ತಿರುಪತಿಗೆ ಹೋಗಿ ತಿರುಮಲದಲ್ಲಿ ಶ್ರೀ ವೆಂಕಟೇಶ್ವರನ ದರ್ಶನ ಪಡೆಯಲು ಹೋಗುವ ಭಕ್ತರಿಗೊಂದು ಹೊಸ ವರ್ಷದ ಉಡುಗೊರೆಯನ್ನು ನೀಡಲು ತಯಾರಿ ನಡೆಸಿದೆ ಟಿಟಿಡಿ. ಶ್ರೀ ವೆಂಕಟೇಶ್ವರನ ದರ್ಶನಕ್ಕೆ ಬರುವ ಪ್ರತಿ ಯಾತ್ರಿಕರಿಗೂ ಕೂಡಾ ಒಂದೊಂದು ಲಾಡು ಉಚಿತವಾಗಿ ನೀಡುವವುದಾಗಿ ಟಿಟಿಡಿ ನಿರ್ಧರಿಸಿದೆ. ವೈಕುಂಠ ಏಕಾದಶಿಯ ನಂತರ ಈ ಮಹತ್ವದ ಯೋಜನೆ ಜಾರಿಗೆ ಬರುವುದು ಎನ್ನಲಾಗಿದೆ. ಇದರಿಂದ ಪ್ರಸಾದ ಕಾಳಸಂತೆಯಲ್ಲಿ ಮಾರಾಟ ವಾಗುತ್ತಿದೆ ಎಂಬ ಆರೋಪಕ್ಕೆ ಕೂಡಾ ಒಂದು ಉತ್ತರ ಸಿಗಬಹುದು ಎಂದು ಹೇಳಲಾಗಿದೆ.

ಇಷ್ಟು ದಿನ ತಿರುಮಲಕ್ಕೆ ಕಾಲ್ನಡಿಗೆಯಲ್ಲಿ ಬರುವ ಭಕ್ತರಿಗೆ ಒಂದು ಲಾಡು ಉಚಿತವಾಗಿ ನೀಡುವ ವ್ಯವಸ್ಥೆ ಇತ್ತು‌. ಈಗ ಎಲ್ಲರಿಗೂ ಉಚಿತ ಲಾಡು ನೀಡುವ ವ್ಯವಸ್ಥೆಯನ್ನು ಟಿಟಿಡಿ ಜಾರಿಗೆ ತಂದರೆ, ಪ್ರತಿದಿನ ಬೆಟ್ಟಕ್ಕೆ ಬರುವ ಸುಮಾರು 80 ಸಾವಿರದಿಂದ, ಒಂದು ಲಕ್ಷ , ಕೆಲವೊಮ್ಮೆ ಅದಕ್ಕಿಂತ ಹೆಚ್ಚು ಜನ ಭಕ್ತರಿಗೆ ಉಚಿತ ಲಡ್ಡುಗಳು ಸಿಗಲಿದೆ. ಪ್ರಸ್ತುತ ತಿರುಮಲದಲ್ಲಿ ಒಂದು ದಿನಕ್ಕೆ ಸುಮಾರು 3 ಲಕ್ಷ ಲಡ್ಡು ಪ್ರಸಾದವನ್ನು ಮಾರಾಟ ಮಾಡಲಾಗುತ್ತದೆ. ಹೆಚ್ಚುವರಿ ಲಡ್ಡುಗಳು ಬೇಕಿದ್ದವರು ಕೌಂಟರ್ ನಲ್ಲಿ ಒಂದು ಲಡ್ಡುವಿಗೆ 50 ರೂ ನೀಡಿ ಖರೀದಿಸಬೇಕು.

 

ತಿರುಮಲದಲ್ಲಿ ಈಗ ವೈಕುಂಠ ಏಕಾದಶಿಯ ಸಂಭ್ರಮ, ಸಡಗರಗಳು ತುಂಬಿದ್ದು, ಬರುವ 6 ನೇ ತಾರೀಖಿನಂದು ವೈಕುಂಠ ಏಕಾದಶಿಗೆ ತಿರುಮಲ ಸಿದ್ಧವಾಗುತ್ತಿದೆ. ಅಲ್ಲದೆ ಅಲ್ಲಿನ ಸಂಪ್ರದಾಯದಂತೆ ವೈಕುಂಠ ಏಕಾದಶಿ ಮತ್ತು ಮುಕ್ಕೋಟಿ ದ್ವಾದಶಿಯಂದು ಮಾತ್ರ ವೈಕುಂಠ ದ್ವಾರವನ್ನು ತೆರೆಯುವ ನಿರ್ಧಾರವನ್ನು ಟಿಟಿಡಿ ಮಾಡಲಾಗಿದೆ ಎನ್ನಲಾಗಿದೆ. ಒಟ್ಟಾರೆ ಹೊಸ ಯೋಜನೆ ಜಾರಿಯಾದರೆ ಇನ್ನು ಮುಂದೆ ತಿರಮಲಕ್ಕೆ ಭೇಟಿ ನೀಡುವ ಭಕ್ತರೆಲ್ಲರಿಗೂ ಉಚಿತ ಲಡ್ಡು ಪ್ರಸಾದ ದೊರೆಯಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here