ಇಂದು ಹೊನ್ನಾಳಿಯಲ್ಲಿ ಮೂರು ದಿನಗಳ ರಾಜ್ಯಮಟ್ಟದ ಕೃಷಿಮೇಳ ಅದ್ದೂರಿಯಾಗಿ  ಉದ್ಘಾಟನೆಗೊಂಡಿದೆ. ರಾಜ್ಯಮಟ್ಟದ ಕೃಷಿ ಮೇಳ ಕಾರ್ಯಕ್ರಮಕ್ಕೆ ದೇಶ ಹಾಗೂ ರಾಜ್ಯದ ಗಣ್ಯಾತಿಗಣ್ಯರು ಆಗಮಿಸಿ ಕಾರ್ಯಕ್ರಮದ ಕಳೆ ಹೆಚ್ಚಿಸಿದ್ದಾರೆ. ಅಂತರಾಷ್ಟ್ರೀಯ ಯೋಗ ಗುರು ಬಾಬಾ ರಾಮದೇವ್ ಮತ್ತು ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಸೇರಿದಂತೆ ಬಿಎಸ್ ವೈ ಪುತ್ರ ಬಿ ವೈ ರಾಘವೇಂದ್ರ ,  ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ಸೇರಿ ಹಲವಾರು ಗಣ್ಯರು ಉಪಸ್ಥಿತರಿದ್ದರು. ಚಂದ್ರ ಸ್ಮರಣೆ ಉದ್ಘಾಟನೆ ಮಾಡಿದ ಬಾಬಾ ರಾಮದೇವ್ ಅವರು ಕಾರ್ಯಕ್ರಮದಲ್ಲಿ ಯೋಗ ಮಾಡುವ ಮೂಲಕ ಗಮನಸೆಳೆದರು.

 

ಬಾಬಾ ರಾಮದೇವ್ ಅವರ ಜೊತೆಗೆ ನಟ ಡಾಕ್ಟರ್ ಶಿವರಾಜ್ ಕುಮರ್, ಬಿ ವೈ ರಾಘವೇಂದ್ರ, ಎಂಪಿ ರೇಣುಕಾಚಾರ್ಯ ಯೋಗ ಮಾಡಿದ್ದು ವಿಶೇಷವಾಗಿತ್ತು. ಇನ್ನು ಈ ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತ ಬಂಧುಗಳು ಭಾಗವಹಿಸಿದ್ದರು. ವಿವಿಧ ಮಠಾಧೀಶರು ಪಾಲ್ಗೊಂಡ ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ ಬಾಬಾರಾಮದೇವ್ ಮತ್ತು ಶಿವರಾಜಕುಮಾರ್.

ಮತ್ತೊಂದು ವಿಶೇಷವೆಂದರೆ ಬಾಬಾರಾಮದೇವ್ ಪಕ್ಕದಲ್ಲಿ ಶಿವರಾಜ್ ಕುಮಾರ್ ಅವರು ತಮಗೆ ಮೀಸಲಿದ್ದ ಹಾಸನದಲ್ಲಿ ಕೂರದೆ ಕೆಳಗಡೆ ಕೋರುವ ಮೂಲಕ ವೇದಿಕೆಯಲ್ಲಿದ್ದ ಗಣ್ಯರಿಗೆ ಗೌರವ ತೋರಿದ್ದು ವಿಶೇಷವಾಗಿತ್ತು.

 

 

 

 

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here