿಸಬಹುದು. ಏನು ಮುಖ್ಯಮಂತ್ರಿ ಅವರು ಟಿಕ್ ಟಾಕ್ ಮಾಡುವುದಾ? ಸುಳ್ಳು ಸುದ್ದಿ ಎನ್ನಲೂ ಬಹುದು. ಆದರೆ ಇದು ಸುಳ್ಳಲ್ಲ ನಿಜವಾಗಿಯೂ ನಡೆದಂತಹ ಘಟನೆ ಇದಾಗಿದೆ‌. ಹೀಗೆ ಟಿಕ್ ಟಾಕ್ ವೀಡಿಯೋ ಮಾಡಿರುವುದು ಪಂಜಾಬ್ ನ ಮುಖ್ಯಮಂತ್ರಿ. 5 ವರ್ಷದ ಬಾಲಕಿಯೊಬ್ಬಳ ಜೊತೆಗೆ ಪಂಜಾಬ್​ ಸಿಎಂ ಕ್ಯಾಪ್ಟನ್​ ಅಮರಿಂದರ್​ ಸಿಂಗ್​​ ಟಿಕ್​ಟಾಕ್​ ವಿಡಿಯೋ ಮಾಡಿದ್ದಾರೆ. ಈ ವೀಡಿಯೋ ಈಗ ಎಲ್ಲರ ಗಮನವನ್ನು ಸೆಳೆದು ಸುದ್ದಿಯಾಗಿದೆ.

ನೂರ್ ಎಂಬ ಬಾಲಕಿಯೊಬ್ಬಳು ಈಗಾಗಲೇ ಟಿಕ್​ಟಾಕ್ ಸ್ಟಾರ್ ಆಗಿದ್ದು, ಆ ಬಾಲಕಿಗೆ ತನ್ನ ಸಾಥ್​ ನೀಡಿದ ಮುಖ್ಯಮಂತ್ರಿ ಅವರಾದ ಅಮರಿಂದರ್ ಸಿಂಗ್ ಅವರು ಲಾಕ್​ಡೌನ್​ ಪಾಲನೆ ಬಗ್ಗೆ ಜನರಿಗೆ ಒಂದು ಸಂದೇಶವನ್ನು ಸಾರಿದ್ದಾರೆ. ಲಾಕ್ ಡೌನ್ ಸಡಿಲಿಕೆಯ ಹಿನ್ನೆಲೆಯಲ್ಲಿ ಗುಂಪೊಂದು ಕ್ರಿಕೆಟ್ ಆಡಲು ಹೊರಟಿರುವಾಗ ಅದನ್ನು ಗಮನಿಸಿದ ನೂರ್ ಸಿಖ್ ಬಾಲಕನ ರೀತಿ ವೇಷವನ್ನು ಧರಿಸಿ, ಅವರಿಗೆ ಕ್ರಿಕೆಟ್ ಆಡಬೇಡಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಎಂದು ತಿಳಿ ಹೇಳುತ್ತಾ, ಇಲ್ಲವಾದಲ್ಲಿ ಸಿಎಂ ಅವರಿಗೆ ಹೇಳ್ತೀನಿ ಎನ್ನುತ್ತಾಳೆ.

ಕ್ರಿಕೆಟ್ ಆಡಲು ಹೊರಟ ತಂಡ ಆ ಬಾಲಕನ ಮಾತಿಗೆ ಕೇರ್ ಮಾಡಲು ಹೋಗುವುದಿಲ್ಲ. ಆಗ ಬಾಲಕನ ಡ್ರೆಸ್ ನಲ್ಲಿದ್ದ ಹುಡುಗಿ ಸಿಎಂ ಅವರಿಗೆ ವೀಡಿಯೋ ಕಾಲ್ ಮಾಡಿ, ಲಾಕ್ ಡೌನ್ ನಿಯಮವನ್ನು ಉಲ್ಲಂಘನೆ ಮಾಡಿದವರಿಗೆ ಎಚ್ಚರಿಕೆಯನ್ನು ನೀಡುವ ಸನ್ನಿವೇಶವು ಈ ವೀಡಿಯೋದಲ್ಲಿ ಇದೆ. ಈ ಮೂಲಕ ಲಾಕ್ ಡೌನ್ ನಿಯಮ ಮರೆತು ಆಡಲು ಹೋಗುವವರಿಗೆ ಅದು ತಪ್ಪು ಎಂದು ಸಂದೇಶವನ್ನು ನೀಡಿದ್ದಾರೆ. ಈಗ ಈ ಟಿಕ್​ಟಾಕ್​ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಜನ ಮೆಚ್ಚುಗೆ ಪಡೆಯುತ್ತಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here