ಲಾಕ್​ಡೌನ್​ ನಲ್ಲಿ ದೇಶದ ಎಲ್ಲಾ ಪ್ರಮುಖ ದೇವಾಲಯಗಳು ಬಂದ್ ಆಗಿವೆ. ಇದರ ನಡುವೆಯೇ ಭಾರತದ ಶ್ರೀಮಂತ ದೇಗುಲಗಳಲ್ಲಿ ಒಂದಾದ ತಿರುಪತಿಯ ತಿರುಮಲದಲ್ಲಿ ಇರುವ ಕಲಿಯುಗ ಪ್ರತ್ಯಕ್ಷ ದೈವ ಶ್ರೀ ವೆಂಕಟೇಶ್ವರನ ದರ್ಶನ ಭಾಗ್ಯ ವನ್ನು ಭಕ್ತರಿಗೆ ನೀಡಲು ಸಿದ್ಧತೆಗಳು ಆರಂಭವಾಗುತ್ತಿವೆ‌. ಆದರೆ ಕೊರೊನಾ ನಂತರ, ಅಥವಾ ಪ್ರಸ್ತುತ ಪರಿಸ್ಥಿತಿಯ ಅವಗಾಹನೆಯೊಂದಿಗೆ ಮೊದಲಿನಂತೆ ದರ್ಶನ ಇರುವುದು ಸಾಧ್ಯವಿಲ್ಲ. ಈ ವಿಚಾರವಾಗಿ ಟಿಟಿಡಿ ಪ್ರತಿಕ್ರಿಯಿಸಿದ್ದು ಆಲಯದಲ್ಲಿ ನಿರ್ದಿಷ್ಟ ಮಿತಿಯಲ್ಲಿ ಭಕ್ತರಿಗೆ ತಿಮ್ಮಪ್ಪನ ದರ್ಶನಕ್ಕೆ ಅವಕಾಶವನ್ನು ಮಾಡಿಕೊಡಲಾಗುತ್ತದೆ ಎಂದು ಮಾಹಿತಿಯನ್ನು ನೀಡಿದೆ.

ತಿರುಪತಿಯಲ್ಲಿ ಸಾಮಾಜಿಕ ಅಂತರವನ್ನು ಕಾದುಕೊಂಡು, ನಿರ್ದಿಷ್ಟವಾದಂತಹ ಸುರಕ್ಷಿತ ಕ್ರಮಗಳನ್ನು ಅಳವಡಿಸಿಕೊಂಡು, ಅದರ ಜೊತೆಗೆ ಆಲಯದಲ್ಲಿ ನಿರ್ದಿಷ್ಟ ಸಂಖ್ಯೆಯಲ್ಲಿ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಟಿಟಿಡಿ ತಿಳಿಸಿದೆಯಾದರೂ, ಈ ವ್ಯವಸ್ಥೆ ಯಾವಾಗಿನಿಂದ ಜಾರಿಗೆ ಬರಲಿದೆ ಎಂಬುದರ ಬಗ್ಗೆ ಮಾತ್ರ ಇನ್ನೂ ಸ್ಪಷ್ಟನೆಯನ್ನು ನೀಡಿಲ್ಲ. ಆದರೆ ಕೆಲವು ದಿನಗಳ ಹಿಂದೆ ಟಿಟಿಡಿ ಮೂರನೇ ಹಂತದ ಲಾಕ್ ಡೌನ್ ನಂತರ ಆಲಯದಲ್ಲಿ ಭಕ್ತರಿಗೆ ಪ್ರವೇಶ ನೀಡುವ ಬಗ್ಗೆ ಹೇಳಿತ್ತು.

ಅದು ಮಾತ್ರವೇ ಅಲ್ಲದೇ ಆಂಧ್ರ ಸರ್ಕಾರದ ಸಾರಿಗೆ ಬಸ್​ಗಳನ್ನು ಕೂಡಾ ಬೇಡಿಕೆ ಹಾಗೂ ಅವಶ್ಯಕತೆಗೆ ತಕ್ಕಂತೆ ರಸ್ತೆಗೆ ಇಳಿಸಲು ಯೋಜನೆಗಳನ್ನು ರೂಪಿಸಲಾಗುತ್ತಿದೆ ಎನ್ನಲಾಗಿದೆ. ಲಾಕ್​​ಡೌನ್​ ಏನಾದರೂ ಸಡಿಲವಾದರೆ ಆಗ ಬಸ್​ ಸಂಚಾರ ಆರಂಭವಾಗಲಿದೆ ಎನ್ನಲಾಗಿದೆ. ಒಟ್ಟಾರೆ ಎಲ್ಲೆಡೆ ಲಾಕ್ ಡೌನ್ ತೆರವಿನ ಬಗ್ಗೆ ಆಲೋಚನೆಗಳು ಆರಂಭವಾಗಿದೆಯಾದರೂ ಇನ್ನೂ ಅದರ ಬಗ್ಗೆ ನಿರ್ದಿಷ್ಟ ಮಾಹಿತಿಗಳು ಮಾತ್ರ ಲಭ್ಯವಿಲ್ಲ.‌

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here