ಕೊರೋನಾ ವೈರಸ್‌ ಭೀತಿ ರಾಜ್ಯದಲ್ಲಿ ಮಾತ್ರವೇ ಅಲ್ಲ ದೇಶದ ಅನೇಕ ಕಡೆ ಕಾಡುತ್ತಿದೆ. ಈ ರೋಗದ ಭೀತಿ ಇದೀಗ ದಿನವೊಂದಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುವ ಶ್ರೀ ಕ್ಷೇತ್ರ ಎನಿಸಿದ, ತಿರುಪತಿಯ ತಿರುಮಲ ಮೇಲೆ ನೆಲೆಸಿರುವ ಶ್ರೀ ವೆಂಕಟೇಶ್ವರ ಸ್ವಾಮಿ ಸನ್ನಿಧಿಗೂ ತಟ್ಟಿದ್ದು, ಈಗಾಗಲೇ ತಿರುಮಲ ದಲ್ಲಿ ಭಕ್ತರ ದಟ್ಟಣೆ ಕೂಡಾ ಕಡಿಮೆ ಇದ್ದು, ಕೊರೋನಾ ವೈರಸ್ ಭೀತಿಯ ಹಿನ್ನೆಲೆಯಲ್ಲಿ ಆಲಯದಲ್ಲಿ ನಡೆಯುವ ಕೆಲವೊಂದು ನಿತ್ಯ ಪೂಜಾ ಸೇವೆಗಳು ಹಾಗೂ ಸಾಪ್ತಾಹಿಕ ಪೂಜಾ ಸೇವೆಗಳನ್ನು ಕೈಬಿಡಲು ತಿರುಪತಿ-ತಿರುಮಲ ದೇವಸ್ಥಾನ ಸಮಿತಿಯು (ಟಿಟಿಡಿ) ನಿರ್ಧರವೊಂದನ್ನು ಮಾಡಿದೆ.

ತಿರುಮಲದಲ್ಲಿ ನೆಲೆಸಿರುವ ಶ್ರೀ ವೆಂಕಟೇಶ್ವರನ ಆಲಯವು ಕ್ರಿ.ಶ. 300 ನೇ ಇಸವಿಯಲ್ಲಿ ನಿರ್ಮಾಣವಾಗಿದ್ದು ಎಂಬುದು ಸ್ಥಳ ಇತಿಹಾಸವಾಗಿದ್ದು, ಶತಮಾನಗಳ ಕಾಲದಿಂದಲೂ ನಿರ್ವಿಘ್ನವಾಗಿ ಪೂಜಾ ಕೈಂಕರ್ಯಗಳು ನಡೆದು ಬರುತ್ತಿದ್ದು, ಇದೀಗ ಕೊರೊನಾ ಭೀತಿಯ ಕಾರಣದಿಂದ ದೇವಾಲಯದಲ್ಲಿ ಪೂಜಾ ವಿಧಾನದಲ್ಲಿ ಇಂಥಹುದೊಂದು ಕ್ರಮ ಜರುಗಿಸಲು ಮುಂದಾಗಿದೆ ದೇವಾಲಯದ ಆಡಳಿತ ಮಂಡಳಿ. ಈ ವಿಷಯವಾಗಿ ದೇವಾಲಯದ ಆಡಳಿತ ಮಂಡಳಿಯು ಸುದ್ದಿಗಾರರಿಗೆ ಮಾಹಿತಿ ನೀಡಿದೆ.

ಸುದ್ದಿಗಾರರ ಜತೆ ಮಾತನಾಡಿದ ಟಿಟಿಡಿ ಯ ಕಾರ್ಯ ಕನಿರ್ವಾಹಕ ಅಧಿಕಾರಿ ಅನಿಲ್‌ ಕುಮಾರ್‌ ಸಿಂಘಲ್‌, ಅವರು ಮಾತನಾಡುತ್ತಾ ತಿರುಮಲ ವೆಂಕಟೇಶ್ವರ ಸನ್ನಿಧಾನದಲ್ಲಿ ‘ಪ್ರತಿ ಬುಧವಾರ ನಡೆಯುವ ಸಹಸ್ರ ಕಲಶಾಭಿಷೇಕ, ಹಾಗೂ ಸೋಮವಾರದ ವಿಶೇಷ ಪೂಜೆ ಹಾಗೂ ನಿತ್ಯದ ವಸಂತೋತ್ಸವವನ್ನು ಅನಿರ್ದಿಷ್ಟ ಅವಧಿಯವರೆಗೆ ರದ್ದುಗೊಳಿಸಿರುವುದಾಗಿ ಅವರು ಮಾಹಿತಿ ನೀಡಿದ್ದು, ಆದರೆ ಆಲಯದಲ್ಲಿ ದೇವರ ಉತ್ಸವ ಮಾತ್ರ ಎಂದಿನಂತೆ ಇರುತ್ತದೆ ಎಂದು ಹೇಳಿದ್ದಾರೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here