ತಿರುಮಲದಲ್ಲಿ ನೆಲೆಸಿರುವ ಕಲಿಯುಗ ಪ್ರತ್ಯಕ್ಷ ದೈವ ಶ್ರೀ ವೆಂಕಟೇಶ್ವರನ ಆಲಯದ ಹುಂಡಿಗೆ ಕೂಡಾ ಭಾರತದ ಆರ್ಥಿಕತೆಯ ಬಿಸಿ ತಟ್ಟಿದೆ. ಕಳೆದ 9 ದಿನಗಳಿಂದ ನಡೆದ ಬ್ರಹ್ಮೋತ್ಸವದಲ್ಲಿ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಪಾಲ್ಗೊಂಡಿದ್ದರೂ ಕೂಡಾ ಭಕ್ತರಿಂದ ಕಾಣಿಕೆ ರೂಪದಲ್ಲಿ ಹುಂಡಿಗೆ ಬಂದು ಸೇರಿರುವ ಹಣದ ಪ್ರಮಾಣ ಮಾತ್ರ ಇಳಿಮುಖವಾಗಿದೆ ಎಂದಿವೆ ವರದಿಗಳು. ನಿನ್ನೆ ಅಂದರೆ ಮಂಗಳವಾರ ತಿರುಪತಿ ತಿಮ್ಮಪ್ಪನ ಸನ್ನಿಧಾನದಲ್ಲಿ ಒಂಬತ್ತು ದಿನಗಳ ಬ್ರಹ್ಮೋತ್ಸವಕ್ಕೆ ವಿದ್ಯಕ್ತವಾಗಿ ತೆರೆಬಿದ್ದಿದ್ದು, ಕಳೆದ ವರ್ಷಕ್ಕೆವ ಹೋಲಿಕೆ ಮಾಡಿದರೆ ಈ ಬಾರಿ ಭಕ್ತರ ಸಂಖ್ಯೆಯಲ್ಲಿ ವೃದ್ಧಿಯಾಗಿದೆ. ಆದರೆ ತಿಮ್ಮಪ್ಪನ ಹುಂಡಿಗೆ ಬಂದ ಹಣ ಮಾತ್ರ ಇಳಿಕೆಯಾಗಿದೆ.

ಬ್ರಹ್ಮೋತ್ಸವವು ಕಳೆದ 9 ದಿನಗಳಿಂದ ಸಾಂಪ್ರದಾಯಿಕವಾಗಿ ನಡೆದು ನಿನ್ನೆಗೆ ಮುಗಿದಿದೆ. ಈ ಬಾರಿ ಈ ಸಂಭ್ರಮವನ್ನು ಕಣ್ತುಂಬಿಕೊಳ್ಳಲು ತಿರುಮಲ ಕ್ಕೆ ಬಂದ ಭಕ್ತರ ಸಂಖ್ಯೆ ಸುಮಾರು 7.7 ಲಕ್ಷ. ಭಕ್ತಾದಿಗಳ ಸಂಖ್ಯೆ ಕಳೆದ ವರ್ಷದ ಬ್ರಹ್ಮೋತ್ಸವದ ಸಮಯದಲ್ಲಿ 5.9 ಲಕ್ಷ ಇತ್ತು. ಈ ಬಾರಿ ಭಕ್ತಾದಿಗಳ ಸಂಖ್ಯೆ ಏನೋ ವೃದ್ಧಿಹಾಗಿದೆ. ಆದರೆ ತಿಮ್ಮಪ್ಪನ ಹುಂಡಿ ಸಂಗ್ರಹದ ಹಣ ಮಾತ್ರ ಕಡಿಮೆಯಾಗಿರುವುದು ವಿಶೇಷ ಎನಿಸಿದೆ. ಕಳೆದ ವರ್ಷ ಬ್ರಹ್ಮರಥೋತ್ಸವದ ನಂತರ ಹುಂಡಿಯ ಸಂಗ್ರಹ 20.52 ಕೋಟಿ ರೂಪಾಯಿ ಆಗಿತ್ತು.

ಆದರೆ ಈ ಬಾರಿ ಬ್ರಹ್ಮ ರಥೋತ್ಸವದ 20.40 ಕೋಟಿ ರೂಪಾಯಿಗೆ ಇಳಿಕೆಯಾಗಿದೆ. ಅಂದರೆ ಕಳೆದ ವರ್ಷಕ್ಕಿಂತ ಈ ಬಾರಿ 12.75 ಲಕ್ಷ ರೂ. ಕಡಿಮೆ ಹಣ ಹುಂಡಿಯಲ್ಲಿ ಸಂಗ್ರಹವಾಗಿದೆ. ಕಳೆದ ಬಾರಿ 2.17 ಲಕ್ಷ ಮಂದಿ ತಿಮ್ಮಪ್ಪನ ಸನ್ನಿಧಾನದಲ್ಲಿ ಮುಡಿ ಕೊಟ್ಟಿದ್ದರು. ಆದರೆ ಈ ಬಾರಿ ಮುಡಿಕೊಟ್ಟವರ ಸಂಖ್ಯೆ 3.23 ಲಕ್ಷಕ್ಕೆ ಏರಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಮುಡಿಕೊಟ್ಟ ಭಕ್ತರ ಸಂಖ್ಯೆ ಕೂಡಾ ಶೇ.50 ರಷ್ಟು ಹೆಚ್ಚಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here