ದಕ್ಷಿಣದ ಸುಪ್ರಸಿದ್ಧ ಯಾತ್ರಾ ಸ್ಥಳ ತಿರುಮಲ ತಿರುಪತಿಯ ಲಡ್ಡು ಗಳನ್ನು ತಯಾರಿಸುವ ಅಡುಗೆ ಕೋಣೆಯಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡು ಆತಂಕವನ್ನು ಸೃಷ್ಟಿಸಿದ ಘಟನೆ ಭಾನುವಾರ ನಡೆದಿದ್ದು, ಕೆಲ ಸಮಯದವರೆಗೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬೆಂಕಿಯು ಹೊತ್ತಿಕೊಂಡ ಪರಿಣಾಮವಾಗಿ ನೋಡು ನೋಡುತ್ತಿದ್ದಂತೆಯೇ ದಟ್ಟವಾದ ಹೊಗೆ ಎದ್ದು, ಲಡ್ಡು ತಯಾರಿಸುವ ಕೋಣೆಯಲ್ಲಿ ಬೆಂಕಿ ಆವರಿಸಿಕೊಂಡಿತ್ತು. ಕೂಡಲೇ ಅಗ್ನಿ ಶಾಮಕ ದಳಕ್ಕೆ ಸಂದೇಶವನ್ನು ರವಾನಿಸಲಾಯಿತು.

ಸ್ಥಳಕ್ಕೆ ಸೂಕ್ತ ಸಮಯದಲ್ಲಿ ಆಗಮಿಸಿದ ಅಗ್ನಿ ಶಾಮಕ ದಳದವರು, ಬೆಂಕಿ ತನ್ನ ಕೆನ್ನಾಲಿಗೆಯನ್ನು ಹರಡದಂತೆ ಬೆಂಕಿಯನ್ನು ನಂದಿಸುವಲ್ಲಿ ಸಫಲರಾಗಿದ್ದಾರೆ‌. ಇದ್ದಕ್ಕಿದ್ದಂತೆ ಸಂಭವಿಸಿದ ಈ ಅಗ್ನಿ ದುರಂತಕ್ಕೆ ಕಾರಣವೇನು ಎಂಬುದು ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಸದ್ಯಕ್ಕೆ ನಡೆಸಿರುವ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿರುವುದು ಏನೆಂದರೆ, ಲಡ್ಡು ತಯಾರಿಸುವ ಸಂದರ್ಭದಲ್ಲಿ ಸಿಬ್ಬಂದಿ ಒಬ್ಬರು ದೊಡ್ಡ ಪಾತ್ರೆಯೊಂದರಲ್ಲಿ ಎಣ್ಣೆ ಸುರಿಯುತ್ತಿರುವಾಗ ಒಲೆಯ(ಸ್ಟೌ) ಬೆಂಕಿ ಅದಕ್ಕೆ ತಾಗಿದ ಪರಿಣಾಮವಾಗಿ, ಬೆಂಕಿ ಹೊತ್ತಿಕೊಂಡಿತು ಎನ್ನಲಾಗಿದೆ.

ಹೊತ್ತಿ ಕೊಂಡ ಬೆಂಕಿ ಅದೇ ಕೋಣೆಯಲ್ಲಿ ಸಂಗ್ರಹಿಸಿ ಇಡಲಾಗಿದ್ದ ತುಪ್ಪ ಮತ್ತು ಎಣ್ಣೆಯ ಡಬ್ಬಗಳಿಗೂ ಕೂಡಾ ವ್ಯಾಪಿಸಿದ ಕಾರಣ ಬೆಂಕಿ ಹರಡಿಕೊಂಡಿದೆ. ಆದರೆ ಸೂಕ್ತ ಸಮಯದಲ್ಲಿ ಜಾಗೃತಗೊಂಡ ಸಿಬ್ಬಂದಿ ವರ್ಗದವರು ಒಲೆಗಳನ್ನೆಲ್ಲಾ ನಂದಿಸಿದರು. ಆದರೂ ಅಗ್ನಿಯ ತೀವ್ರತೆ ತಡೆಯಲಾಗಲಿಲ್ಲವಾದ್ದರಿಂದ ಅಗ್ನಿ ಶಾಮಕ ದಳವು ಸೂಕ್ತ ಸಮಯಕ್ಕೆ ಸ್ಥಳವನ್ನು ತಲುಪಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here