ವರ್ಷಪೂರ್ತಿ ಲಕ್ಷಾಂತರ ಭಕ್ತಸಾಗರದಿಂದ ತುಂಬಿ ತುಳುಕುವ ಭೂಲೋಕದ ವೈಕುಂಠ ತಿರುಮಲ ತಿರುಪತಿ ತಿಮ್ಮಪ್ಪ ಸ್ವಾಮಿ ಸನ್ನಿಧಿ ಐದು ದಿನಗಳ ಕಾಲ ಭಕ್ತರಿಗೆ ಬಾಗಿಲು ತೆಗಿಯಲ್ಲ.ಆಗಸ್ಟ್ ತಿಂಗಳಲ್ಲಿ ತಿರುಪತಿಗೆ ಭೇಟಿ ನೀಡುವ ಯೋಜನೆಗಳಿರುವ ಭಕ್ತಾದಿಗಳಿಗೆ ಇದೆ, ಇಲ್ಲೊಂದು ವಿಶೇಷ ಸುದ್ದಿ ಅಥವಾ ಮುನ್ಸೂಚನೆ. ಅದೇನೆಂದರೆ ಮುಂಬರುವ ಆಗಸ್ಟ್‌ನ 12 ,13,14,15, ಮತ್ತು16 ನೇ ತಾರೀಖುಗಳಲ್ಲಿ ಭಕ್ತರಿಗೆ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಸಾಧ್ಯವಿಲ್ಲ. ಈ‌ ನಾಲ್ಕು ದಿನಗಳಲ್ಲಿ ಆಲಯದಲ್ಲಿ ವಿಶೇಷ ಪೂಜೆ ಪುನಸ್ಕಾರಗಳು ಇರುವ ಕಾರಣ ದೇವಾಲಯದ ಆಡಳಿತ ಮಂಡಳಿಯಾದ ಟಿಟಿಡಿ ಭಕ್ತರಿಗೆ ಈ ದಿನಗಳಲ್ಲಿ ಆಲಯ ಪ್ರವೇಶವನ್ನು ನಿರ್ಬಂಧಿತಗೊಳಿಸುತ್ತಿದೆ.

ಆಗಮ ಶಾಸ್ತ್ರದಲ್ಲಿ ತಿಳಿಸಿರುವ ಸಂಪ್ರದಾಯವಾದ ಅಷ್ಟಬಂಧನ ಬಾಲಾಲಯ ಮಹಾಸಂಪ್ರೋಕ್ಷಣ ಎಂಬ ವಿಧಿಯನ್ನು ದೇವಾಲಯದಲ್ಲಿ ನಿರ್ವಹಿಸಬೇಕಾಗಿದ್ದು, 1958 ರಿಂದ ಶಾಸ್ತ್ರೋಕ್ತವಾಗಿ ನಡೆಸಿಕೊಂಡು ಬರುತ್ತಿರುವ ಈ ವಿಧಿಯು ಪ್ರತಿ ಹನ್ನೆರಡು ವರ್ಷಕ್ಕೊಮ್ಮೆ ನಡೆಯುತ್ತದೆ.
ಈ ಸಂದರ್ಭದಲ್ಲಿ ತಿರುಪತಿ ಬಾಲಾಜಿ ಹಾಗೂ ಪರಿವಾರ ದೇವತೆಗಳಿಗೆ ವಿಶೇಷ ಪೂಜೆ, ಪುನಸ್ಕಾರಗಳು ನಡೆಯುತ್ತವೆ ಹಾಗೂ ಎಲ್ಲಾ ಉತ್ಸವ ಮೂರ್ತಿಗಳನ್ನು ಯಾಗಶಾಲೆಯಲ್ಲಿಟ್ಟು ಪೂಜಾ ವಿಧಾನಗಳನ್ನು ನಡೆಸಲಾಗುತ್ತದೆ.

ಈ ಸಂದರ್ಭದಲ್ಲಿ ದಿನವೊಂದಕ್ಕೆ ಕೇವಲ 30 ರಿಂದ 35 ಸಾವಿರ ಭಕ್ತಾದಿಗಳಿಗೆ ಮಾತ್ರ ಆಲಯದಲ್ಲಿ ಶ್ರೀ ವೆಂಕಟೇಶ್ವರನ ದರ್ಶನ ಮಾಡಲು ಅವಕಾಶವಾಗುತ್ತದೆ. ಅನೇಕರಿಗೆ ದರ್ಶನ ತುಂಬಾ ತಡವಾಗಿ , ಜನ ಜಂಗುಳಿ ಹೆಚ್ಚುತ್ತದೆ. ಆದರೆ ಈ ಬಾರಿ ಈ ಒತ್ತಡವನ್ನು ತಪ್ಪಿಸಲು ದೇವಾಲಯದ ಆಡಳಿತ ಮಂಡಳಿ ಎಲ್ಲಾ ರೀತಿಯ ದರ್ಶನಗಳನ್ನು ನಾಲ್ಕು ದಿನಗಳ ಕಾಲ ಸಂಪೂರ್ಣವಾಗಿ ನಿಲ್ಲಿಸುವ ನಿರ್ಧಾರ ಮಾಡಿದೆ. ಈಗಾಗಲೇ ಆಗಸ್ಟ್ ತಿಂಗಳ ಅರ್ಜಿತ ಸೇವೆಗಳನ್ನು ರದ್ದುಗೊಳಿಸಿದೆ.

ಆಗಸ್ಟ್‌ 12 ರಿಂದ ಆರಂಭವಾಗುವ ಈ ಸೇವೆಗಳು ಆಗಸ್ಟ್‌ 16 ಕ್ಕೆ ಮುಕ್ತಾಯವಾಗುತ್ತದೆ. ಆಗಸ್ಟ್ 11 ರಂದೇ ಅಂಕುರಾರ್ಪಣೆ ನಡೆಯಲಿದ್ದು, 12 ರಿಂದ ಅಷ್ಟಬಂಧನ ಬಾಲಾಲಯ ಮಹಾಸಂಪ್ರೋಕ್ಷಣ ವಿಧಿಯು ಆರಂಭವಾಗುತ್ತದೆ. ಆದ್ದರಿಂದ ಆಗಸ್ಟ 13 ರಿಂದ 16ರ ವರಗೆ ಎಲ್ಲಾ ಭಕ್ತರಿಗೆ ಆಲಯ ಪ್ರವೇಶ ನಿಷೇಧಿಸಲಾಗಿದೆ. ಈ ವಿಧಿಯು ಮುಗಿದ ನಂತರ ಪುನಃ ಎಂದಿನಂತೆ ದೇವಾಲಯವು ಭಕ್ತರಿಗಾಗಿ ಸದಾ ತೆರೆದಿರುತ್ತದೆ ಎಂದು ಟಿಟಿಡಿ ತಿಳಿಸಿದೆ.ಸದಾ ಅಸಂಖ್ಯಾತ ಭಕ್ತರಿಂದ ತುಂಬಿ ತುಳುಕುತ್ತಿದ್ದ ತಿರುಮಲ ತಿರುಪತಿ ದೇವಾಲಯ ಐದು ದಿನಗಳ ನಿಶ್ಯಬ್ದ ಆಗಲಿದೆ.

Photos credit :- TTD Facebook Page.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here