ರಾಜ್ಯದ ಪಠ್ಯಕ್ರಮವದಲ್ಲಿ ಶೇಕಡಾ 30ರಷ್ಟು ಪಠ್ಯವನ್ನು ಕಡಿತಗೊಳಿಸುವ ನಿರ್ಧಾರವನ್ನು ಸರ್ಕಾರ ಬದಲಿಸಿದೆ ಎನ್ನಲಾಗಿದೆ.ಅಲ್ಲದೇ ಈಗಾಗಲೇ ವಿರೋಧ ಪಕ್ಷಗಳ ಟೀಕೆಗೆ ಗುರಿಯಾಗಿದ್ದ, ವಿವಾದಕ್ಕೆ ಕಾರಣವಾಗಿದ್ದ ಟಿಪ್ಪು ಸುಲ್ತಾನ್ ಮತ್ತು ಸಂವಿಧಾನದ ಬಗ್ಗೆ ಪಠ್ಯ ಕಡಿತ ಮಾಡಿದ ಪರಿಷ್ಕೃತ ಪಠ್ಯವನ್ನು ಹಿಂದಕ್ಕೆ ಪಡೆಯಲು ರಾಜ್ಯ ಸರ್ಕಾರವು ಸೂಚನೆಯನ್ನು ನೀಡಿದೆ ಎನ್ನಲಾಗಿದೆ.

ಮೈಸೂರು ಹುಲಿ ಖ್ಯಾತಿಯ ಟಿಪ್ಪು ಸುಲ್ತಾನ್ ಆತನ ತಂದೆ ಹೈದರಾಲಿ ಗೆ ಸಂಬಂಧಿಸಿದ ಹಲವು ಮಾಹಿತಿಯನ್ನು 7 ನೇ ತರಗತಿಯ ಪಠ್ಯಪುಸ್ತಕದಿಂದ ಕೈಬಿಡಲಾಗಿತ್ತು.ಸರ್ಕಾರದ ಈ ನಿರ್ಧಾರವು ಸುದ್ದಿಯಾಗುತ್ತಲೇ ಅದಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು.ಹೀಗೆ ತೀವ್ರ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಪ್ರಸ್ತುತ ಈ ವಿಷಯವಾಗಿ ಪಠ್ಯ ಕಡಿತವನ್ನು ಮಾಡದೇ ಇರಲು ಚಿಂತನೆ ನಡೆದಿದೆ ಎನ್ನಲಾಗಿದೆ.

ಅಲ್ಲದೇ ಈಗಾಗಲೇ ವೆಬ್‌ಸೈಟ್‌ನಲ್ಲಿ ಅಪ್ ಲೋಡ್ ಮಾಡಲಾಗಿದ್ದ ಪರಿಷ್ಕೃತ ಪಠ್ಯವನ್ನು ಹಿಂಪಡೆಯಲು ಕರ್ನಾಟಕ ಪಠ್ಯಪುಸ್ತಕ ಸಂಘಕ್ಕೆ ನಿರ್ದೇಶನವನ್ನು ಕೂಡಾ ನೀಡಲಾಗಿದೆ ಎನ್ನಲಾಗಿದೆ. ಶಿಕ್ಷಣ ಸಚಿವರ ಕಛೇರಿಯು ‘ಶೈಕ್ಷಣಿಕ ವರ್ಷಕ್ಕೆ ಎಷ್ಟು ದಿನಗಳು ಉಳಿದಿವೆ ಎಂಬುದು ಇನ್ನೂ ನಮಗೆ ಸ್ಪಷ್ಟವಾಗಿಲ್ಲ ಆದ್ದರಿಂದ ಪಠ್ಯಕ್ರಮವನ್ನು ಪರಿಷ್ಕರಿಸುವ ಪ್ರಸ್ತಾಪ ಇನ್ನೂ ಅಂತಿಮಗೊಂಡಿಲ್ಲ’ ಎಂದು ತಿಳಿಸಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here