ಆಂಧ್ರದಲ್ಲಿ ಪ್ರಭುತ್ವ ಬದಲಾಗಿದ್ದು, ಈ ಹಿನ್ನೆಲೆಯಲ್ಲಿ ಜಗನ್ ಮೋಹನ್ ರೆಡ್ಡಿ ಯವರ ನೂತನ ಸರ್ಕಾರ ಟಿಟಿಡಿ ಅಧ್ಯಕ್ಷರನ್ನು ಕೂಡಾ ಬದಲಾವಣೆ ಮಾಡಲಾಗುವುದು , ಜಗನ್ ರೆಡ್ಡಿ ಅವರ ಸಂಬಂಧಿ ಹಾಗೂ ಮಾಜಿ ಸಂಸದರಾದ ವೈ.ವಿ.ಸುಬ್ಬಾರೆಡ್ಡಿಯವರನ್ನು ನೂತನ ಚೇರ್ಮನ್ ಆಗಿ ನೇಮಕ ಮಾಡಲಾಗುವುದು ಎಂದು ಕೂಡಾ ಹೇಳಲಾಗುತ್ತಿದೆ. ಈ ವದಂತಿಗಳ ಹಿನ್ನೆಲೆಯಲ್ಲಿಯೇ ಇನ್ನೊಂದು ಸುದ್ದಿ ಹೊರಬಿದ್ದಿದ್ದು ಇನ್ಫೋಸಿಸ್ ಫೌಂಡೇಶನ್ ನ ಸುಧಾಮೂರ್ತಿ ಅವರು ತಮ್ಮ ಟಿಟಿಡಿ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಈ ವಿಷಯವನ್ನು ಸ್ವತಃ ಅವರೇ ಸ್ಪಷ್ಟೀಕರಿಸಿದ್ದಾರೆ. ಸುಧಾ ಮೂರ್ತಿ ಅವರು ತಮ್ಮ ರಾಜೀನಾಮೆಗೆ ಕಾರಣ ನೀಡಿದ್ದಾರೆ.

ಅವರನ್ನು ಟಿಟಿಡಿ ಸದಸ್ಯರನ್ನಾಗಿ ನೇಮಕ ಮಾಡಿದ್ದು ಹಿಂದಿನ ಸರ್ಕಾರ. ಇದೀಗ ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದಿರುವುದರಿಂದ, ಸದಸ್ಯಳಾಗಿ ಮುಂದುವರೆಯುವುದು ಸರಿಯಲ್ಲ ಎಂಬ ಭಾವನೆಯಿಂದ ರಾಜೀನಾಮೆ ನೀಡಿರುವುದಾಗಿ ಹೇಳಿರುವ ಅವರು, ಹೊಸ ಸರ್ಕಾರಕ್ಕೂ ಕೂಡಾ ಅವರನ್ನು ಸದಸ್ಯರನ್ನಾಗಿ ಮಾಡುವ ಇಚ್ಚೆ ಇದ್ದು ಅವಕಾಶ ನೀಡಿದರೆ, ತಾವು ಮತ್ತೊಮ್ಮೆ ಟಿಟಿಡಿಯ ಸದಸ್ಯರಾಗಿ ಕಾರ್ಯ ನಿರ್ವಹಿಸಲು ಸಿದ್ಧರಿದ್ದು, ಮತ್ತೆ ಸಂತೋಷದಿಂದ ಬೋರ್ಡ್ ಗೆ ಸೇರಲು ಇಷ್ಟ ಪಡುತ್ತೇನೆ ಎಂದು ಅವರು ಹೇಳಿದ್ದಾರೆ.ಅವರು ಟಿಟಿಡಿ ಬೋರ್ಡಿಗೆ ರಾಜೀನಾಮೆ ನೀಡಿದ ವಿಷಯ ಬಹುಬೇಗ ಸಾಮಾಜಿಕ ಜಾಲತಾಣಗಳಲ್ಲಿ ಹರಡಿ ಚರ್ಚಿತವಾಗಿತ್ತು.

2017 ರಲ್ಲಿ ಎರಡು ತಿಂಗಳ ಅವಧಿಗೆ, ಅನಂತರ 2108 ಎಲ್ಲಿ ಮತ್ತೊಮ್ಮೆ ಅವರನ್ನು ಟಿಟಿಡಿ ಬೋರ್ಡ್ ನ ಸದಸ್ಯರನ್ನಾಗಿ ಮಾಡಲಾಗಿತ್ತು. ಟಿಟಿಡಿ ಬೋರ್ಡ್ ರಾಜಕಾರಣದಲ್ಲಿ ವಿಫಲರಾದವರಿಗೆ ಮೀಸಲು ಎಂಬ ಕೂಗು ಕೇಳಿ ಬಂದಿದ್ದರಿಂದ ಬೋರ್ಡ್‌ ನ ಜನಪ್ರಿಯತೆ ಉಳಿಸಲು ಹಾಗೂ ಅವರ ಘನತೆಯ ದೃಷ್ಟಿಯಿಂದ ಚಂದ್ರ ಬಾಬು ನಾಯ್ಡು ಅವರು ಸುಧಾ ಮೂರ್ತಿ ಅವರನ್ನು ಸದಸ್ಯ ರನ್ನಾಗಿ ನೇಮಕ ಮಾಡಿದ್ದರು. ಸದ್ಯಕ್ಕಂತೂ ಸುಧಾ ಮೂರ್ತಿ ಅವರು ಅತ್ಯಂತ ಶ್ರೀಮಂತ ಮಂದಿರವಾದ ತಿರಮಲ ಶ್ರೀ ವೆಂಕಟೇಶ್ವರ ನ ಆಲಯದ ಬೋರ್ಡ್ ಸದಸ್ಯ ಸ್ಥಾನದಿಂದ ಹೊರಬಂದಿರುವುದು ಖಚಿತವಾಗಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here