ರಾಜ್ಯದಲ್ಲಿ ಮೈತ್ರಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ನಡೆದಂತಹ ರಾಜಕೀಯ ಹಗ್ಗ ಜಗ್ಗಾಟಗಳು , ಅಧಿಕಾರದ ಚುಕ್ಕಾಣಿ ಹಿಡಿಯಲು ರಾಜಕೀಯ ಪಕ್ಷಗಳು ಒಬ್ಬರ ಮೇಲೆ ಮತ್ತೊಬ್ಬರು ದೋಷಾರೋಪಗಳನ್ನು ಮಾಡಿದ್ದು, ಪ್ರತಿ ದಿನವೂ ಯಾವುದಾದರೊಂದು ರಾಜಕೀಯ ಬೆಳವಣಿಗೆ, ವಿವಾದ , ಹೇಳಿಕೆ, ಆರೋಪ ಹೀಗೆ ರಾಜ್ಯದ ರಾಜಕಾರಣವು ಯಾವುದೋ ದಿಕ್ಕಿನೆಡೆ ಓಡುತ್ತಿತ್ತು. ಆಗ ಮೈತ್ರಿ ಸರ್ಕಾರದ ಪತನದ ಬಗ್ಗೆ ನಡೆದಂತಹ ಪ್ರಹಸನವು ದೇಶ ವ್ಯಾಪಿ ಚರ್ಚೆಗೆ ಗ್ರಾಸವಾಯಿತು. ಎಲ್ಲೆಲ್ಲೂ ಇದೇ ಸದ್ದು ಸುದ್ದಿಯಾಯಿತು. ಸರ್ಕಾರದ ಅಸ್ತಿತ್ವ ಅಲುಗಾಡಿತು.

ಕಡೆಗೆ ಕೆಲವು ಶಾಸಕರಿಂದ ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಮೈತ್ರಿ ಸರ್ಕಾರ ಪತನವಾಗಿ ಹೋಯಿತು. ಬಿಜೆಪಿ ಅಧಿಕಾರವನ್ನು ಪಡೆದು ಹೊಸ ಸರ್ಕಾರ ರಚನೆಯಾಯಿತು‌. ಆದರೆ ಅಲ್ಲಿಗೆ ಈ ರಾಜಕೀಯ ಬೆಳವಣಿಗೆ ಮುಗಿಯಲಿಲ್ಲ. ಮೈತ್ರಿ ಸರ್ಕಾರದ ಪತನಕ್ಕೆ ಕಾರಣರಾಗಿ ಮತ್ತು ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೇರಲು ಪ್ರಮುಖ ಕಾರಣರೆನ್ನಿಸಿಕೊಂಡ ಶಾಸಕರನ್ನು ಮಾಜಿ ಸ್ಪೀಕರ್​ಅವರು ಅನರ್ಹತೆಗೊಳಿಸಿದಾಗ ಅದರ ವಿರುದ್ಧ ಶಾಸಕರು ಸುಪ್ರೀಂ ಕೋರ್ಟ್ ಮೊರೆ ಹೋದರು. ಈ ಅನರ್ಹ ಶಾಸಕರ ಭವಿಷ್ಯ ಏನಾಗಲಿದೆ ಎಂದು ಇಂದು ನಿರ್ಧಾರವಾಗಲಿದೆ.

ತಮ್ಮ ಅನರ್ಹತೆಯನ್ನು ಪ್ರಶ್ನಿಸಿ ಅನರ್ಹ ಶಾಸಕರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಇದೇ ಡಿಸೆಂಬರ್​ನಲ್ಲಿ ನಡೆಯಲಿರುವ ಉಪಚುನಾವಣೆಯಲ್ಲಿ ತಮಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕೆಂದು ಅವರು ಸುಪ್ರೀಂ ಕೋರ್ಟ್ ಮುಂದೆ ಮನವಿಯನ್ನು ಮಾಡಿದ್ದಾರೆ. ಈ ವಿಚಾರವಾಗಿ ಇಂದು ಸುಪ್ರೀಂ ಕೋರ್ಟ್ ತನ್ನ ತೀರ್ಪನ್ನು ಹೊರಡಿಸಲಿದ್ದು, ತೀರ್ಪಿನ ನಂತರ ರಾಜ್ಯದ ಅನರ್ಹ ಶಾಸಕರು ಬೈ ಎಲೆಕ್ಷನ್​ಗೆ ತಾವು ಸ್ಪರ್ಧಿಸಲು ಅರ್ಹತೆ ಪಡೆಯುವರೋ ? ಇಲ್ಲವೋ ? ಎಂಬುದು ನಿರ್ಧಾರಿತವಾಗಲಿದೆ.

ಸುದ್ದಿಮನೆ ವಿಷಯಗಳು ಅಧಿಕೃತವಾಗಿ ಕಾಪಿ ರೈಟ್ಸ್ ಗೆ ಒಳಪಟ್ಟಿರುತ್ತವೆ. ಯಾರಾದರೂ ಕದ್ದಲ್ಲಿ ಅಥವಾ ಕಾಪಿ ಪೇಸ್ಟ್ ಮಾಡಿದ್ದಲ್ಲಿ ಕಾನೂನಾತ್ಮಕ ಕ್ರಮ ಜರುಗಿಸಲಾಗುವುದು.

LEAVE A REPLY

Please enter your comment!
Please enter your name here